ಕರ್ನಾಟಕ

karnataka

ETV Bharat / state

ನಕಲಿ ದಾಖಲೆ ಸೃಷ್ಟಿಸಿ ವಾಹನ ಮಾರಾಟ: ಇಬ್ಬರ ಬಂಧನ, 2.5 ಕೋಟಿ ಮೌಲ್ಯದ 17 ಕಾರುಗಳು ವಶಕ್ಕೆ - Two Arrested - TWO ARRESTED

ನಕಲಿ ದಾಖಲೆ ಮತ್ತು ನೋಂದಣಿ ಸಂಖ್ಯೆ ಸೃಷ್ಟಿಸಿ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, 2.5 ಕೋಟಿ ಮೌಲ್ಯದ 17 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಕಾರುಗಳ ಮಾರಾಟ
ನಕಲಿ ದಾಖಲೆ ಸೃಷ್ಟಿಸಿ ಕಾರುಗಳ ಮಾರಾಟ (ETV Bharat)

By ETV Bharat Karnataka Team

Published : Jul 16, 2024, 5:13 PM IST

ಬೆಂಗಳೂರು: ನಕಲಿ ದಾಖಲೆ ಮತ್ತು ನೋಂದಣಿ ಸಂಖ್ಯೆ ಸೃಷ್ಟಿಸಿ ಕಾರುಗಳನ್ನು ಮಾರಾಟ ಮಾಡುವ ಮೂಲಕ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಬಯಲಿಗೆಳೆದಿರುವ ಸಿಸಿಬಿಯ ಪಶ್ಚಿಮ ವಿಭಾಗದ ಸಂಘಟಿತ ಅಪರಾಧ ದಳದ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಸೈಯ್ಯದ್ ರಿಯಾಜ್ ಹಾಗೂ ಆಸ್ಟಿನ್ ಕಾರ್ಡೋಸ್ ಬಂಧಿತ ಆರೋಪಿಗಳು.

ಅನ್ಯ ರಾಜ್ಯಗಳಲ್ಲಿ ಕದ್ದ ಕಾರುಗಳಿಗೆ ನಕಲಿ ನೋಂದಣಿ ಸಂಖ್ಯೆ, ದಾಖಲೆಗಳನ್ನ ಸೃಷ್ಟಿಸುತ್ತಿದ್ದ ಆರೋಪಿಗಳು ಅವುಗಳನ್ನ ಮಾರಾಟ ಮಾಡುತ್ತಿದ್ದರು. ಅದೇ ರೀತಿ ಬ್ಯಾಂಕ್‌ನಲ್ಲಿ ಪಡೆದ ಲೋನ್ ಮರುಪಾವತಿಸಲಾಗದವರಿಂದ ಕಾರುಗಳನ್ನು ಅಡಮಾನವಿರಿಸಿಕೊಳ್ಳುತ್ತಿದ್ದ ಆರೋಪಿಗಳು, ಬಳಿಕ ಲೋನ್ ಮರುಪಾವತಿಯಾಗಿರುವಂತೆ ಎನ್ಓಸಿ ಸಿದ್ಧಪಡಿಸಿ‌ ಅವುಗಳನ್ನು ಇತರರಿಗೆ ಮಾರಾಟ ಮಾಡುತ್ತಿದ್ದರು. ಇನ್​ಸ್ಟಾಗ್ರಂ, ಫೇಸ್‌ಬುಕ್‌ ವಿಡಿಯೋಗಳ ಮೂಲಕ ಖರೀದಾರರನ್ನ ಸೆಳೆಯುತ್ತಿದ್ದ ಆರೋಪಿಗಳು, ಇದುವರೆಗೆ 40ಕ್ಕೂ ಅಧಿಕ ಕಾರುಗಳನ್ನು ಇದೇ ಮಾದರಿಯಲ್ಲಿ ಮಾರಾಟ ಮಾಡಿದ್ದರು ಎಂದು ಪೊಲೀಸರು ವಿವರಿಸಿದರು.

ಬಂಧಿತ ಆರೋಪಿಗಳಿಂದ ಸದ್ಯ ಇನ್ನೋವಾ ಫಾರ್ಚೂನರ್, ಮಹೀಂದ್ರಾ ಜೀಪ್, ಹ್ಯೂಂಡೈ ಕ್ರೆಟಾ ಸೇರಿದಂತೆ 2.5 ಕೋಟಿ ಮೌಲ್ಯದ 17 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಸ್ವಗ್ರಾಮದಲ್ಲೇ ಕಳ್ಳತನಕ್ಕಿಳಿದ್ದ 6 ಖದೀಮರ ಸೆರೆ; 10 ಬೈಕ್​, 2 ಟ್ರ್ಯಾಕ್ಟರ್ ಸೇರಿ 14 ಲಕ್ಷ ಮೌಲ್ಯದ ಸ್ವತ್ತು ಜಪ್ತಿ - Vehicle Thieves Arrested

ABOUT THE AUTHOR

...view details