ಕರ್ನಾಟಕ

karnataka

ETV Bharat / state

ದೊಡ್ಡಬಳ್ಳಾಪುರ : ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಹುಂಡಿ ಕಳವು - VEERANJANEYA TEMPLE MONEY STOLEN

ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಹುಂಡಿ ಕಳ್ಳತನವಾಗಿದೆ.

sri-veeranjaneya-temple
ಶ್ರೀ ವೀರಾಂಜನೇಯ ದೇವಸ್ಥಾನ (ETV Bharat)

By ETV Bharat Karnataka Team

Published : Dec 14, 2024, 5:45 PM IST

ದೊಡ್ಡಬಳ್ಳಾಪುರ : ತಾಲೂಕಿನ ಜಿಂಕೆಬಚ್ಚಹಳ್ಳಿ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಇಂದು ಮುಂಜಾನೆ ಸಮಯದಲ್ಲಿ ಹುಂಡಿ ಕಳ್ಳತನವಾಗಿದೆ. ಬೆಳಗ್ಗೆ ದೇವಸ್ಥಾನಕ್ಕೆ ಬಂದಾಗ ಕಳವು ಘಟನೆ ಬೆಳಕಿಗೆ ಬಂದಿದೆ.

ನಿನ್ನೆ ದೇವಾಲಯದಲ್ಲಿ ಹನುಮಜಯಂತಿ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಲಾಗಿತ್ತು. ರಾತ್ರಿ ಒಂದು ಗಂಟೆಯವರೆಗೂ ಪೂಜಾ ಕಾರ್ಯಕ್ರಮವಿತ್ತು. ಒಂದು ಗಂಟೆಯ ನಂತರ ಕಳ್ಳತನ ನಡೆದಿರಬಹುದೆಂದು ಗ್ರಾಮಸ್ಥರು ಹೇಳಿದ್ದಾರೆ.

ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಹುಂಡಿ ಕಳವು (ETV Bharat)

ಹುಂಡಿ ಒಡೆದಿರುವ ಕಳ್ಳರು ಹಣ ಹಾಗೂ ಸಿಸಿ ಕ್ಯಾಮರಾದ ಡಿವಿಆರ್​ಗಳ ಸಮೇತ ಪರಾರಿಯಾಗಿದ್ದಾರೆ. ಹುಂಡಿಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಭಕ್ತರ ಕಾಣಿಕೆ ಹಣ ಇತ್ತು ಎಂದು ಸ್ಥಳೀಯರು ಹೇಳಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ :ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಶ್ರೀನಿವಾಸ ನಗರದ ಮನೆಯೊಂದರಲ್ಲಿ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.

ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ (ETV Bharat)

ಕಳೆದ ಎರಡು ದಿನಗಳಿಂದ ವಿಶ್ವಮೋಹನ್ ಗುಪ್ತಾ ಕುಟುಂಬ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ತೆರಳಿತ್ತು. ಇದರ ಸುಳಿವು ಅರಿತ ಕಳ್ಳರು ಶುಕ್ರವಾರ ರಾತ್ರಿ ಶ್ರೀನಿವಾಸನಗರದಲ್ಲಿರುವ ವಿಶ್ವ ಮೋಹನ್ ಗುಪ್ತಾ ಅವರ ಮನೆಯ ಡೋರ್ ಲಾಕ್ ಕತ್ತರಿಸಿ ಮನೆಗೆ ನುಗ್ಗಿದ್ದಾರೆ. ನಂತರ ಲಾಕರ್​ಗಳನ್ನು ತೆಗೆದು ಚಿನ್ನಾಭರಣ, ಹಣವನ್ನು ದೋಚಿದ್ದಾರೆ.

ಇದೇ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ವಿಶ್ವ ಮೋಹನ ಗುಪ್ತಾ ಅವರ ಅಂಗಡಿಯಲ್ಲಿ ಕೆಲಸ ಮಾಡುವಂತಹ ವ್ಯಕ್ತಿಯೊಬ್ಬರು ವಾಸವಿದ್ದರು. ಅವರ ಕೊಠಡಿಯ ಹೊರಭಾಗದಲ್ಲಿ ಲಾಕ್ ಮಾಡಿದ್ದಾರೆ. ನಂತರ ಅವರು ಸ್ಥಳೀಯರಿಗೆ ಕರೆ ಮಾಡಿ ಲಾಕ್ ಓಪನ್ ಮಾಡಿಸಿ ಹೊರ ಬಂದ ಬಳಿಕ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಮನೆ ಯಜಮಾನರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಒಂದೇ ದಿನ ಮೂರು ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ ; ಸಿಸಿಟಿವಿ ಕ್ಯಾಮರಾ ಮರೆಮಾಚಿದ ಮುಸುಕುಧಾರಿ - money stolen - MONEY STOLEN

ABOUT THE AUTHOR

...view details