ಮುಂಬೈ(ಮಹಾರಾಷ್ಟ್ರ): ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಯು ಅಭೂತಪೂರ್ವ ಜಯ ಸಾಧಿಸಿದೆ. ಶನಿವಾರ (ನವೆಂಬರ್ 23) ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು 288 ವಿಧಾನಸಭಾ ಸ್ಥಾನಗಳ ಪೈಕಿ 234 ರಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್), ಶಿವಸೇನೆ (ಉದ್ಧವ್ ಠಾಕ್ರೆ) ಬಣ ಸೇರಿದಂತೆ ಉಳಿದವರಿಗೆ 50 ಸ್ಥಾನಗಳು ಸಿಕ್ಕಿವೆ.
ಬಿಜೆಪಿ 132, ಏಕನಾಥ್ ಶಿಂಧೆ ಅವರ ಶಿವಸೇನೆ 57 ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು 41 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಯ ಭಾಗವಾಗಿರುವ ಉದ್ಧವ್ ಠಾಕ್ರೆ ಬಣದ ಶಿವಸೇನೆ ಅತಿ ಹೆಚ್ಚು ಅಂದರೆ 20 ಸ್ಥಾನ ಗೆದ್ದಿದೆ. ಕಾಂಗ್ರೆಸ್ 16, ಶರದ್ ಪವಾರ್ ಅವರ ಎನ್‌ಸಿಪಿ ಕೇವಲ 10 ಸ್ಥಾನ ಗೆದ್ದಿದೆ. ಸದ್ಯ ಮಹಾಯುತಿ ಮೈತ್ರಿಕೂಟ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದೆ.
ವಿಶೇಷ ಎಂದರೆ ಈ ಚುನಾವಣೆಯಲ್ಲಿ ಒಟ್ಟು 15 ಮಂದಿ ಅಭ್ಯರ್ಥಿಗಳು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇದರ ಬಿಜೆಪಿಯ 8, ಎನ್ಸಿಪಿಯ 4 ಮತ್ತು ಶಿವಸೇನೆಯ 3 ಅಭ್ಯರ್ಥಿಗಳು ಸೇರಿದ್ದಾರೆ. ಶಿರಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಶಿರಾಮ್ ವೆಚನ್ ಪವಾರ ಅವರು ಅತೀ ಹೆಚ್ಚು ಅಂದರೆ 1,45,944 ಮತಗಳ ಅಂತರದಿಂದ ಗೆಲುವು ಸಾಧಿಸಿ ಈ ಚುನಾವಣೆಯಲ್ಲಿ ದಾಖಲೆ ನಿರ್ಮಿಸಿದ್ದಾರೆ. ಸತಾರಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶಿವೇಂದ್ರರಾಜೇ ಭೋಸ್ಲೆ ಅವರು 1,42,124 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಎರಡನೇ ಅಭ್ಯರ್ಥಿಯಾಗಿದ್ದಾರೆ.
ಯಾರ ವಿರುದ್ಧ ಯಾರು ಅತೀ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ: ಶಿರ್ಪುರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಶಿರಾಮ್ ವೆಚನ್ ಪವಾರ 1,45,944 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ಡಾ.ಜಿತೇಂದ್ರ ಯುವರಾಜ್ ಠಾಕೂರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಸತಾರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವೇಂದ್ರರಾಜೇ ಭೋಸ್ಲೆ 1,42,124 ಮತಗಳ ಅಂತರದಿಂದ ಶಿವಸೇನೆ (ಉದ್ಧವ್ ಠಾಕ್ರೆ ಬಣ)ಅಭ್ಯರ್ಥಿ ಅಮಿತ್ ಗೆನುಜಿ ಕದಮ್ ವಿರುದ್ಧ ಗೆದ್ದು ಬೀಗಿದ್ದಾರೆ.
ಪರ್ಲಿ ಕ್ಷೇತ್ರದ ಎನ್‌ಸಿಪಿ ಅಭ್ಯರ್ಥಿ ಧನಂಜಯ್ ಮುಂಡೆ 1,40,224 ಮತಗಳ ಅಂತರದಿಂದ ಎನ್‌ಸಿಪಿ( ಶರದ್ ಪವಾರ್ ಬಣ) ಅಭ್ಯರ್ಥಿ ರಾಜೇಸಾಹೇಬ್ ಶ್ರೀಕಿಶನ್ ದೇಶಮುಖ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಬಾಗ್ಲಾನ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿಲೀಪ್ ಮಂಗ್ಲು ಬೊರ್ಸೆ 1,29,297 ಮತಗಳ ಅಂತರದಿಂದ ಎನ್‌ಸಿಪಿ( ಶರದ್ ಪವಾರ್ ಬಣ) ಅಭ್ಯರ್ಥಿ ಚವಾನ್ ದೀಪಿಕಾ ಸಂಜಯ್ ವಿರುದ್ಧ ಜಯ ಗಳಿಸಿದ್ದಾರೆ.
