ಕರ್ನಾಟಕ

karnataka

ETV Bharat / state

ಜುಲೈ 15ರಿಂದ ಮುಂಗಾರು ಅಧಿವೇಶನ: ಸ್ಪೀಕರ್ ಯು.ಟಿ.ಖಾದರ್ - Monsoon Session

ಮುಂಗಾರು ಅಧಿವೇಶನ ಜುಲೈ 15ರಿಂದ ಜುಲೈ 26ರವರೆಗೆ ನಡೆಯಲಿದೆ ಎಂದು ಸ್ಪೀಕರ್​ ಯು.ಟಿ ಖಾದರ್​ ಮಾಹಿತಿ ನೀಡಿದರು. ಈ ವೇಳೆ ಯಾವ ವಿಚಾರಗಳು, ಗಣ್ಯರಿಗೆ ಸಂತಾಪ ಸೇರಿದಂತೆ ಅನೇಕ ಮಾಹಿತಿಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು.

SPEAKER UT KHADER  ENCOURAGEMENT FOR SPORTS  APP FOR PEOPLE  BENGALURU
ಸ್ಪೀಕರ್ ಯು.ಟಿ.ಖಾದರ್ (ETV Bharat)

By ETV Bharat Karnataka Team

Published : Jul 12, 2024, 5:40 PM IST

Updated : Jul 12, 2024, 8:27 PM IST

ಸ್ಪೀಕರ್ ಯು.ಟಿ.ಖಾದರ್ ಹೇಳಿಕೆ (ETV Bharat)

ಬೆಂಗಳೂರು: 16ನೇ ವಿಧಾನಸಭೆಯ 4ನೇ ಮುಂಗಾರು ಅಧಿವೇಶನ ಜುಲೈ 15 ರಿಂದ ಜುಲೈ 26 ರವರೆಗೆ ನಡೆಯಲಿದೆ. ಒಟ್ಟು 9 ದಿನಗಳ ಕಾಲ ಅಧಿವೇಶನ ನಡೆಯಲಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್ ಅವರು, ಜುಲೈ 15 ರಂದು ಅಧಿವೇಶನ ಆರಂಭದ ದಿನ. ಇಲ್ಲಿಯವರಗೆ ನಿಧನ ಹೊಂದಿರುವ ಗಣ್ಯ ವ್ಯಕ್ತಿಗಳ ಕುರಿತು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಲಾಗುವುದು ಎಂದರು.

ಅಧಿವೇಶನದಲ್ಲಿ ಸರ್ಕಾರದಿಂದ ಸ್ವೀಕರಿಸಲಾಗುವ ವಿಧೇಯಕಗಳನ್ನು ಪರ್ಯಾಲೋಚನೆಗೆ ಹಾಗೂ ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. ಈ ಅಧಿವೇಶನದಲ್ಲಿ ಒಟ್ಟು 9 ದಿನಗಳ ಕಾಲ ಪ್ರಶ್ನೋತ್ತರ ಕಲಾಪವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಗಮನ ಸೆಳೆಯುವ ಸೂಚನೆ, ಶೂನ್ಯವೇಳೆ, ನಿಲುವಳಿ ಸೂಚನೆ, ನಿಯಮ 69ರ ಸೂಚನೆಗಳು, ಖಾಸಗಿ ಸದಸ್ಯರುಗಳ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

2023-24ನೇ‌ ಸಾಲಿನ ವಿಧಾನ ಮಂಡಲ, ವಿಧಾನ ಸಭೆಯ ಸ್ಥಾಯಿ ಸಮಿತಿಗಳ ಅವಧಿ ಆಗಸ್ಟ್ 8 ರಂದು ಮುಕ್ತಾಯಗೊಳ್ಳಲಿದೆ. ಹೀಗಾಗಿ 2024-25ನೇ ಸಾಲಿಗೆ ಹೊಸದಾಗಿ ಸಮಿತಿಗಳನ್ನು ರಚಿಸುವ ಸಂಬಂಧ ಚುನಾವಣಾ ಪ್ರಸ್ತಾವ ಮಂಡಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಶಾಸಕರಿಗೆ ಟೀ ಕಪ್ : ಅಧಿವೇಶನ ಸಮಯಕ್ಕೆ ಸರಿಯಾಗಿ ಹಾಜರಾಗುವ ಶಾಸಕರಿಗೆ ಟೀ ಕಪ್ ನೀಡಲಾಗುವುದು. ಕಳೆದ ಬಾರಿ ನೀಡಿದ ಅವಕಾಶ ಈ ಬಾರಿಯೂ ನೀಡುತ್ತೇವೆ. ಇಡೀ‌ ದಿನ ಇರುವ ಸದಸ್ಯರುಗಳಿಗೆ ವಿಶೇಷ ಅವಕಾಶ ನೀಡಲಾಗುತ್ತದೆ. ಹೊಸ ತಂತ್ರಜ್ಞಾನ ಮೂಲಕ ಶಾಸಕರು ಎಷ್ಟುತ್ತಿಗೆ ಬರುತ್ತಾರೆ, ಹೋಗುತ್ತಾರೆ ಎಂದು ತಿಳಿದುಕೊಳ್ಳಲಾಗುವುದು. ಒಬ್ಬ ಸದಸ್ಯ ಅಧಿವೇಶನದ ಒಳಗೆ ಎಷ್ಟೊತ್ತು ಕುಳಿತಿದ್ದಾರೆ ಎಂಬ ಮಾಹಿತಿ ಪಡೆದುಕೊಳ್ಳುತ್ತೇವೆ ಎಂದರು.

