ಹಾಸನ:ಕಾಡಾನೆ ದಾಳಿಗೆ ವಯೋವೃದ್ಧರೊಬ್ಬರು ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪುಟ್ಟಯ್ಯ (78) ಕಾಡಾನೆ ದಾಳಿಗೆ ಬಲಿಯಾದ ವಯೋವೃದ್ಧ. ನಿನ್ನೆ ಸಂಜೆ ಮಗ್ಗೆ ಗ್ರಾಮದಿಂದ ಅಡಿಬೈಲು ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಆನೆ ದಾಳಿ ನಡೆಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಓಡಲು ಪ್ರಯತ್ನ ಪಟ್ಟರೂ ಕಾಡಾನೆ ತನ್ನ ಕಾಲಿನಿಂದ ತುಳಿದು ಮರಕ್ಕೆ ಅಪ್ಪಳಿಸಿ ಬಿಸಾಡಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪುಟ್ಟಯ್ಯ ಮನೆಗೆ ಬಾರದ ಕಾರಣ ಕುಟುಂಬಸ್ಥರು ಹುಡುಕಾಡಿದ್ದರು. ಆದರೆ ಪತ್ತೆಯಿರಲಿಲ್ಲ. ಇಂದು ಬೆಳಗ್ಗೆ ಎಂದಿನಂತೆ ಗ್ರಾಮಸ್ಥರು ಕಾಫಿ ತೋಟಕ್ಕೆ ಹೋದ ವೇಳೆ ಪುಟ್ಟಯ್ಯನ ಶವ ಪತ್ತೆಯಾಗಿದೆ.