ಕರ್ನಾಟಕ

karnataka

ETV Bharat / state

ಭಯೋತ್ಪಾದಕ ಸಂಘಟನೆ ಜೊತೆ ನಂಟು ಶಂಕೆ: ಶಿರಸಿಯಲ್ಲಿ ಓರ್ವನ ವಶಕ್ಕೆ ಪಡೆದ ಎನ್​ಐಎ ತಂಡ - NIA takes man into custody

ಆನ್​ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟ್​ನಲ್ಲಿ ನಕಲಿ ದಾಖಲೆ ನೀಡಿರುವ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ಎನ್​ಐಎ ವಶಕ್ಕೆ ಪಡೆದಿದೆ. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಬಕ್ರೀದ್​ ಹಬ್ಬಕ್ಕೆ ಊರಿಗೆ ಬಂದಾಗ ವಶಕ್ಕೆ ಪಡೆಯಲಾಗಿದೆ.

ಎನ್​ಐಎ
ಎನ್​ಐಎ (ETV Bharat)

By ETV Bharat Karnataka Team

Published : Jun 18, 2024, 3:40 PM IST

ಶಿರಸಿ(ಉತ್ತರ ಕನ್ನಡ): ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕದ ಶಂಕೆ ಹಿನ್ನೆಲೆಯಲ್ಲಿ ಜಿಲ್ಲೆಯ ಬನವಾಸಿ ಮೂಲದ ವ್ಯಕ್ತಿಯನ್ನು ಎನ್​ಐಎ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಐವರು ಅಧಿಕಾರಿಗಳಿರುವ ಎನ್​ಐಎ ತಂಡ ಶಿರಸಿ ತಾಲೂಕಿನ ದಾಸನಕೊಪ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದಿದೆ.

ವಶಕ್ಕೆ ಪಡೆದಿರುವ ವ್ಯಕ್ತಿ ದುಬೈನಲ್ಲಿ ಕೆಲಸ ಮಾಡುತಿದ್ದ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಬಕ್ರೀದ್ ಆಚರಣೆಗಾಗಿ ಬನವಾಸಿಯ ದಾಸನಕೊಪ್ಪದ ನಿವಾಸಕ್ಕೆ ಆಗಮಿಸಿದ್ದ. ಈತನ ಮೇಲೆ ಆನ್​ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್​ಪೋರ್ಟ್​ನಲ್ಲಿ ನಕಲಿ ದಾಖಲೆ ನೀಡಿದ ಆರೋಪವಿದೆ. ಬನವಾಸಿ ಪೊಲೀಸರ ಸಹಕಾರ ಪಡೆದು ಎನ್​ಐಎ ದಾಳಿ ನಡೆಸಿ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.‌

ಇನ್ನು, 2017 ರಲ್ಲಿಯೂ ಈತನನ್ನು ಎನ್​ಐಎ ತಂಡ ವಿಚಾರಣೆ ನಡೆಸಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬಳ್ಳಾರಿ ಐಸಿಸ್ ಮಾಡ್ಯೂಲ್: 7 ಮಂದಿ ಶಂಕಿತ ಉಗ್ರರ ವಿರುದ್ಧ ಎನ್ಐಎ ಚಾರ್ಜ್‌ಶೀಟ್ - Ballari ISIS Module Case

ABOUT THE AUTHOR

...view details