ಕರ್ನಾಟಕ

karnataka

ETV Bharat / state

ಚಿಕ್ಕ ವಯಸ್ಸಿನಲ್ಲಿ ಜನ ದೊಡ್ಡ ಜವಾಬ್ದಾರಿ ನೀಡಿದ್ದಾರೆ: ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ - Priyanka Jarakiholi - PRIYANKA JARAKIHOLI

ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ದಾವಣಗೆರೆ ನಾಯಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು.

mp-priyanka-jarakiholi
ಸಂಸದೆ ಪ್ರಿಯಾಂಕಾ ಜಾರಕಿಹೊಳಿ (ETV Bharat)

By ETV Bharat Karnataka Team

Published : Jun 13, 2024, 9:44 PM IST

ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಪ್ರತಿಕ್ರಿಯೆ (ETV Bharat)

ದಾವಣಗೆರೆ:ಚಿಕ್ಕ ವಯಸ್ಸಿನಲ್ಲಿ ಜನರು ನನಗೆ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ನನಗೆ ತುಂಬಾ ಖುಷಿ, ಹೆಮ್ಮೆ ಅನ್ನಿಸುತ್ತಿದೆ ಎಂದು ಚಿಕ್ಕೋಡಿಯ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದ್ದಾರೆ.

ಇಂದು ದಾವಣಗೆರೆ ನಾಯಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಸಂಸದೆಗೆ ನಾಯಕ ಸಮುದಾಯದ ಮುಖಂಡರು ಅದ್ಧೂರಿ ಸ್ವಾಗತ ಕೋರಿದರು.

"ಚಿಕ್ಕೋಡಿ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ. ನೀರು, ಉದ್ಯೋಗ ಸೇರಿದಂತೆ ಹಲವು ಸಮಸ್ಯೆಗಳಿವೆ. ನಾವು ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದೇವೆ. ಮಹಿಳೆಯರು ಕೂಡಾ ನಮಗೆ ಕೆಲಸ ಕೊಡಿ ಎಂದು ಕೇಳಿದ್ದರು. ಅದನ್ನೂ ಕೂಡಾ ತಂದೆಯೊಂದಿಗೆ ಮಾತನಾಡಿ ಅನುಷ್ಠಾನಕ್ಕೆ ತರುತ್ತೇವೆ" ಎಂದರು.

"ಇವತ್ತು ನನ್ನನ್ನು ನಮ್ಮ ಸಮಾಜದ ವತಿಯಿಂದ ಇಲ್ಲಿಗೆ ಕರೆಸಿ ಶುಭ ಹಾರೈಸಿದ್ದಾರೆ. ಬಹಳ ಖುಷಿಯಾಗುತ್ತಿದೆ" ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ನಿಮಗೆ ಟಿಕೆಟ್ ನೀಡಿದ್ದಕ್ಕೆ ವಿರೋಧವಿತ್ತಲ್ಲ ಎಂಬ ಪ್ರಶ್ನೆಗೆ, "ಎಲ್ಲರೂ ಕುಳಿತು ತೀರ್ಮಾನಿಸಿ ನನಗೆ ಟಿಕೆಟ್ ನೀಡಿದ್ದಾರೆ. ಇದರ ಕುರಿತಾಗಿ ಯಾವುದೇ ಅಪಸ್ವರ ಇರಲಿಲ್ಲ" ಎಂದರು.

"ಉತ್ತರ ಕರ್ನಾಟಕದಲ್ಲಿ ಪ್ರವಾಹ, ಬರಗಾಲ ಬಂದಾಗ ಯಾರೂ ಬರೋಲ್ಲ. ಬರೀ ಚಳಿಗಾಲದ ಅಧಿವೇಶನಕ್ಕೆ ಮಾತ್ರ ಶಾಸಕರು, ನಾಯಕರು ಬರುತ್ತಾರೆ. ಮುಂದಿನ ದಿನಗಳಲ್ಲಿ ಎಲ್ಲಾ ನಾಯಕರು ಸೇರಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂಬ ನಂಬಿಕೆ ಇದೆ" ಎಂದು ಇದೇ ವೇಳೆ ಹೇಳಿದರು.

ಅಥಣಿಯಲ್ಲಿ ಬಿಜೆಪಿಗೆ ಲೀಡ್ ಸಿಕ್ಕಿರುವ ವಿಚಾರವಾಗಿ ಮಾತನಾಡಿ, ಈ ಕುರಿತು ತಂದೆ ಪರಿಶೀಲಿಸುತ್ತಾರೆ ಎಂದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಅಭಿವೃದ್ಧಿಯಾಗುತ್ತದೆ ಎಂಬ ಕೂಗಿದೆಯಲ್ಲಾ ಎಂಬ ಪ್ರಶ್ನೆಗೆ, "ಸದ್ಯಕ್ಕೆ ಆ ರೀತಿ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋಗುತ್ತಿದ್ದಾರೆ. ಏನಾದ್ರೂ ತೊಂದರೆ ಇದ್ರೆ ಸಿಎಂ ಗಮನಕ್ಕೆ ತರುತ್ತಾರೆ. ಅವರು ಇಡೀ ಕರ್ನಾಟಕವನ್ನು ಸಮಾನವಾಗಿ ನೋಡುತ್ತಾರೆ ಎಂಬ ನಂಬಿಕೆ ಇದೆ" ಎಂದು ತಿಳಿಸಿದರು.

ಇದನ್ನೂ ಓದಿ:ಸಂಸತ್​ಗೆ ಜಾರಕಿಹೊಳಿ ಕುಟುಂಬದ ಮೊದಲ ಕುಡಿ ಎಂಟ್ರಿ: ಚೊಚ್ಚಲ ಬಾರಿಗೆ ಪಾರ್ಲಿಮೆಂಟ್​ಗೆ ಶೆಟ್ಟರ್​ - Priyanka Jarakiholi

ABOUT THE AUTHOR

...view details