ಬೆಂಗಳೂರು: ಯುವತಿಯ ಫೋನ್ ನಂಬರನ್ನು ಕಾಲ್ ಗರ್ಲ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ಪಿಜಿಯೊಂದರ ವ್ಯವಸ್ಥಾಪಕನನ್ನು ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶೇಷಾದ್ರಿಪುರಂ ಪಿಜಿಯಲ್ಲಿ ರೂಮ್ ಪಡೆದಿದ್ದ 25 ವರ್ಷದ ಯುವತಿ, ನಂತರ ಅಲ್ಲಿನ ವ್ಯವಸ್ಥೆ ಇಷ್ಟವಾಗದೇ ಉಳಿದುಕೊಳ್ಳಲು ಹಿಂದೇಟು ಹಾಕಿದ್ದಳು. ಅಡ್ಮಿಶನ್ ಕ್ಯಾನ್ಸಲ್ ಮಾಡಿಕೊಂಡಿದ್ದ ಯುವತಿ, ಗೂಗಲ್‌ನಲ್ಲಿ ಪಿಜಿಯ ಅವ್ಯವಸ್ಥೆಯ ಕುರಿತು ನೆಗೆಟಿವ್ ರಿವ್ಯೂ ಬರೆದಿದ್ದಳು. ಇದರಿಂದ ಕೋಪಗೊಂಡಿದ್ದ ವ್ಯವಸ್ಥಾಪಕ ಆನಂದ್ ಶರ್ಮಾ, ಆಕೆಯ ಫೋನ್ ನಂಬರನ್ನು ಕೆಲವು ಕಾಲ್ ಗರ್ಲ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾನೆ.