ಕರ್ನಾಟಕ

karnataka

ಮಂಗಳೂರು: ಪ್ರಯಾಣಿಕನಿಗೆ ಹೃದಯಾಘಾತ; ಚಾಲಕ ಆಸ್ಪತ್ರೆಗೇ ಬಸ್ ತಂದರೂ ಫಲಿಸದ ಶ್ರಮ - Heart Attack

By ETV Bharat Karnataka Team

Published : Aug 5, 2024, 10:38 PM IST

ಪ್ರಯಾಣಿಸುತ್ತಿದ್ದಾಗ ಬಸ್​ನಲ್ಲೇ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.

heart attack
ಖಾಸಗಿ ಬಸ್‌ (ETV Bharat)

ಮಂಗಳೂರು:ಮಂಗಳೂರು-ಉಡುಪಿ ನಡುವೆ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್ ಬಸ್‌‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೋಮವಾರ ಮುಕ್ಕದಲ್ಲಿ ನಡೆದಿದೆ. ಮಂಗಳೂರು ಜೆಪ್ಪು ಗುಜ್ಜನಕೆರೆ ನಿವಾಸಿ ಬಿ.ವಿಜಯ ಕುಮಾರ್‌ (62) ಮೃತಪಟ್ಟವರು.

ವಿಜಯ ಕುಮಾರ್‌ ಅವರು ಕೊಟ್ಟಾರ ಚೌಕಿಯಲ್ಲಿ ಮಂಗಳೂರು-ಉಡುಪಿ ನಡುವೆ ಸಂಚರಿಸುವ ವೇಗದೂತ ಪಿರೇರಾ ಬಸ್‌ ಹತ್ತಿದ್ದರು. ಬಸ್‌ ಕೋಡಿಕಲ್ ಕ್ರಾಸ್ ತಲುಪುತ್ತಿದ್ದಂತೆ ಅವರು ಏಕಾಏಕಿ ಅಸ್ವಸ್ಥಗೊಂಡು ಬಿದ್ದರು. ಆಗ ಬಸ್‌ನಲ್ಲಿದ್ದ ಮಣಿಪಾಲದ ನರ್ಸ್‌ವೊಬ್ಬರು ಅವರನ್ನು ಪರೀಕ್ಷಿಸಿದ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಅದರಂತೆ ಚಾಲಕ ಬಸ್ ಅ​​ನ್ನು ಶರವೇಗದಲ್ಲಿ ಚಲಾಯಿಸಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ವ್ಯಕ್ತಿ ಬಸ್‌ನಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. ಬಳಿಕ ಸ್ಥಳಕ್ಕೆ ತೆರಳಿದ್ದ ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಪ್ರಯಾಣದ ವೇಳೆ ಯುವತಿ ಅಸ್ವಸ್ಥ: ಆಸ್ಪತ್ರೆಯತ್ತ ಬಸ್ ಚಲಾಯಿಸಿ ಚಿಕಿತ್ಸೆಗೆ ನೆರವಾದ ಚಾಲಕ, ನಿರ್ವಾಹಕ - Driver Conductor Shows Humanity

ABOUT THE AUTHOR

...view details