ಕರ್ನಾಟಕ

karnataka

ETV Bharat / state

ಶೆಟ್ಟರ್ ಮನೆಯಲ್ಲಿ ಮತ್ತೆ ಸ್ಥಾನ ಪಡೆದ ಬಿಜೆಪಿ ನಾಯಕರ ಫೋಟೋಗಳು - ಮಾಜಿ ಸಿಎಂ ಜಗದೀಶ್ ಶೆಟ್ಟರ್

ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಪುನಃ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ ನಾಯಕರ ಜೊತೆಗಿನ ಫೋಟೋಗಳು ಮತ್ತೆ ಅವರ ಮನೆಯ ಗೋಡೆಯಲ್ಲಿ ಕಾಣಿಸಿಕೊಂಡಿವೆ.

ಶೆಟ್ಟರ್ ಮನೆಯಲ್ಲಿ ಮತ್ತೆ ಸ್ಥಾನ ಪಡೆದ ಬಿಜೆಪಿ ನಾಯಕರ ಫೋಟೋಗಳು
ಶೆಟ್ಟರ್ ಮನೆಯಲ್ಲಿ ಮತ್ತೆ ಸ್ಥಾನ ಪಡೆದ ಬಿಜೆಪಿ ನಾಯಕರ ಫೋಟೋಗಳು

By ETV Bharat Karnataka Team

Published : Jan 25, 2024, 6:02 PM IST

ಶೆಟ್ಟರ್ ಮನೆಯಲ್ಲಿ ಮತ್ತೆ ಸ್ಥಾನ ಪಡೆದ ಬಿಜೆಪಿ ನಾಯಕರ ಫೋಟೋಗಳು

ಹುಬ್ಬಳ್ಳಿ : ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಯಲ್ಲಿ ಏಕಾಏಕಿ ಬಿಜೆಪಿ ಜೊತೆಗಿನ ಒಡನಾಟದ ಫೋಟೋಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ಬಿಜೆಪಿಗೆ ಪುನರ್ ಸೇರ್ಪಡೆಯಾದ ಬೆನ್ನಲ್ಲೇ ಎಲ್ಲಾ ಫೋಟೋಗಳು ಗೋಡೆಯ ಮೇಲೆ ಮತ್ತೆ ಕಾಣಿಸಿಕೊಂಡಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಜೊತೆಗಿನ ಫೋಟೋಗಳನ್ನು ಮತ್ತೆ ಗೋಡೆ ಮೇಲೆ ಹಾಕಲಾಗಿದೆ. ಬಿಜೆಪಿಯಿಂದ ಮನನೊಂದು ಕಾಂಗ್ರೆಸ್ ಸೇರಿದ್ದ ಶೆಟ್ಟರ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಎಲ್ಲಾ ಫೋಟೋ ತೆರವು ಮಾಡಿದ್ದರು. ಆದರೆ ಈಗ ಮತ್ತೆ ಫೋಟೋ ಸೆಟ್ ಗೋಡೆ ಏರಿದ್ದು, ಕಾರ್ಯಕರ್ತರಲ್ಲಿ ಹುರುಪು ದುಪ್ಪಟ್ಟಾಗಿದೆ. ಮೂಲೆ ಸೇರಿದ್ದ ಫೋಟೋಗಳು ಈಗ ಮುನ್ನೆಲೆಗೆ ಬಂದಿರುವುದು ರಾಜಕೀಯ ಬದಲಾವಣೆಗೆ ಹೊಸ ಅರ್ಥವನ್ನು ಕಲ್ಪಿಸುತ್ತಿವೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಅವರ ನಿವಾಸದ ಬಳಿಯಿಂದು ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಇದೇ ವೇಳೆ ಶೆಟ್ಟರ್ ಅವರ ಭಾವಚಿತ್ರ ಹಿಡಿದು ಸಿಹಿ ಹಂಚುವ ‌ಮೂಲಕ ಸಂಭ್ರಮಾಚರಣೆ ಮಾಡಿದ ಕಾರ್ಯಕರ್ತರು, ಜಗದೀಶ್ ಶೆಟ್ಟರ್ ಅವರಿಗೆ ಜಯವಾಗಲಿ, ಜೈ ಶ್ರೀರಾಮ ಎಂಬ ಜಯಘೋಷಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಅವರ ಬೆಂಬಲಿಗರಾದ ನಾಗೇಶ್ ಕಲಬುರಗಿ, ಮಲ್ಲಿಕಾರ್ಜುನ ಸಾಹುಕಾರ್, ಶಿವಾನಂದ ಮುತ್ತಣ್ಣವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:ಇಷ್ಟು ದಿನ ಸಹಕರಿಸಿದ್ದಕ್ಕೆ ಧನ್ಯವಾದ: ಬಿಜೆಪಿಗೆ ಸೇರ್ಪಡೆ ಮುನ್ನ ಡಿಕೆಶಿಗೆ ಶೆಟ್ಟರ್​ ರಾಜೀನಾಮೆ ಪತ್ರ ರವಾನೆ

ABOUT THE AUTHOR

...view details