ಕರ್ನಾಟಕ

karnataka

ETV Bharat / state

ಮರ - ಗಿಡ, ರಸ್ತೆ ಬದಿ ನೀರು - ಆಹಾರ ಇಟ್ಟು ಪ್ರಾಣಿ - ಪಕ್ಷಿಗಳ ಹಸಿವು ನೀಗಿಸುತ್ತಿದೆ ಗೆಳೆಯರ ಬಳಗ - Youngsters feeding the birds - YOUNGSTERS FEEDING THE BIRDS

ಯುವಕರ ತಂಡವೊಂದು ಬರಗಾಲದಲ್ಲಿ ಪ್ರಾಣಿ ಪಕ್ಷಿಗಳ ಕಷ್ಟಕಂಡು ಮರಗಿಡಗಳಲ್ಲಿ, ತಮ್ ಬೈಕ್​ಗಳಲ್ಲಿ, ರಸ್ತೆ ಬದಿಯಲ್ಲಿ ಬಾಟಲ್​ಗಳನ್ನು ಕಟ್ಟಿ ಅದಕ್ಕೆ ನೀರು ಆಹಾರ ಹಾಕಿ ಮೂಕ ಪ್ರಾಣಿಗಳ ಹಸಿವು ನೀಗಿಸುತ್ತಿದ್ದಾರೆ.

ಗೆಳೆಯರ ಬಳಗ
ಗೆಳೆಯರ ಬಳಗ

By ETV Bharat Karnataka Team

Published : Apr 12, 2024, 11:25 AM IST

Updated : Apr 12, 2024, 12:29 PM IST

ಪ್ರಾಣಿ-ಪಕ್ಷಿಗಳ ಹಸಿವು ನೀಗಿಸುತ್ತಿದೆ ಗೆಳೆಯರ ಬಳಗ

ಹಾವೇರಿ:ಜಿಲ್ಲೆಯ ಸವಣೂರು ತಾಲೂಕು ಜಲ್ಲಾಪುರ ಗ್ರಾಮದ ಯುವಕರ ತಂಡವೊಂದು ತಮ್ಮ ಅಕ್ಕಪಕ್ಕದ ಪ್ರಾಣಿ ಪಕ್ಷಿಗಳ ನೆರವಿಗೆ ಮುಂದಾಗಿದೆ. ಪ್ರಾಣಿಪಕ್ಷಿಗಳಿಗೆ ನೀರು ಆಹಾರ ನೀಡುವ ಮೂಲಕ ಅಳಿಲು ಸೇವೆ ಮಾಡುತ್ತಿದ್ದಾರೆ. ಜಲ್ಲಾಪುರ ಗ್ರಾಮದ ಯುವಕರು ತಂಡಕಟ್ಟಿಕೊಂಡು ಪ್ರಾಣಿ ಪಕ್ಷಿಗಳಿಗೆ ಬೇಕಾದ ಆಹಾರ ಮತ್ತು ನೀರನ್ನು ಒದಗಿಸುತ್ತಿದ್ದಾರೆ. ಗ್ರಾಮದ ಪಂಚಾಯತ್​ ಆವರಣದಲ್ಲಿ ಉಪಯೋಗಿಸದೇ ಬಿಟ್ಟ ಬಾನಿಗಳನ್ನು ತೆಗೆದುಕೊಂಡು ಬಂದು ಗ್ರಾಮ ಸೇರುವ ಪ್ರಮುಖ ರಸ್ತೆಗಳಲ್ಲಿಟ್ಟು ಅದಕ್ಕೆ ನೀರು ಹಾಕುತ್ತಿದ್ದಾರೆ.

ಗ್ರಾಮ ಸೇರುವ ನಾಲ್ಕು ರಸ್ತೆಗಳಲ್ಲಿರುವ ಮರಗಳಿಗೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತುಂಬುದಲ್ಲದೇ ಮನೆಯಿಂದ ತಂದ ಭತ್ತ, ಅಕ್ಕಿ, ರಾಗಿ, ಗೋಧಿ ತಂದು ಪಕ್ಷಿಗಳಿಗೆ ಆಹಾರ ಹಾಕುತ್ತಿದ್ದಾರೆ. ಗ್ರಾಮದ ಪಕ್ಕದಲ್ಲಿರುವ ಹಳ್ಳದಲ್ಲಿ ನೀರು ಖಾಲಿಯಾಗಿರುವ ಕಾರಣ ಹಳ್ಳದಲ್ಲಿರುವ ಗಿಡಗಂಟೆಗಳಲ್ಲಿ ಬಾಟಲಿ ಕಟ್ಟಿ ಅವುಗಳಲ್ಲಿ ನೀರು ಮತ್ತು ಆಹಾರ ಹಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ ಯುವಕರ ತಂಡ ಈ ಕಾರ್ಯ ಮಾಡುತ್ತಿದೆ.