ವಿಧಾನಮಂಡಲದ ಕಪ್ : ಕ್ರೀಡೆಗೆ ಪ್ರೋತ್ಸಾಹ ನೀಡಲು ಶಾಸಕರು, ವಿಧಾನಮಂಡಲದ ಸಿಬ್ಬಂದಿಗೆ ಕಪ್ ಇಡಲಾಗಿದೆ. ವಿಧಾನಸೌಧದ ಬ್ಯಾಕ್ವೆಂಟ್ ಹಾಲ್​ನಲ್ಲಿ ಜು.20 ರಂದು ಚೆಸ್ ಸ್ಪರ್ಧೆ ಏರ್ಪಡಿಸಲಾಗಿದೆ. ವಿಧಾನಸಭೆ ಮತ್ತು‌ ವಿಧಾನ ಪರಿಷತ್​ನ ಸದಸ್ಯರು ಭಾಗಿಯಾಗಬಹುದು. ಗೆದ್ದವರಿಗೆ ಬಹುಮಾನ ನೀಡುತ್ತೇವೆ. ಕಲಾಪ‌ ವೀಕ್ಷಣೆಗೆ ಬರುವ ಮಕ್ಕಳು, ವಿದ್ಯಾರ್ಥಿಗಳಿಗೆ ಎಂದಿನಂತೆ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.

ಆ್ಯಪ್ ಹಾಕಲು ಚಿಂತನೆ : ವಿಧಾನಸೌಧದ ಯಾವ ಕೊಠಡಿಯಲ್ಲಿ ಯಾವ ಸಚಿವರು ಇದ್ದಾರೆ. ಕೊಠಡಿ ಸಂಖ್ಯೆ, ಇಲಾಖೆ ಹೆಸರು ಸೇರಿದಂತೆ ವಿಧಾನಸೌಧದ ಸಂಪೂರ್ಣ ಮಾಹಿತಿಯುಳ್ಳ ಆ್ಯಪ್ ಸಿದ್ಧಪಡಿಸಲು ಚಿಂತನೆ ನಡೆದಿದೆ. ಮುಂದಿನ‌ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ ಎಂದು ಸ್ಪೀಕರ್ ತಿಳಿಸಿದರು.

2023-24 ನೇ ಸಾಲಿನಲ್ಲಿ ಅತ್ಯುತ್ತಮ ಶಾಸಕರ ಪ್ರಶಸ್ತಿ ಆಯ್ಕೆ ಮಾಡಲು ಆಯ್ಕೆ ಸಮಿತಿ ರಚಿಸಲಾಗುವುದು. ಈ ವೇಳೆ, ಶಾಸಕ ಬಿ.ನಾಗೇಂದ್ರ ಅವರನ್ನು ವಶಕ್ಕೆ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್​, ಇಡಿ ಅವರು ನಮಗೆ ಮಾಹಿತಿ ನೀಡಿಲ್ಲ. ಅಧಿವೇಶನದ ಒಳಗೆ ಇದ್ದರೆ ನಮ್ಮ ಅನುಮತಿ ಪಡೆಯಬೇಕು. ಹೊರಗಿದ್ದರೆ ಒಬ್ಬ ಶಾಸಕರನ್ನು ವಶಕ್ಕೆ ತೆಗೆದುಕೊಳ್ಳುವಾಗ ಸ್ಪೀಕರ್​ಗೆ ಮಾಹಿತಿ ನೀಡಬೇಕಾಗುತ್ತದೆ. ಆದರೆ ಆ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಹೇಳಿದರು.

ಎಪ್ಪತ್ತು ವರ್ಷಗಳ ನಂತರ ವಿಧಾನಸಭೆ ಪ್ರವೇಶದ್ವಾರದ ಬಳಿ ಸ್ವಲ್ಪ ಬದಲಾವಣೆ ಮಾಡಿದ್ದೇವೆ. ಕಬ್ಬಿಣದ ಗ್ರಿಲ್ ರೀತಿ ಇತ್ತು. ವಿಶಿಷ್ಠ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಜುಲೈ 15 ರಂದು ಬೆಳಗ್ಗೆ 10.30 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರವೇಶದ್ವಾರವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಓದಿ:ನಾಗೇಂದ್ರರನ್ನು ಇಡಿ ವಶಕ್ಕೆ ಪಡೆಯುವ ಅವಶ್ಯಕತೆ ಇರಲಿಲ್ಲ: ಡಿಸಿಎಂ ಡಿಕೆಶಿ - D K Shivakumar

Last Updated : Jul 12, 2024, 8:27 PM IST

ABOUT THE AUTHOR

...view details