ಕೋಪರಗಾಂವ್ ಕ್ಷೇತ್ರದ ಎನ್‌ಸಿಪಿ ಅಭ್ಯರ್ಥಿ ಅಶುತೋಷ್ ಅಶೋಕರಾವ್ ಕಾಳೆ 1,24,624 ಮತಗಳ ಅಂತರದಿಂದ ಎನ್‌ಸಿಪಿ( ಶರದ್ ಪವಾರ್ ಬಣ) ಅಭ್ಯರ್ಥಿ ವರ್ಪೆ ಸಂದೀಪ್ ಗೋರಕ್ಷಣಾತ್ ವಿರುದ್ಧ ಗೆಲುವು ಸಾಧಿಸಿದರು. ಕೊಪ್ರಿ - ಪಚ್ಪಖಾಡಿ ಕ್ಷೇತ್ರ ಶಿವಸೇನೆ ಅಭ್ಯರ್ಥಿ ಏಕನಾಥ್ ಶಿಂಧೆ 1,20,717 ಶಿವಸೇನೆ (ಉದ್ಧವ್ ಠಾಕ್ರೆ ಬಣ)ಅಭ್ಯರ್ಥಿ ಕೇದಾರ ಪ್ರಕಾಶ್ ದಿಘೆ ವಿರುದ್ಧ ಜಯ ಸಾಧಿಸಿದ್ದಾರೆ.
ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ಕ್ಷೇತ್ರ | ಹೆಚ್ಚು ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿ | ಪಕ್ಷ | ಮತಗಳ ಅಂತರ |
ಶಿರ್ಪುರ್ | ಕಾಶಿರಾಮ್ ವೆಚನ್ ಪವಾರ | ಬಿಜೆಪಿ | 1,45,944 |
ಸತಾರಾ | ಶಿವೇಂದ್ರರಾಜೇ ಭೋಸ್ಲೆ | ಬಿಜೆಪಿ | 1,42,124 |
ಪರ್ಲಿ | ಧನಂಜಯ್ ಮುಂಡೆ | ಎನ್‌ಸಿಪಿ | 1,40,224 |
ಬಾಗ್ಲಾನ್ | ದಿಲೀಪ್ ಮಂಗ್ಲು ಬೊರ್ಸೆ | ಬಿಜೆಪಿ | 1,29,297 |
ಕೋಪರಗಾಂವ್ | ಅಶುತೋಷ್ ಅಶೋಕರಾವ್ ಕಾಳೆ | ಎನ್‌ಸಿಪಿ | 1,24,624 |
ಕೊಪ್ರಿ - ಪಚ್ಪಖಾಡಿ | ಏಕನಾಥ್ ಶಿಂಧೆ | ಶಿವಸೇನೆ | 1,20,717 |
ನಾಗ್ಪುರ ಪೂರ್ವ | ಖೋಪ್ಡೆ ಕೃಷ್ಣ ಪಂಚಮ್ | ಬಿಜೆಪಿ | 1,15,288 |
ಕೊತ್ರುದ್ | ಚಂದ್ರಕಾಂತ್ ಪಾಟೀಲ್ | ಬಿಜೆಪಿ | 1,12,041 |
ಮಾವಲ್ | ಸುನಿಲ್ ಶಂಕರರಾವ್ ಶೆಲ್ಕೆ | ಎನ್‌ಸಿಪಿ | 1,08,565 |
ಓವಾಲಾ- ಮಾಜಿವಾಡ | ಪ್ರತಾಪ್ ಬಾಬುರಾವ್ ಸರ್ನಾಯಕ್ | ಶಿವಸೇನೆ | 1,08,158 |
ಮೆಲ್ಘಾಟ್ | ಕೇವಲ್ರಾಮ್ ತುಳಸಿರಾಮ್ ಕಾಳೆ | ಬಿಜೆಪಿ | 1,06,859 |
ಮಾಲೆಗಾಂವ್ ಔಟರ್ | ದಾದಾಜಿ ದಗ್ಡು ಭೂಸೆ | ಶಿವಸೇನೆ | 1,06,606 |
ಚಿಂಚ್ವಾಡ್ | ಜಗತಾಪ್ ಶಂಕರ್ ಪಾಂಡುರಂಗ್ | ಬಿಜೆಪಿ | 1,03,865 |
ಬಾರಾಮತಿ | ಅಜಿತ್ ಪವಾರ್ | ಎನ್‌ಸಿಪಿ | 1,00,899 |
ಬೊರಿವಲಿ | ಸಂಜಯ್ ಉಪಾಧ್ಯಾಯ | ಬಿಜೆಪಿ | 1,00,257 |
ಮತ್ತೊಂದೆಡೆ, ಮಾಲೆಗಾಂವ್ ಸೆಂಟ್ರಲ್ನ ಎಐಎಂಐಎಂ ಮುಫ್ತಿ ಮೊಹಮ್ಮದ್ ಇಸ್ಮಾಯಿಲ್ ಅಬ್ದುಲ್ ಖಾಲಿಕ್ ಕೇವಲ 162 ಮತಗಳ ಕನಿಷ್ಠ ಮತಗಳಿಂದ ಗೆದ್ದು ಇತಿಹಾಸ ಬರೆದಿದ್ದಾರೆ. ಉಳಿದ್ದಂತೆ ಇನ್ನೂ ನಾಲ್ಕು ಅಭ್ಯರ್ಥಿಗಳು ಒಂದು ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಅವರ ಪಟ್ಟಿ ಇಲ್ಲಿದೆ.
