ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಘಟನೆ ಹಾಗೂ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ವಿಧಾನಸೌಧ ಹಾಗೂ ಹೈಕೋರ್ಟ್ನಲ್ಲಿ ಹೈಟೆಕ್ ಬ್ಯಾಗ್ ಸ್ಕ್ಯಾನರ್ಗಳನ್ನು ಅಳವಡಿಕೆ ಮಾಡಿ, ಭದ್ರತೆಗೆ ಹೆಚ್ಚಿನ ಒತ್ತು ನೀಡಿದೆ.
ಸಣ್ಣ ವಸ್ತುವನ್ನು ಕೊಂಡೊಯ್ದರೂ ಈ ಸ್ಕ್ಯಾನರ್ನಲ್ಲಿ ಮಾಹಿತಿ ಲಭಿಸಲಿದೆ. ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮೊದಲು ಪ್ರಾಯೋಗಿಕ ಬ್ಯಾಗ್ ಸ್ಕ್ಯಾನರ್ ಪ್ರಾರಂಭವಾಗಿದ್ದು, ಒಟ್ಟು 14 ಬ್ಯಾಗ್ ಸ್ಕ್ಯಾನರ್ಗಳನ್ನು ಸರ್ಕಾರ ನೀಡಿದೆ. ಹೈಕೋರ್ಟ್ಗೆ ಆರು ಬ್ಯಾಗ್ ಸ್ಕ್ಯಾನರ್ಗಳು, ವಿಧಾನಸೌಧಕ್ಕೆ ಐದು ಬ್ಯಾಗ್ ಸ್ಕ್ಯಾನರ್ಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ರಾಜಭವನ, ಲೋಕಾಯುಕ್ತ, ವಿಕಾಸಸೌಧ, ಶಾಸಕರ ಭವನ ಹಾಗೂ ಪೊಲೀಸ್ ಕಮಿಷನರ್ ಕಚೇರಿಗೆ ಅಳವಡಿಸಲು ಸಿದ್ಧತೆ ನಡೆಸಲಾಗಿದೆ.