ಕರ್ನಾಟಕ

karnataka

ETV Bharat / state

ಮುಡಾ ನಿವೇಶನ ಹಗರಣದಲ್ಲಿ ಸಿಎಂ ಕುಟುಂಬ ಭಾಗಿಯಾಗಿದೆ: ಹೆಚ್ ವಿಶ್ವನಾಥ್ ಆರೋಪ - MUDA SITE scam

ವಿಧಾನ ಪರಿಷತ್ ಸದಸ್ಯ ಹೆಚ್.​ ವಿಶ್ವನಾಥ್ ಮುಡಾ ನಿವೇಶನ ಹಗರಣದ ಕುರಿತು ಮಾತನಾಡಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

By ETV Bharat Karnataka Team

Published : Jul 5, 2024, 4:38 PM IST

MLC-H-vishwanath
ವಿಧಾನ ಪರಿಷತ್ ಸದಸ್ಯ ಹೆಚ್.​ ವಿಶ್ವನಾಥ್ (ETV Bharat)

ವಿಧಾನ ಪರಿಷತ್ ಸದಸ್ಯ ಹೆಚ್.​ ವಿಶ್ವನಾಥ್ (ETV Bharat)

ಮೈಸೂರು :ಮುಡಾ ನಿವೇಶನ ಹಗರಣದಲ್ಲಿ ಸಿಎಂ ಕುಟುಂಬ ಭಾಗಿಯಾಗಿದ್ದು, ಈ ಎಲ್ಲ ಹಗರಣಗಳನ್ನ ಸಿಬಿಐ ತನಿಖೆಗೆ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಗ್ರಹಿಸಿದ್ದಾರೆ. ಇಂದು ಮುಡಾ ಕಚೇರಿಯ ಬಳಿ ಈಟಿವಿ ಭಾರತ್ ಜತೆ ಮಾತನಾಡಿದ ಅವರು, ಮೈಸೂರು ಮಹಾರಾಜರು ಜನ ಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಮುಡಾ ಆರಂಭಿಸಿದ್ದರು. ಈಗ ಅದರ ಎಲ್ಲ ಆಶಯಗಳನ್ನ ಗಾಳಿಗೆ ತೂರಲಾಗಿದೆ. ಮುಡಾ ಇವತ್ತು ಭ್ರಷ್ಟಾಚಾರದ ಅಡ್ಡೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮುಡಾದಲ್ಲಿ ನಡೆದಿರುವ ನಿವೇಶನ ಹಗರಣಗಳಲ್ಲಿ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿದೆ. ಆ ಜಮೀನು ಅವರದಲ್ಲ, ಇವೆಲ್ಲಾ ಸುಳ್ಳು. ಸಿದ್ದರಾಮಯ್ಯ ಬಗ್ಗೆ ನಾನು ಇವತ್ತಿಗೂ ಅಭಿಮಾನ ಇಟ್ಟಿದ್ದೇನೆ. ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆ, ಸಮಾಜವಾದಿ ನೀತಿ ಇವೆಲ್ಲಾ ಇದ್ದವು. ಈಗ ಇವೆಲ್ಲಾ ಕಾಣೆಯಾಗಿ ಬಿಟ್ಟಿವೆ ಎಂದು ಇದೇ ವೇಳೆ, ಅಸಮಾಧಾನ ವ್ಯಕ್ತಪಡಿಸಿದರು.

ಇವರೇ ಐದು ವರ್ಷ ಸಿಎಂ ಆಗಿ ಮೈಸೂರು ನಗರದ ಜನತೆಗೆ ಸೈಟ್​ ಕೊಡಲು ಆಗಲಿಲ್ಲ. ಸುಮಾರು 90,000 ಅರ್ಜಿಗಳು ಇವತ್ತಿನವರೆಗೂ ಬಾಕಿ ಇವೆ. ಮನೆ ಸೈಟು ಬಹಳ ಮುಖ್ಯ. ಹಾಗಾಗಿ ಈ ಪ್ರಕರಣವನ್ನು ಸಿಐಡಿಯಿಂದ ನ್ಯಾಯಯುತ ತನಿಖೆ ಮಾಡಲು ಸಾಧ್ಯವಾಗಲ್ಲ, ಸಿಬಿಐ ನಿಂದಲೇ ತನಿಖೆ ಆಗಬೇಕು ಎಂಬುದು ಎಲ್ಲರ ಒತ್ತಾಯ. ನಾನು ಕೂಡಾ ಸಿಬಿಐ ತನಿಖೆ ಮಾಡುವಂತೆ ಒತ್ತಾಯ ಮಾಡುತ್ತೇನೆ ಎಂದರು.

ವಾಲ್ಮೀಕಿ ನಿಗಮದ 187 ಕೋಟಿ ಹಗರಣವನ್ನು ಸಿಬಿಐಗೆ ವಹಿಸಿದ್ದಾರೆ. ಅದಕ್ಕಿಂತ ಮುಡಾ ಪ್ರಕರಣ, ಸುಮಾರು 5,000 ಕೋಟಿಗೂ ದೊಡ್ಡ ಹಗರಣ. ಇದನ್ನ ಸಿಬಿಐ ತನಿಖೆಗೆ ಕರ್ನಾಟಕ ಸರ್ಕಾರ ವಹಿಸಬೇಕು. ಸಿಬಿಐ ತನಿಖೆಗೆ ಸಾಥ್ ನೀಡಲು ದಕ್ಷ ಅಧಿಕಾರಿ ಹರ್ಷಗುಪ್ತ ಅಂತವರನ್ನ ನೇಮಿಸಬೇಕು ಎಂದು ಹೇಳಿದ ವಿಶ್ವನಾಥ್, ಮುಡಾ ನಿವೇಶನ ಹಗರಣದಲ್ಲಿ ಮೂರು ಪಕ್ಷಗಳಲ್ಲೂ ಫಲಾನುಭವಿಗಳಿದ್ದಾರೆ. ಅವರ ವಿರುದ್ದವೂ ತನಿಖೆಯಾಗಬೇಕು ಎಂದು ಇದೇ ಸಂದರ್ಭದಲ್ಲಿ ಹೆಚ್​ ವಿಶ್ವನಾಥ್​ ಒತ್ತಾಯಿಸಿದರು.

ಇದನ್ನೂ ಓದಿ :ಜಾಗ ಕೊಟ್ಟಿರುವುದು ತಪ್ಪೆನ್ನುವುದಾದರೆ ನಮಗೆ ಪರಿಹಾರ ಕೊಡಲಿ: ಸಿಎಂ ಸಿದ್ದರಾಮಯ್ಯ - MUDA Plot Allotment

ABOUT THE AUTHOR

...view details