ಕರ್ನಾಟಕ

karnataka

ETV Bharat / state

ಕುದುರೆಮುಖ, ನೇತ್ರಾವತಿ ಪೀಕ್ ಚಾರಣಕ್ಕೆ ಆನ್‍ಲೈನ್ ಬುಕ್ಕಿಂಗ್, ತತ್ಕಾಲ್​ ವ್ಯವಸ್ಥೆ; ಟಿಕೆಟ್​ ಬುಕ್​ ಮಾಡುವುದು ಹೇಗೆ? - Online Booking

ಕುದುರೆಮುಖ ಮತ್ತು ನೇತ್ರಾವತಿ ಪೀಕ್ ಚಾರಣಕ್ಕೆ ಆನ್‍ಲೈನ್ ಮೂಲಕವೇ ಬುಕ್ಕಿಂಗ್ ಮಾಡಬೇಕಾಗಿದೆ. ಯಾವುದೇ ಆಫ್​ ಲೈನ್​ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬುಕ್ಕಿಂಗ್ ಮಾಡುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ..

By ETV Bharat Karnataka Team

Published : Jun 24, 2024, 1:49 PM IST

TICKET BOOKING SYSTEM  DEMAND FOR TREKKING  DAKSHINA KANNADA
ಕುದುರೆಮುಖ, ನೇತ್ರಾವತಿ ಪೀಕ್ ಚಾರಣಕ್ಕೆ ಆನ್‍ಲೈನ್ ಮೂಲಕವೇ ಬುಕ್ಕಿಂಗ್ (ETV Bharat)

ಮಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ನೇತ್ರಾವತಿ ಪೀಕ್ ಚಾರಣಕ್ಕೆ ಅತಿಹೆಚ್ಚಿನ ಚಾರಣಿಗರ ಒತ್ತಡ ಇದೆ. ಈ ಎರಡು ಚಾರಣಗಳಿಗೆ ಚಾರಣ ಮಾಡಲು ಇನ್ನು ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಚಾರಣಕ್ಕೆ ಅವಕಾಶ ನೀಡಲು, ಇದರ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿರ್ಧರಿಸಲಾಗಿದೆ. ಇದರಂತೆ ಗರಿಷ್ಠ 300 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಚಾರಣ ಕೈಗೊಳ್ಳಲು www.kudremukhanationalpark.in ಮುಖಾಂತರ ಬುಕ್ಕಿಂಗ್ ಮಾಡಬೇಕು. ಒಬ್ಬ ವ್ಯಕ್ತಿಯು ಗರಿಷ್ಠ ಮೂರು ಜನರಿಗೆ ಬುಕ್ಕಿಂಗ್ ಮಾಡಬಹುದು. ಎಲ್ಲಾ ಚಾರಣಿಗರು ಆನ್‍ಲೈನ್ ಮೂಲಕ ಮಾತ್ರ ಬುಕ್ಕಿಂಗ್ ಮಾಡಬೇಕು. ಯಾವುದೇ ಆಫ್‍ಲೈನ್ ಬುಕ್ಕಿಂಗ್ ಅವಕಾಶ ಇರುವುದಿಲ್ಲ. ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ 200 ಜನರಿಗೆ ಅವಕಾಶ ನೀಡಲಾಗುತ್ತದೆ.

ವಾರಾಂತ್ಯಕ್ಕೆ ಸ್ಥಳೀಯ ಗ್ರಾಮಸ್ಥರಿಗೆ ಅವಕಾಶ ಲಭಿಸದ ಕಾರಣ ವಿಶೇಷವಾಗಿ ಅವಕಾಶ ನೀಡಲು 50 ಸ್ಥಳೀಯ ಗ್ರಾಮಸ್ಥರಿಗೆ ಪ್ರತ್ಯೇಕ ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ ರೂಪಿಸಲಾಗಿದೆ. ಕುದುರೆಮುಖ ಮತ್ತು ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ವನ್ಯಜೀವಿ ವಲಯ ಸಂಪರ್ಕಿಸಿ ಬುಕ್ಕಿಂಗ್ ಲಾಗಿನ್ ಐಡಿ ಪಡೆದು ನೋಂದಾಯಿಸಿಕೊಳ್ಳಬಹುದು. 50 ಪ್ರವಾಸಿಗರಿಗೆ ತತ್ಕಾಲ್ ರೂಪದಲ್ಲಿ ವಾರಂತ್ಯಕ್ಕೆ ಮಾತ್ರ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ತತ್ಕಾಲ್ ಪ್ರತೀ ಗುರುವಾರ ತೆರೆದಿರುತ್ತದೆ.

