ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಮೊಣಕಾಲಿನ ಕ್ಯಾಪ್ನೊಳಗೆ ಮರೆಮಾಚಿ ಪೇಸ್ಟ್ ರೂಪದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 47.89 ಲಕ್ಷ ರೂ ಮೌಲ್ಯದ 777.5 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ. ಜನವರಿ 31ರಂದು ಸಿಂಗಾಪುರ ಏರ್ಲೈನ್ಸ್ ಸಂಖ್ಯೆ SQ510 ವಿಮಾನದಲ್ಲಿ ಆರೋಪಿ ಕೆಐಎಎಲ್ಗೆ ಬಂದಿಳಿದಿದ್ದನು.
ಮೊಣಕಾಲಿನ ಕ್ಯಾಪ್ನೊಳಗೆ ಮರೆಮಾಚಿ ಚಿನ್ನ ಸಾಗಾಟ; ಸಿಕ್ಕಿಬಿದ್ದ ಪ್ರಯಾಣಿಕ
ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
Published : Feb 2, 2024, 11:26 AM IST
ಪ್ಲಾಸ್ಕ್ನಲ್ಲಿ ಚಿನ್ನ ಸಾಗಾಟ:ಪ್ಲಾಸ್ಕ್ನಲ್ಲಿ ಮರೆಮಾಚಿ ಚಿನ್ನ ಸಾಗಣೆ ಮಾಡುತ್ತಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಜ.31 ರಂದು ಪತ್ತೆ ಹಚ್ಚಿದ್ದರು. ಸೌದಿ ಅರೇಬಿಯಾದ ಜೆಡ್ಡಾ ಏರ್ಪೋರ್ಟ್ನಿಂದ ಆರೋಪಿ ಆಗಮಿಸಿದ್ದ. ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಪರಿಶೀಲನೆ ಮಾಡಿದ್ದು, ಚಿನ್ನವನ್ನು ಪ್ಲಾಸ್ಕ್ನೊಳಗಡೆ ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟಿರುವುದು ಬೆಳಕಿಗೆ ಬಂದಿತ್ತು. 7 ಲಕ್ಷದ 52 ಸಾವಿರ ರೂ ಮೌಲ್ಯದ 122 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿತ್ತು.
ಇದನ್ನೂ ಓದಿ:ಅಕ್ಕನ ಬ್ಯಾಗ್ನಲ್ಲಿದ್ದ 8.51 ಲಕ್ಷ ಮೌಲ್ಯದ ಚಿನ್ನ ಕದ್ದ ತಂಗಿಯ ಬಂಧನ