ಕ್ಷೇತ್ರ | ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿ | ಪಕ್ಷ | ಮತಗಳ ಅಂತರ |
ಮಾಲೆಗಾಂವ್ ಸೆಂಟ್ರಲ್ | ಮುಫ್ತಿ ಮೊಹಮ್ಮದ್ ಇಸ್ಮಾಯಿಲ್ ಅಬ್ದುಲ್ ಖಾಲಿಕ್ | ಎಐಎಂಐಎಂ | 162 |
ಸಕೋಲಿ | ನಾನಾಭಾವು ಫಲ್ಗುನರಾವ್ ಪಟೋಲೆ | ಕಾಂಗ್ರೆಸ್ | 208 |
ಬೇಲಾಪುರ | ಮಂದ ವಿಜಯ್ ಮ್ಹಾತ್ರೆ | ಬಿಜೆಪಿ | 377 |
ಬುಲ್ಧಾನ | ಗಾಯಕ್ವಾಡ್ ಸಂಜಯ್ ರಾಂಭೌ | ಶಿವಸೇನೆ | 841 |
ನವಪುರ್ | ಶಿರೀಶ್ಕುಮಾರ್ ನಾಯ್ಕ್ | ಕಾಂಗ್ರೆಸ್ | 1,121 |
ಜಾರ್ಖಂಡ್‌ನಲ್ಲಿ ಅತೀ ಹೆಚ್ಚು ಮತ್ತು ಕಡಿಮೆ ಮತಗಳ ಅಂತರದಿಂದ ಗೆದ್ದವರು ಯಾರು?: ಮತ್ತೊಂದೆಡೆ, ಜಾರ್ಖಂಡ್‌ನಲ್ಲಿ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ ಮತ್ತು ಕಾಂಗ್ರೆಸ್ ಮೈತ್ರಿಯು ಸತತ ಎರಡನೇ ಅವಧಿಗೆ ಜಯ ಗಳಿಸಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ 56 ಸ್ಥಾನಗಳನ್ನು ಮೈತ್ರಿಕೂಟ ಗೆದ್ದುಕೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೇವಲ 24 ಸೀಟು ಮಾತ್ರ ಗೆದ್ದಿದೆ. ಕಾಂಗ್ರೆಸ್ನ ನಿಸಾತ್ ಆಲಂ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತ್ತು ಅತೀ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ಕ್ಷೇತ್ರ | ಹೆಚ್ಚು ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿ | ಪಕ್ಷ | ಮತಗಳ ಅಂತರ |
ಪಕೌರ್ | ನಿಸಾತ್ ಆಲಂ | ಕಾಂಗ್ರೆಸ್ | 86,029 |
ಚೈವಾಸ | ದೀಪಕ್ ಬಿರುವಾ | ಜೆಎಂಎಂ | 64,835 |
ಮಜ್ಗಾಂವ್ | ನಿರಾಲ್ ಪುರ್ಟಿ | ಜೆಎಂಎಂ | 59,603 |
ಬರ್ಹಿ | ಮನೋಜ್ ಕುಮಾರ್ ಯಾದವ್ | ಬಿಜೆಪಿ | 49,291 |
ಧನಬಾದ್ | ರಾಜ್ ಸಿನ್ಹಾ | ಬಿಜೆಪಿ | 48,741 |
ಒಟ್ಟು ಐದು ಮಂದಿ ಅಭ್ಯರ್ಥಿಗಳು ಒಂದು ಸಾವಿರಕ್ಕಿತ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರ ಪಟ್ಟಿ ಇಲ್ಲಿದೆ.
ಕ್ಷೇತ್ರ | ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿ | ಪಕ್ಷ | ಮತಗಳ ಅಂತರ |
ಮಾಂಡು | ನಿರ್ಮಲ್ ಮಹತೋ | ಎಜೆಎಸ್ಯು | 231 |
ಲತೇಹರ್ | ಪ್ರಕಾಶ್ ರಾಮ್ | ಬಿಜೆಪಿ | 434 |
ಛತ್ತರ್‌ಪುರ | ರಾಧಾ ಕೃಷ್ಣ ಕಿಶೋರ್ | ಕಾಂಗ್ರೆಸ್ | 736 |
ದಾಲ್ತೋಂಗಂಜ್ | ಅಲೋಕ್ ಕುಮಾರ್ ಚೌರಾಸಿಯಾ | ಬಿಜೆಪಿ | 890 |
ಕಂಕೆ | ಸುರೇಶ್ ಕುಮಾರ್ ಬೈಠಾ | ಕಾಂಗ್ರೆಸ್ | 968 |
ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು: ಮಹಾರಾಷ್ಟ್ರ ಕಾಂಗ್ರೆಸ್ನಲ್ಲಿ ಬಿರುಕು, ಪಕ್ಷಾಧ್ಯಕ್ಷರ ರಾಜೀನಾಮೆಗೆ ಒತ್ತಡ