ಕರ್ನಾಟಕ

karnataka

ETV Bharat / state

ಹೊಸ ವರ್ಷಕ್ಕೆ ಕೌಂಟ್‌ಡೌನ್‌!: ಬೆಂಗಳೂರಿನ ಎಂಜಿ.ರಸ್ತೆ, ಬ್ರಿಗ್ರೇಡ್ ರಸ್ತೆಯಲ್ಲಿ ಸಂಭ್ರಮವೋ ಸಂಭ್ರಮ - NEW YEAR CELEBRATION

ಬೆಂಗಳೂರಿನಲ್ಲಿ 2025ರ ಹೊಸ ವರ್ಷದ ಆಚರಣೆಗೆ ಜನರು ಭರ್ಜರಿಯಾಗಿ ಸಿದ್ಧರಾಗಿದ್ದಾರೆ. ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ಗಳಲ್ಲಿ ಪಾರ್ಟಿಗಳು ಜೋರಾಗಿ ನಡೆಯುತ್ತಿವೆ.

ಎಂಜಿ.ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ವರ್ಷಾಚರಣೆ ಸಂಭ್ರಮ ಜೋರು
ಎಂ.ಜಿ.ರಸ್ತೆ, ಬ್ರಿಗ್ರೇಡ್ ರಸ್ತೆಯಲ್ಲಿ ವರ್ಷಾಚರಣೆ ಸಂಭ್ರಮ (ETV Bharat)

By ETV Bharat Karnataka Team

Published : Dec 31, 2024, 11:04 PM IST

ಬೆಂಗಳೂರು: ಹೊಸ ವರ್ಷದ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ನ್ಯೂ ಇಯರ್ ಸ್ವಾಗತಿಸಲು ರಾಜಧಾನಿ ಜನರು ಕಾತರರಾಗಿದ್ದಾರೆ. ಸಿಲಿಕಾನ್ ಸಿಟಿ ಮಂದಿ ಸಖತ್​ ಎಂಜಾಯ್​ ಮಾಡಲು ತುದಿಗಾಲಲ್ಲಿ ನಿಂತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ನಗರದ ಎಂ.ಜಿ.ರಸ್ತೆ, ಬ್ರಿಗ್ರೇಡ್ ರಸ್ತೆ, ಚರ್ಚ್ ಸ್ಟ್ರೀಟ್ ರಸ್ತೆಗಳು ಅದ್ಧೂರಿಯಾಗಿ ಸಿಂಗಾರಗೊಂಡಿವೆ. ವೈಭವಯುತ ಅಲಂಕಾರಿಕ ದೀಪಗಳು ಬೆಳಕಿನಲ್ಲಿ ಕಂಗೊಳಿಸುತ್ತಿವೆ. ಹೆಜ್ಜೆಹೆಜ್ಜೆಗೂ ಪೊಲೀಸ್ ಸರ್ಪಗಾವಲಿನಲ್ಲಿ ಸಾಗರೋಪಾದಿಯಲ್ಲಿ ಜನ ದಾಂಗುಡಿ ಇಡುತ್ತಿದ್ದಾರೆ. ನಗರದ ವಿವಿಧ ಮೂಲೆಗಳಿಂದ ಎಂ.ಜಿ.ರಸ್ತೆಯ ಮೆಟ್ರೋ ರೈಲಿನ ಮೂಲಕ ಆಗಮಿಸಿ ನೂತನ ವರ್ಷದ ಮೊದಲ ಕ್ಷಣದ ಸವಿ ಅನುಭವಿಸಲು ಕಾಯುತ್ತಿದ್ದಾರೆ.

ಬೆಂಗಳೂರಿನ ಎಂಜಿ.ರಸ್ತೆ, ಬ್ರಿಗ್ರೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ಸಂಭ್ರಮ (ETV Bharat)

ಬ್ರಿಗ್ರೇಡ್ ರಸ್ತೆಯಲ್ಲಿ ನೂಕುನುಗ್ಗಲು ಆಗದಂತೆ ತಡೆಯಲು ಮಹಿಳೆಯರಿಗಾಗಿ ಪ್ರತ್ಯೇಕ ಬ್ಯಾರಿಕೇಡ್ ಹಾಕಲಾಗಿದ್ದು, ಕುಟುಂಬಸಮೇತ ಬಂದು ಎಂಜಾಯ್ ಮಾಡುತ್ತಿದ್ದಾರೆ. ಸ್ನೇಹಿತರೊಂದಿಗೆ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಿರುವುದು ಕಂಡುಬಂತು. ಹ್ಯಾಪಿ ನ್ಯೂ ಇಯರ್, ಹ್ಯಾಪಿ ನ್ಯೂ ಇಯರ್ ಎಂದು ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದಾರೆ.

ಪಬ್-ಕ್ಲಬ್​ಗಳಲ್ಲಿ ಮೋಜು-ಮಸ್ತಿ ಜೋರು:ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದ ಬಹುತೇಕ ಪಬ್- ಕ್ಲಬ್‌ಗಳಲ್ಲಿ ಕುಳಿತುಕೊಳ್ಳಲಾಗದಷ್ಟು ಜನರು ಜಮಾವಣೆಗೊಂಡಿದ್ದಾರೆ. ಜನರ ಗಮನ ಸೆಳೆಯಲು ಅನಿಯಮಿತ ಮದ್ಯ ಹಾಗೂ ಊಟದ ವಿಶೇಷ ಆಫರ್ ಗಳನ್ನ ನೀಡಿದವು. ಪ್ರತೀವರ್ಷದಂತೆ ಈ ಬಾರಿಯೂ ಆನ್‌ಲೈನ್ ಮೂಲಕ ಬುಕ್ಕಿಂಗ್ ಹೆಚ್ಚಾಗಿರುವುದು ಕಂಡುಬಂತು.

ಇದನ್ನೂ ಓದಿ:ಹೊಸ ವರ್ಷಕ್ಕೆ ನಮ್ಮ ಮೆಟ್ರೋ ಮಾದರಿಯಲ್ಲಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸೇವೆ

ABOUT THE AUTHOR

...view details