ಕರ್ನಾಟಕ

karnataka

ETV Bharat / state

ಏ.14ರಂದು ರಾಜ್ಯದಲ್ಲಿ ಮೋದಿ ಮತ ಪ್ರಚಾರ: ಮೈಸೂರಲ್ಲಿ ಸಮಾವೇಶ, ಮಂಗಳೂರಲ್ಲಿ ರೋಡ್ ಶೋ - Modi Campaign

ಬೆಂಗಳೂರಿನ ಬದಲು ಪ್ರಧಾನಿ ಮೋದಿ ಮೈಸೂರಿನಲ್ಲಿ ಸಮಾವೇಶ ನಡೆಸಲಿದ್ದಾರೆ ಎಂದು ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಸುನೀಲ್ ಕುಮಾರ್ ತಿಳಿಸಿದ್ದಾರೆ.

Sunil Kumar
ಸುನೀಲ್ ಕುಮಾರ್

By ETV Bharat Karnataka Team

Published : Apr 10, 2024, 9:55 PM IST

ಬೆಂಗಳೂರು: ಏಪ್ರಿಲ್ 14ರಂದು ಬೆಂಗಳೂರಲ್ಲಿ ಆಯೋಜಿಸಲಾಗಿದ್ದ ಪ್ರಧಾನಿ ಮೋದಿ ಅವರ ರೋಡ್ ಶೋ ರದ್ದಾಗಿದ್ದು, ಅದರ ಬದಲು ಮೈಸೂರಿನಲ್ಲಿ ರ್‍ಯಾಲಿ ನಡೆಸಲಿದ್ದಾರೆ. ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಈ ಸಂಬಂಧ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಸುನೀಲ್ ಕುಮಾರ್, ಏ.14ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಬರಲಿದ್ದಾರೆ. ಅಂದು ಸಂಜೆ 4 ಗಂಟೆಗೆ ಮೈಸೂರು ಮಹಾರಾಜ ಮೈದಾನದಲ್ಲಿ ಚಾಮರಾಜನಗರ, ಮಂಡ್ಯ ಕ್ಷೇತ್ರ ಸೇರಿಸಿ ಸಮಾವೇಶ ನಡೆಸಲಿದ್ದಾರೆ. ಇದು ಬಿಜೆಪಿ, ಜೆಡಿಎಸ್‌ ಮುಖಂಡರನ್ನೊಳಗೊಂಡ ಸಮಾವೇಶವಾಗಿರಲಿದೆ ಎಂದರು.

ಅಂದು ಸಂಜೆ 6 ಗಂಟೆಗೆ ಮಂಗಳೂರಿನಲ್ಲಿ ರೋಡ್ ಶೋದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ನಾರಾಯಣ್ ಗುರು ವೃತ್ತದಿಂದ, ನವ ಭಾರತ್ ವೃತ್ತದವರೆಗೂ ರೋಡ್ ಶೋ ನಡೆಯಲಿದೆ. ಸಂಜೆ 6 ಗಂಟೆಗೆ 1.5 ಕಿ.ಮೀ ರೋಡ್ ಶೋ ನಡೆಯಲಿದೆ ಎಂದು ವಿವರಿಸಿದರು.

ಏ.15ಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಬೆಂಗಳೂರಿಗೆ ಆಗಮಿಸಲಿದ್ದು, ಮೂರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಧ್ಯಮದ ಜತೆ ಸಂವಾದ, ಸಂಜೆ 4 ಗಂಟೆಗೆ ರಾಜ್ಯದ ಬೇರೆ ಬೇರೆ ಗಣ್ಯರ ಜತೆ ವಿಶೇಷ ಸಭೆ, ಬಳಿಕ ಸಂಜೆ 7 ಕ್ಕೆ ಪ್ರಬುದ್ದರ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.‌

ಏಪ್ರಿಲ್ 19ರಂದು ಬೆಂಗಳೂರಿಗೆ ಮೋದಿ?:ಪ್ರಧಾನಿ ಮೋದಿ ಏ. 19ರಂದು ಬೆಂಗಳೂರಲ್ಲಿ ರೋಡ್ ಶೋ ನಡೆಸುವ ಸಾಧ್ಯತೆ ಇದೆ ಎಂದು ಸುನೀಲ್ ಕುಮಾರ್ ಇದೇ ವೇಳೆ ತಿಳಿಸಿದರು.

ಮನೆಯಂಗಳದಲ್ಲಿ ಸಭೆ:ಏಪ್ರಿಲ್ 15, 16, 17ರಂದು ಮೊದಲ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಮನೆಯಂಗಳದಲ್ಲಿ ಸಭೆ ಎಂಬ ಕಾರ್ಯಕ್ರಮ ಮಾಡಲು ರಾಜ್ಯ ಬಿಜೆಪಿ ಮುಂದಾಗಿದೆ ಎಂದು ತಿಳಿಸಿದರು. ಈ ಮೂಲಕ ಬಿಜೆಪಿ ಪ್ರತಿ ಬೂತ್‌ನಲ್ಲಿ ಎರಡು ಸಭೆಗಳನ್ನು ನಡೆಸಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ನೇರವಾಗಿ ತಲುಪಿಸುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ರಾಜ್ಯ ಸರ್ಕಾರದ ದುರಾಡಳಿತದ ಜತೆ ಕೇಂದ್ರದ ಸಾಧನೆಗಳನ್ನು ಮನೆಮನೆಗೆ ತಲುಪಿಸುತ್ತೇವೆ. ಇದಕ್ಕಾಗಿ ಈ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡ್ತಿದ್ದೇವೆ. ಮನೆಯಂಗಳದಲ್ಲಿ ಸಂವಾದ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಮನೆಯಂಗಳದಲ್ಲಿ ಸಂವಾದ ಎಲ್ಲ ಬೂತ್​ಗಳಲ್ಲೂ ನಡೆಯಲಿದೆ. ಕೇಂದ್ರದ ಸಾಧನೆಗಳನ್ನು ಜನರಿಗೆ ನಮ್ಮ ನಾಯಕರು ತಿಳಿಸುತ್ತಾರೆ ಎಂದರು.

ಇದನ್ನೂ ಓದಿ:ಮಂಗಳೂರಿನಲ್ಲಿ ನಡೆಯಬೇಕಿದ್ದ ಮೋದಿ ಸಮಾವೇಶ ರದ್ದು, ರೋಡ್ ಶೋ ಮಾತ್ರ - Modi Road Show

ABOUT THE AUTHOR

...view details