ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಮದುವೆ ಮಂಟಪದಲ್ಲಿ ಮತದಾನ ಜಾಗೃತಿ - Voting Awareness - VOTING AWARENESS

ಚಿಕ್ಕಮಗಳೂರು ಜಿಲ್ಲಾಡಳಿತದ ಅಧಿಕಾರಿಗಳು ಮದುವೆ ಸಮಾರಂಭದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಚಿಕ್ಕಮಗಳೂರು: ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಮೂಡಿಸಿದ ಅಧಿಕಾರಿಗಳು
ಚಿಕ್ಕಮಗಳೂರು: ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಮೂಡಿಸಿದ ಅಧಿಕಾರಿಗಳು

By ETV Bharat Karnataka Team

Published : Apr 5, 2024, 10:03 PM IST

ಚಿಕ್ಕಮಗಳೂರು: ಮದುವೆ ಮಂಟಪದಲ್ಲಿ ಮತದಾನ ಜಾಗೃತಿ ಮೂಡಿಸಿದ ಅಧಿಕಾರಿಗಳು

ಚಿಕ್ಕಮಗಳೂರು:ಲೋಕಸಭಾ ಚುನಾವಣೆಯಲ್ಲಿ ಮತದಾನ ಕೇಂದ್ರಕ್ಕೆ ಮತದಾರರನ್ನು ಕರೆತರುವ ಉದ್ದೇಶದಿಂದ ಜಿಲ್ಲಾಡಳಿತ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದರ ಭಾಗವಾಗಿ ಚಿಕ್ಕಮಗಳೂರು ನಗರದ ಕನಕ ಭವನದಲ್ಲಿ ನಿಶ್ಚಯವಾಗಿದ್ದ ಕಾವ್ಯಾ ಹಾಗೂ ರಾಜೇಶ್ ಅವರ ಮದುವೆ ಸಮಾರಂಭದಲ್ಲಿ ಅಧಿಕಾರಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಸಿಇಒ ಡಾ.ಬಿ.ಗೋಪಾಲಕೃಷ್ಣ ಅವರು ವಧು-ವರರಿಗೆ ಮದುವೆ ಶುಭಾಶಯ ಕೋರುವ ಜತೆಗೆ ಆಗಮಿಸಿದ್ದ ಜನರಿಗೆ ತಪ್ಪದೇ ಮತದಾನ ಮಾಡುವಂತೆ ಪ್ಲಕಾರ್ಡ್ ಹಿಡಿದು ಜಾಗೃತಿ ಮೂಡಿಸಿದರು. ಕಲ್ಯಾಣ ಮಂಟಪದ ಮುಂಭಾಗ ಸೆಲ್ಫಿ ಸ್ಟ್ಯಾಂಡ್ ಸಹ ಇಡಲಾಗಿತ್ತು. ಮದುವೆಗೆ ಬಂದಿದ್ದ ಜನರು ಫೋಟೋ ಕ್ಲಿಕ್ಕಿಸಿಕೊಂಡರು.

ಇದನ್ನೂ ಓದಿ:ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್​ ಹೆಗ್ಡೆಗೆ ಗೃಹಲಕ್ಷ್ಮಿ ಯೋಜನೆಯ ಹಣ ದೇಣಿಗೆ ಕೊಟ್ಟ ಮಹಿಳೆ - Jayaprakash Hegde

ABOUT THE AUTHOR

...view details