ಕುದುರೆಮುಖ, ನೇತ್ರಾವತಿ ಪೀಕ್ ಚಾರಣಕ್ಕೆ ಆನ್‍ಲೈನ್ ಮೂಲಕವೇ ಬುಕ್ಕಿಂಗ್ (ETV Bharat)

ಪ್ರತಿ ಗುರುವಾರ ತತ್ಕಾಲ್ ಬುಕ್ಕಿಂಗ್: ಈ ವ್ಯವಸ್ಥೆಯನ್ನು ತಂತ್ರಾಂಶದಲ್ಲಿ ರೂಪಿಸಲಾಗಿದ್ದು, ಕೊನೆ ಕ್ಷಣದಲ್ಲಿ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಕುರಿತು ಪ್ರತಿ ಗುರುವಾರ ಮಧ್ಯಾಹ್ನ ಆನ್‍ಲೈನ್‍ನಲ್ಲಿ ಅವಕಾಶ ನೀಡಲಾಗಿದೆ. ಉಳಿದ ದಿನಗಳಿಗೆ 300 ಜನರಿಗೆ ಬುಕ್ಕಿಂಗ್ ಅವಕಾಶ ನೀಡಲಾಗಿದೆ. ಚಾರಣ ಕುರಿತು ಪ್ರತಿ ತಿಂಗಳ 25ನೇ ತಾರೀಕಿನಂದು ಮುಂದಿನ 30 ದಿನಗಳಿಗೆ ಆನ್‍ಲೈನ್ ತಂತ್ರಾಂಶದಲ್ಲಿ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ. ನಾಳೆಯಿಂದ(ಜೂನ್ 25) ಈ ವ್ಯವಸ್ಥೆಯು ಜಾರಿಗೆ ಬರಲಿದೆ.

ಕುದುರೆಮುಖ, ನೇತ್ರಾವತಿ ಪೀಕ್ ಚಾರಣಕ್ಕೆ ಆನ್‍ಲೈನ್ ಮೂಲಕವೇ ಬುಕ್ಕಿಂಗ್ (ETV Bharat)

ಸ್ಥಳಿಯ ಹೋಂ ಸ್ಟೇ ಮಾಲೀಕರು ಕುದುರೆಮುಖ ವನ್ಯಜೀವಿ ವಲಯ ಮತ್ತು ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿ ಇವರಲ್ಲಿ ಹೋಂ ಸ್ಟೇ ಕುರಿತ ದಾಖಲಾತಿಗಳನ್ನು ನೀಡಿ ಕಡ್ಡಾಯವಾಗಿ ಜೂನ್ ತಿಂಗಳ ಅಂತ್ಯದ ಒಳಗೆ ನೋಂದಾಯಿಸಿಕೊಳ್ಳಬೇಕಾಗಿದೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಅವರು, ಚಾರಣಕ್ಕೆ ಆನ್​ಲೈನ್ ಬುಕ್ಕಿಂಗ್ ಮಾಡಲು ವೆಬ್​ಸೈಟ್​ನಲ್ಲಿ ಬದಲಾವಣೆ ಮಾಡಲಾಗಿದೆ. ಜೂನ್ 25 ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ. ವಾರಾಂತ್ಯ ಹೊರತುಪಡಿಸಿ ಪ್ರತಿದಿನ 300 ಜನರಿಗೆ, ವಾರಾಂತ್ಯದಲ್ಲಿ 200 ಮಂದಿಗೆ ಅವಕಾಶ ನೀಡಲಾಗುತ್ತದೆ. ವಾರಂತ್ಯಕ್ಕೆ ಸ್ಥಳೀಯರಿಗೆ 50 ಮತ್ತು ತತ್ಕಾಲ್ 50 ಜನರಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಓದಿ:ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ, ವಿಶೇಷ ಪೂಜೆ - BSY visited Dharmasthala

ABOUT THE AUTHOR

...view details