ಕರ್ನಾಟಕ

karnataka

ETV Bharat / state

ದೀರ್ಘ ವರ್ಷಗಳ ಬಳಿಕ ವಿಧಾನಸೌಧದ ಸಿಎಂ ಕೊಠಡಿಗೆ ಹೊಸ ರೂಪ

ಹಲವು ವರ್ಷಗಳ ಬಳಿಕ ವಿಧಾನಸೌಧದಲ್ಲಿನ ಮುಖ್ಯಮಂತ್ರಿಗಳ ಕೊಠಡಿಯ ನವೀಕರಣ ಕಾರ್ಯ ಮಾಡಲಾಗುತ್ತಿದೆ.

cm office
ಸಿಎಂ ಕೊಠಡಿ (ETV Bharat)

By ETV Bharat Karnataka Team

Published : 14 hours ago

ಬೆಂಗಳೂರು:ಸುಮಾರು 15ಕ್ಕೂ ಅಧಿಕ ವರ್ಷಗಳ ಬಳಿಕ ವಿಧಾನಸೌಧದಲ್ಲಿನ ಮೂರನೇ ಮಹಡಿಯಲ್ಲಿನ ಮುಖ್ಯಮಂತ್ರಿಗಳ ಕೊಠಡಿಯನ್ನು ನವೀಕರಣ ಮಾಡಲಾಗಿದ್ದು, ಹೊಸ ರೂಪ ನೀಡಲಾಗುತ್ತಿದೆ.

ಕಳೆದ ಎರಡು ತಿಂಗಳಿಂದ ವಿಧಾನಸೌಧದ ಮೂರನೇ ಮಹಡಿಯಲ್ಲಿನ 323ನೇ ಸಂಖ್ಯೆಯ ಸಿಎಂ ಕೊಠಡಿಯ ನವೀಕರಣ ಕಾಮಗಾರಿ ನಡೆಯುತ್ತಿದೆ. ಇದೀಗ ಬಹುತೇಕ ಪೂರ್ಣವಾಗಿದ್ದು, ಸಿಎಂ ಸಿದ್ದರಾಮಯ್ಯ ಸದ್ಯದಲ್ಲೇ ನವೀಕೃತ ಕೊಠಡಿಯಲ್ಲಿ ಪೂಜೆ ನೆರವೇರಿಸಿ ಪ್ರವೇಶಿಸಲಿದ್ದಾರೆ. ಸುಮಾರು 15ಕ್ಕೂ ಅಧಿಕ ವರ್ಷಗಳ ಬಳಿಕ ಸಿಎಂ ಕೊಠಡಿಗೆ ಹೊಸ ಟಚ್ ನೀಡಲಾಗುತ್ತಿದೆ. ಸಿದ್ದರಾಮಯ್ಯ ಮೌಖಿಕ ಸೂಚನೆ ಮೇರೆಗೆ ಕೊಠಡಿಯ ನವೀಕರಣ ಮಾಡಲಾಗುತ್ತಿದೆ.

ಕೊಠಡಿ ಒಳಾಂಗಣ ಸಂಪೂರ್ಣ ನವೀಕರಣ: ಲೋಕೋಪಯೋಗಿ ಇಲಾಖೆಯು ನವೀಕರಣ ಕಾರ್ಯವನ್ನು ಕಳೆದ ಎರಡು ತಿಂಗಳಿಂದ ಭರದಿಂದ ಕೈಗೊಳ್ಳುತ್ತಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಕೊಠಡಿಯ ನವೀಕರಣ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಮಾಧ್ಯಮಗಳಿಂದ ಮರೆಮಾಚಿ ಗೌಪ್ಯವಾಗಿ ಕೊಠಡಿಯೊಳಗೆ ನವೀಕರಣ ಕಾಮಗಾರಿ ಮಾಡಲಾಗುತ್ತಿದೆ. ಕೊಠಡಿಯ ಒಳಾಂಗಣವನ್ನು ಸಂಪೂರ್ಣವಾಗಿ ನವೀಕರಿಸಿ, ಹೊಸ ರೂಪ ನೀಡಲಾಗುತ್ತಿದೆ. ಕೊಠಡಿ ನವೀಕರಣದ ನಿಖರ ವೆಚ್ಚವನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಕೊಠಡಿಯನ್ನು ನವೀಕರಿಸಲಾಗಿತ್ತು. ಬಳಿಕ ಕೊಠಡಿಗೆ ಯಾವುದೇ ರೀತಿಯ ನವೀಕರಣ ಮಾಡಿರಲಿಲ್ಲ. ಬಣ್ಣ ಬಳಿಯುವುದು, ಪೀಠೋಪಕರಣಕ್ಕೆ ಪಾಲಿಷ್ ಸೇರಿದಂತೆ ಸಣ್ಣಪುಟ್ಟ ದುರಸ್ತಿ ಕಾಮಗಾರಿ ಬಿಟ್ಟರೆ, ದೊಡ್ಡ ಪ್ರಮಾಣದಲ್ಲಿ ಕೊಠಡಿಯ ಒಳಾಂಗಣ ನವೀಕರಣ ಮಾಡಿರಲಿಲ್ಲ.