ಪ್ರಾಣಿ-ಪಕ್ಷಿಗಳ ಹಸಿವು ನೀಗಿಸುತ್ತಿದೆ ಗೆಳೆಯರ ಬಳಗ

ಇವರು ಎಂದಿನಂತೆ ಸಂಜೆ ವಾಯುವಿಹಾರಕ್ಕೆ ತೆರಳಿದಾಗ ರಸ್ತೆಯಲ್ಲಿ ಪಕ್ಕದಲ್ಲಿದ್ದ ಒಂದು ಕೊಳವೆ ಬಾವಿಯಲ್ಲಿ ನೀರು ತೊಟ್ಟಿಕುತ್ತಿತ್ತು. ಹನಿ ಹನಿ ತೊಟ್ಟಿಕ್ಕುವ ನೀರಿಗೆ ಮಂಗಗಳ ಗುಂಪು ನೀರು ಕುಡಿಯಲು ಪರದಾಡುತ್ತಿದ್ದವು. ಈ ದೃಶ್ಯವನ್ನು ಕಂಡ ಈ ಬಳಗದ ಸದಸ್ಯರು ತಮ್ಮ ಸ್ನೇಹಿತರನ್ನು ಸೇರಿಸಿ ಈ ರೀತಿಯ ಪರಿಸರ ಕಾಳಜಿ ವ್ಯಕ್ತಪಡಿಸಿದ್ದಾರೆ.

ಮನುಷ್ಯ ತನಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾನೆ. ತನ್ನ ಬಳಿ ಇರುವ ಹಣದಿಂದ ನೀರು ಆಹಾರ ಪಡೆಯುತ್ತಾನೆ. ಆದರೆ, ಪ್ರಾಣಿಪಕ್ಷಿಗಳು ಯಾವುದೇ ಮುಂದಾಲೋಚನೆ ಇಲ್ಲದೆ ಜೀವಿಸುತ್ತವೆ. ಈ ವರ್ಷಅವುಗಳ ಪರಿಸ್ಥಿತಿ ಹದಗೆಟ್ಟಿದೆ. ಆಹಾರ ನೀಡಬೇಕಾಗಿದ್ದ ರೈತರ ಜಮೀನುಗಳು ಬೆಳೆಯಿಲ್ಲದೆ ಒಣಗಿನಿಂತಿವೆ. ನೀರಿನ ದಾಹ ತೀರಿಸಬೇಕಾದ ಜೀವಸೆಲೆಗಳಲ್ಲಿ ನೀರಿಲ್ಲದಂತಾಗಿದೆ. ಈ ಸಮಯದಲ್ಲಿ ಅವುಗಳ ಸಹಾಯಕ್ಕೆ ನಾವೆಲ್ಲಾ ಧಾವಿಸಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುತ್ತಾರೆ ಈ ಯುವಕ ಬಳಗದ ಸದಸ್ಯರು.

ಪ್ರಾಣಿ-ಪಕ್ಷಿಗಳ ಹಸಿವು ನೀಗಿಸುತ್ತಿದೆ ಗೆಳೆಯರ ಬಳಗ

ನಿತ್ಯ ತಮ್ಮ ಎರಡು ಗಂಟೆ ಮೀಸಲಿಟ್ಟಿದ್ದು, ಯುವಕರ ಈ ಕಾರ್ಯಕ್ಕೆ ಗ್ರಾಮಸ್ಥರು ಸಹ ಸಹಕಾರ ನೀಡಲಾರಂಭಿಸಿದ್ದಾರೆ. ಈ ರೀತಿಯ ಮಾನವೀಯ ಕಾರ್ಯಗಳಿಗೆ ಬೆಂಬಲ ಸೂಚಿಸುವಲ್ಲಿ ತಮ್ಮ ಕೈಯಲಾದ ಸಹಾಯ ಮಾಡುತ್ತಿದ್ದಾರೆ. ಇವರ ಪ್ರಯತ್ನಕ್ಕೆ ಪ್ರಾಣಿಪಕ್ಷಿಗಳು ಸಹ ಸ್ಪಂದಿಸಿವೆಯಂತೆ. ಪರಿಸರ ಸಮತೋಲನದಲ್ಲಿ ಪಕ್ಷಿಗಳ ಪಾತ್ರ ಪ್ರಮುಖವಾದದ್ದು, ಅವುಗಳ ಸಂಖ್ಯೆ ಕಡಿಮೆಯಾಗದಂತೆ ನೋಡಿಕೊಂಡರೆ ಪರಿಸರ ಸಮತೋಲನದಲ್ಲಿರುತ್ತೆ. ಪ್ರಸ್ತುತ ವರ್ಷ ಮಳೆಗಾಲ ಆರಂಭವಾಗುವರೆಗೆ ಈ ರೀತಿ ನೀರು ಮತ್ತು ಆಹಾರ ಪೂರೈಸುವ ತಮ್ಮ ಇಂಗಿತವನ್ನು ಯುವಕರ ತಂಡ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಒಂದೇ 1 ಎಕರೆ ಜಮೀನಿನಲ್ಲಿ 20 ಟನ್ ಅನಾನಸ್; ಬರಗಾಲದಲ್ಲೂ ಬಂಗಾರದ ಬೆಳೆ, ಹಾವೇರಿ ರೈತನ ಸಂಪಾದನೆ ಎಷ್ಟು ಗೊತ್ತಾ? - successful pineapple crop

Last Updated : Apr 12, 2024, 12:29 PM IST

ABOUT THE AUTHOR

...view details