ETV Bharat / bharat

ಕಾಶ್ಮೀರದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ; ಓರ್ವ ಭಯೋತ್ಪಾದಕನ ಹತ್ಯೆ - SECURITY FORCES AND TERRORIST

ಖಚಿತ ಗುಪ್ತಚರ ಮೂಲಗಳ ಮಾಹಿತಿ ಅನುಸಾರ ಈ ದಾಳಿ ನಡೆದಿದೆ.

encounter-underway-between-security-forces-and-terrorists-in-srinagar
ಕಾಶ್ಮೀರದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವ ಗುಂಡಿನ ಚಕಮಕಿ (ಐಎಎನ್​ಎಸ್​)
author img

By PTI

Published : Dec 3, 2024, 10:11 AM IST

ಶ್ರೀನಗರ, ಜಮ್ಮು ಕಾಶ್ಮೀರ: ಶ್ರೀನಗರದ ದಾಚಿಗಂ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಗುಪ್ತಚರ ಮೂಲಗಳ ಮಾಹಿತಿ ಅನುಸಾರ ಈ ದಾಳಿ ನಡೆದಿದೆ. ದಾಚಿಗಮ್ ಅರಣ್ಯದ ಮೇಲ್ಭಾಗದ ಕಾರ್ಡನ್ ನಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದಾಚಿಗಂ ರಾಷ್ಟ್ರೀಯ ಉದ್ಯಾನವನವಾಗಿದ್ದು, ನಗರದ ಹೊರವಲಯದಲ್ಲಿದೆ. ಸುಮಾರು 141 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ.

ಶೋಧ ಕಾರ್ಯಾಚರಣೆ ಮೇಲೆ ಭಯೋತ್ಪಾದಕರ ದಾಳಿಗೆ ಭದ್ರತಾ ಪಡೆ ಕೂಡಾ ಪ್ರತಿದಾಳಿ ನಡೆಸಿದೆ. ಪರಿಣಾಮ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದ್ದು, ಈ ಎನ್​ಕೌಂಟರ್​ ಸಾಗಿದೆ ಎಂದು ತಿಳಿದು ಬಂದಿದೆ.

ಈ ಗುಂಡಿನ ಚಕಮಕಿಯಲ್ಲಿ ಒಬ್ಬ ಭಯೋತ್ಪಾದಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಮಾಹಿತಿ ನೀಡಿರುವ ಉತ್ತರ ಕಮಾಂಡರ್‌ನ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಂವಿ ಸುಚೀಂದ್ರ ಕುಮಾರ್, ಚಿನಾರ್ ವಾರಿಯರ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕಾರ್ಯಾಚರಣೆಯಲ್ಲಿ ಓರ್ವ ಉಗ್ರ ಮೃತಪಟ್ಟಿದ್ದಾನೆ ಎಂದು ಶ್ರೀನಗರದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮೊದಲ ಪ್ರಯತ್ನದಲ್ಲೇ 153 ರ‍್ಯಾಂಕ್ ಪಡೆದು UPSC ಪರೀಕ್ಷೆ ಪಾಸ್​ ಮಾಡಿದ್ದ ಹರ್ಷವರ್ಧನ್; ಪರಿಶ್ರಮ ಫಲ ನೀಡುವ ಹೊತ್ತಲ್ಲಿ ವಿಧಿಯಾಟಕ್ಕೆ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.