ಕರ್ನಾಟಕ

karnataka

ETV Bharat / state

ಮಣ್ಣು ಕುಸಿತ ತಡೆಗೆ ಹೊಸ ಪ್ಲ್ಯಾನ್; ಹಸಿರು ಹೊದಿಕೆ ಹಾಕಲು ಮುಂದಾದ ಹೆದ್ದಾರಿ ಪ್ರಾಧಿಕಾರ - Grass Planting In Road Side

ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಳಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಹಸಿರು ಹೊದಿಕೆ ಹಾಕಲು ಮುಂದಾಗಿದೆ.

By ETV Bharat Karnataka Team

Published : Jun 12, 2024, 10:49 PM IST

grass planting
ಹಸಿರು ಹೊದಿಕೆ (ETV Bharat)

ಬಂಟ್ವಾಳ(ದಕ್ಷಿಣ ಕನ್ನಡ): ರಾಷ್ಟ್ರೀಯ ಹೆದ್ದಾರಿಯ ಬದಿ ಕಾಮಗಾರಿ ನಡೆಯುವ ಜಾಗದಲ್ಲಿ ಮಣ್ಣು ಸಡಿಲಗೊಂಡು ಕುಸಿಯುವ ಭೀತಿ ಇರುವ ಹಿನ್ನೆಲೆಯಲ್ಲಿ ಅದಕ್ಕೆ ಹಸಿರು ಹೊದಿಕೆ ಹಾಕಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಕಾಮಗಾರಿ ಪಡೆದುಕೊಂಡ ಗುತ್ತಿಗೆ ಸಂಸ್ಥೆಗಳ ಮೂಲಕ ಹಸಿರು ಹುಲ್ಲು ನೆಡುವ ಕೆಲಸ ಮಾಡಿಸುತ್ತಿದೆ.

ಈಗಾಗಲೇ ಬಿ.ಸಿ.ರೋಡ್​ನ ಮುಖ್ಯ ವೃತ್ತದಿಂದ ಪಾಣೆಮಂಗಳೂರು ಸೇತುವೆವರೆಗೆ ಹಾಕಲಾದ ಮಣ್ಣು ಜರಿಯುವುದನ್ನು ತಡೆಯಲು ಹೆದ್ದಾರಿಯ ಇಕ್ಕೆಲಗಳಲ್ಲಿ ಹಸಿರು ಹುಲ್ಲು ನೆಡುವ ಕಾರ್ಯವನ್ನು ನಡೆಸಲಾಗಿದೆ. ಬಿ.ಸಿ.ರೋಡ್​ನಿಂದ ಅಡ್ಡಹೊಳೆವರೆಗೆ ಚತುಷ್ಪಥ ರಸ್ತೆ ಕಾಮಗಾರಿಯ ಹಲವೆಡೆ ಮಣ್ಣು ತುಂಬಿಸಿ ರಸ್ತೆ ಎತ್ತರಗೊಳಿಸಲಾಗಿದ್ದರೆ, ಕೆಲವೆಡೆ ಗುಡ್ಡ ಅಗೆದು, ರಸ್ತೆ ಅಗಲಗೊಳಿಸಲಾಗಿತ್ತು.

ಹಸಿರು ಹೊದಿಕೆ (ETV Bharat)

ಮಳೆಗಾಲ ಆರಂಭಗೊಂಡು ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ನಿರ್ಮಿಸಲಾದ ಕಡೆಗಳಲ್ಲಿ ಮಣ್ಣು ಸಡಿಲಗೊಂಡು, ಜರಿಯುವ ಸಾಧ್ಯತೆ ಇದೆ. ಈ ಸಂದರ್ಭ ರಸ್ತೆ ಸಂಪರ್ಕ ಕಡಿತವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

ಹೊಸದಾಗಿ ಮಣ್ಣು ತುಂಬಿಸಿ, ರಸ್ತೆ ನಿರ್ಮಿಸಲಾಗಿದ್ದು, ರೋಲರ್ ಹಾಕಿ ಮಣ್ಣನ್ನು ಹದ ಮಾಡಿ ಕೂರಿಸಲಾಗಿದೆ. ಇಲ್ಲಿನ ಅತಿಯಾದ ಮಳೆಗೆ ಹೊದಿಕೆಯೊಳಗಿನಿಂದ ಮಣ್ಣು ಜರಿಯಲು ಆರಂಭವಾದರೆ, ನಿಲ್ಲುವುದು ಕಷ್ಟ ಎಂಬ ಅಭಿಪ್ರಾಯ ಸ್ಥಳೀಯರದ್ದು. ಕಲ್ಲು ಕಟ್ಟಿದರಷ್ಟೇ ಈ ಭಾಗದಲ್ಲಿ ಬಾಳಿಕೆ ಬರುತ್ತದೆ ಎಂಬ ಮಾತುಗಳಿವೆ.

ಆದರೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಹೆದ್ದಾರಿ ಇಕ್ಕೆಲಗಳಲ್ಲೂ ಹುಲ್ಲು ನೆಡುವ ಕಾರ್ಯವನ್ನು ತಮಿಳುನಾಡಿನ ಸಂಸ್ಥೆಯೊಂದಕ್ಕೆ ಗುತ್ತಿಗೆ ವಹಿಸಿ ನೀಡಿದೆ. ತೆಂಗಿನ ಸಿಪ್ಪೆಯಿಂದ ತಯಾರಿಸಿದ ಹೊದಿಕೆ ಹಾಕಿ, ಲಾವಂಚವನ್ನು ನಾಟಿ ಮಾಡಲಾಗುತ್ತಿದೆ.

ಹಸಿರು ಹೊದಿಕೆ (ETV Bharat)

ಹುಲ್ಲು ಬೆಳೆದು ಮಣ್ಣಿನ ರಕ್ಷಣೆ ಮಾಡಲು ಒಂದು ವರ್ಷವಾದರೂ ಬೇಕು. ಆದರೆ ಮಣ್ಣು ಮಳೆನೀರಿಗೆ ಕೊಚ್ಚಿಕೊಂಡು ಹೋಗದಂತೆ ರಕ್ಷಣೆ ನೀಡಲು, ತೆಂಗಿನಕಾಯಿ ಸಿಪ್ಪೆಯಿಂದ ತಯಾರಿಸಿದ ಹೊದಿಕೆ ಹಾಸಲಾಗಿದೆ. ಅದರ ಮೇಲೆ ನೆಡುವ ಹುಲ್ಲು ಒಂದು ವರ್ಷದ ಬಳಿಕ ಶಕ್ತಿಶಾಲಿಯಾಗಿ ಮಣ್ಣು ಕರಗದಂತೆ ರಕ್ಷಣೆ ನೀಡುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಬೆಂ-ಮೈ ಎಕ್ಸ್‌ಪ್ರೆಸ್‌ ಹೈವೇ ಮುಳುಗಡೆ: ತುರ್ತು ಕಾಮಗಾರಿ ನಡೆಸಿ ಸಮಸ್ಯೆ ಬಗೆಹರಿಸಿದ NHAI

ABOUT THE AUTHOR

...view details