ಮೈಸೂರು : ''ಜೆಡಿಎಸ್ ಪಕ್ಷ ನಮ್ಮದೇ. ನಮ್ಮ ಹೆಸರಿನಲ್ಲೇ ಪಹಣಿ ಇದೆ. ನಾವೇ ಗೇಣಿದಾರರು. ನಾನು ಪಕ್ಷದ ಅಧ್ಯಕ್ಷ. ನಮ್ಮ ಜೆಡಿಎಸ್ ಪಕ್ಷದಲ್ಲಿ ಕುಮಾರಸ್ವಾಮಿ ಇರುತ್ತಾರೋ, ಬಿಡುತ್ತಾರೋ ಅವರಿಗೆ ಬಿಟ್ಟ ವಿಚಾರ'' ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಮೈಸೂರಿನಲ್ಲಿ ಶಾಸಕ ಜಿ. ಟಿ ದೇವೇಗೌಡ ಅವರನ್ನ ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಇಂದು ಜಿ.ಟಿ. ದೇವೇಗೌಡರ ಜತೆ ಬಹಳ ವಿಚಾರ ಚರ್ಚೆ ಮಾಡಿದ್ದೇವೆ. ಆಗ ಜಿ.ಟಿ.ದೇವೇಗೌಡ ಜೆಡಿಎಸ್ಗೆ ವಾಪಸ್ ಬಂದಿಲ್ಲ ಎಂದಿದ್ದರೆ ಈಗ ಅವರು ಮಂತ್ರಿಯಾಗುತ್ತಿದ್ದರು. ಅವರ ಕುತ್ತಿಗೆ ಕುಯ್ಯುವ ಕೆಲಸ ಆಗಿದೆ'' ಎಂದಿದ್ದಾರೆ.
''ನಾನು ಪಕ್ಷದ ಅಧ್ಯಕ್ಷ. ಅವಶ್ಯಕತೆ ಬಂದರೆ ಸಭೆ ಕರೆಯುತ್ತೇನೆ. ಕುಮಾರಸ್ವಾಮಿಗೂ ಆಹ್ವಾನ ಕೊಡುತ್ತೇನೆ. ಎಲ್ಲವನ್ನೂ ಚರ್ಚೆ ಮಾಡಿದ್ದೇವೆ. ಬುದ್ದ, ಬಸವಣ್ಣ, ಅಂಬೇಡ್ಕರ್, ಕುವೆಂಪು ಅವರ ನಾಡಿದು. ದೊಡ್ಡ ಗೌಡರಿಗೆ ಎಲ್ಲವನ್ನೂ ಸರಿ ಮಾಡುವ ಶಕ್ತಿಯಿದೆ. ಕಾದು ನೋಡೋಣ'' ಎಂದು ಹೇಳಿದ್ದಾರೆ.
ಮೈಸೂರಿನಿಂದಲೇ ರಣ ಕಹಳೆ ಊದುತ್ತೇವೆ : ''ಸದ್ಯ ಇಂದು ಜಿ.ಟಿ.ದೇವೇಗೌಡರ ಜತೆ ಎಲ್ಲವನ್ನೂ ಮಾತನಾಡಿದ್ದೇನೆ. ರಾಜಕೀಯ ಕುರಿತು ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ. ಮೈಸೂರಿನಿಂದಲೇ ರಣಕಹಳೆ ಊದುತ್ತೇವೆ. ಎಲ್ಲವೂ ಒಳ್ಳೆಯದಾಗುತ್ತದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರಾಜ್ಯಕ್ಕೆ 3ನೇ ಶಕ್ತಿ ಬೇಕಾಗಿದೆ : ಮಾಜಿ ಸಚಿವ ಸಿ ಎಂ ಇಬ್ರಾಹಿಂ