ಇದನ್ನೂ ಓದಿ:ವಾಯುವ್ಯ ಸಾರಿಗೆ ಸಂಸ್ಥೆಗೆ ಹೈಟೆಕ್ ಬಸ್​ಗಳ ಬಲ: ಈ ವಾಹನಗಳ ವಿಶೇಷತೆ ಏನ್​ ಗೊತ್ತಾ?

ಸಂದರ್ಶಕರ ಕೊಠಡಿಗೆ ಐಷಾರಾಮಿ ಟಚ್:ಸಂಪೂರ್ಣ ಒಳಾಂಗಣ ನವೀಕರಣ, ಶೌಚಾಲಯ, ಕೊಠಡಿಯ ನೆಲ, ಗೋಡೆಗಳ ವಿನ್ಯಾಸ, ಸೀಲಿಂಗ್, ವುಡನ್ ವಾಲ್ ಸೀಲಿಂಗ್, ವಿರಾಮ ಕೊಠಡಿ, ಸಂದರ್ಶಕರ ಕೊಠಡಿಗೆ ಐಷಾರಾಮಿ ಟಚ್ ನೀಡಲಾಗುತ್ತಿದೆ. ಕೊಠಡಿಯ ಇಂಟೀರಿಯರ್ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಹೊಸ ಪೀಠೋಪಕರಣ, ಹೈಟೆಕ್ ಸ್ಪರ್ಶದೊಂದಿಗೆ ಕೊಠಡಿಗೆ ಹೊಸ ರೂಪ ನೀಡಲಾಗುತ್ತಿದೆ.

ಸಾಮಾನ್ಯವಾಗಿ ಹೊಸ ಸಂಪುಟ ಸಚಿವರು ಬಂದಾಗಲೆಲ್ಲ ಅವರು ವಿಧಾನಸೌಧದಲ್ಲಿನ ತಮ್ಮ ಕೊಠಡಿಗಳನ್ನು ನವೀಕರಣ ಮಾಡಿಸುತ್ತಾರೆ. ಡಿಸಿಎಂ ಡಿ. ಕೆ. ಶಿವಕುಮಾರ್ ಸಹ ವಿಧಾನಸೌಧದಲ್ಲಿನ ತಮ್ಮ ಕಾನ್ಫರೆನ್ಸ್ ಕೊಠಡಿಗೆ ಹೊಸ ರೂಪ ನೀಡಿದ್ದರು. ಆದರೆ, ಸಿಎಂ ಕೊಠಡಿಗೆ 15ಕ್ಕೂ ಅಧಿಕ ವರ್ಷದಿಂದ ಯಾವುದೇ ಹೊಸ ಟಚ್ ಕೊಟ್ಟಿರಲಿಲ್ಲ. ಆದರೆ, ಇದೀಗ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಮುಖ್ಯಮಂತ್ರಿ ಕೊಠಡಿಗೆ ಐಷಾರಾಮಿ ರೂಪ ನೀಡಲಾಗುತ್ತಿದೆ.

ಇದನ್ನೂ ಓದಿ:ಬಿಜೆಪಿಯಿಂದ ಕಾಂಗ್ರೆಸ್​ನ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಫರ್: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details