ಮೈಸೂರು:ಒಂದೇ ತಿಂಗಳಿನಲ್ಲಿ ದಕ್ಷಿಣಕಾಶಿ ಶ್ರೀ ನಂಜುಂಡೇಶ್ವರನಿಗೆ 1.72 ಕೋಟಿ ರೂಪಾಯಿ ಕಾಣಿಕೆಯನ್ನು ಭಕ್ತಾದಿಗಳು ಅರ್ಪಿಸಿದ್ದಾರೆ.
ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದ ಆವರಣದಲ್ಲಿ ಹುಂಡಿ ಎಣಿಕೆ ಮಾಡಲಾಯ್ತು. ಈ ವೇಳೆ 1,72,85,296 ರೂ. ಕಾಣಿಕೆ ಸಂಗ್ರಹವಾಗಿದ್ದು, ಇದರೊಂದಿಗೆ 92 ಗ್ರಾo ಚಿನ್ನಾಭರಣ, 3 ಕೆಜಿ 500 ಗ್ರಾಂ ಬೆಳ್ಳಿ, ಹಾಗೂ 33 ವಿದೇಶಿ ಕರೆನ್ಸಿಗಳು ಲಭ್ಯವಾಗಿವೆ. ಹುಣ್ಣಿಮೆ ಸೇರಿದಂತೆ ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದರಿಂದ ಹುಂಡಿಯಲ್ಲಿ ಈ ಪ್ರಮಾಣದ ಮೊತ್ತ ಸಂಗ್ರಹವಾಗಿದೆ.