ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಭ್ರಷ್ಟರ ಧ್ವನಿಯಾಗಿದ್ದಾರೆ: ಎಂಎಲ್​ಸಿ ಹೆಚ್. ವಿಶ್ವನಾಥ್ - H Vishwanath

ಸಿಎಂ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಶೋಷಿತರ ಧ್ವನಿ ಆಗಿದ್ದರು. ಎರಡನೇ ಅವಧಿಯಲ್ಲಿ ಅವರು ಭ್ರಷ್ಟರ ಧ್ವನಿ ಆಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಟೀಕಿಸಿದರು.

ಹೆಚ್. ವಿಶ್ವನಾಥ್
ಹೆಚ್. ವಿಶ್ವನಾಥ್ (ETV Bharat)

By ETV Bharat Karnataka Team

Published : Sep 17, 2024, 4:22 PM IST

ಮೈಸೂರು: ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಶೋಷಿತರ ಧ್ವನಿಯಾಗಿದ್ದರು. ಎರಡನೇ ಅವಧಿಯಲ್ಲಿ ಭ್ರಷ್ಟರ ಧ್ವನಿಯಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದರು.

ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನಾವು ಸಿದ್ದರಾಮಯ್ಯ ಅವರಲ್ಲಿ ವಿನಂತಿ ಮಾಡುವುದು ಏನೆಂದರೆ ಅಹಿಂದ ಎನ್ನುವ ನೀವು ಕಾಂತರಾಜು ವರದಿಯನ್ನು ಹೊರಗೆ ಏಕೆ ತರಲಿಲ್ಲ?. ಜನರಿಗೆ ತಿಳಿಯಲು ಕಾಂತರಾಜು ವರದಿಯನ್ನು ಬಹಿರಂಗಪಡಿಸಿ. ಉತ್ತರ ಕರ್ನಾಟಕದ ಕಡೆ ಹೋದಾಗ ರಾಯಣ್ಣ, ಬಸವಣ್ಣ, ಅಂಬೇಡ್ಕರ್ ಎಂದು ಭಾಷಣ ಮಾಡುವುದಕ್ಕೆ ಮಾತ್ರ ನೀವು ಮೀಸಲಾಗಿದ್ದೀರಿ ಎಂದು ಟೀಕಿಸಿದರು.

ಶಾಂತಿ ಸಭೆ ಮಾಡಿ:ನಾಗಮಂಗಲದಲ್ಲಿ ಈ ರೀತಿ ಗಲಭೆ ಆಗಬಾರದಿತ್ತು. ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಬರೀ ಭಾಷಣ ಮಾಡುತ್ತಾರೆ ಅಷ್ಟೇ. ಜಿಲ್ಲೆಯ ಸೂಕ್ಷ್ಮತೆಗಳ ಬಗ್ಗೆ ಅರಿವಿಲ್ಲ ಎಂದರೆ ಯಾವ ಸೀಮೆ ಮಂತ್ರಿಗಳು ನೀವು. ಮೊದಲು ಎರಡು ಕೋಮಿನವರನ್ನು ಕರೆದು ಶಾಂತಿ ಸಭೆ ನಡೆಸಿ ಎಂದು ಹೆಚ್​ ವಿಶ್ವನಾಥ್​ ಒತ್ತಾಯಿಸಿದರು.

ಶಾಸಕ ಮುನಿರತ್ನ ಬಂಧನದ ಬಗ್ಗೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿಗೆ ನಮ್ಮ ಜೊತೆಯಲ್ಲಿ ಬಂದರು. ಈಗ ಮುನಿರತ್ನ ಬಂಧನದ ಬಗ್ಗೆ ಸಿ.ಟಿ. ರವಿ, ಅಶ್ವತ್ಥ ನಾರಾಯಣ್ ಮಾತನಾಡುತ್ತಿರುವುದು ಸರಿಯಲ್ಲ. ಜಾತಿ ನಿಂದನೆ ಮಾಡಿರುವ ಮುನಿರತ್ನ ಎರಡು ದಿನ ಜೈಲಿನಲ್ಲೇ ಇರಲಿ ಎಂದು ಹೇಳಿದರು.

ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆ ಸರಿಯಲ್ಲ: ದೇವರಾಜ ಅರಸು ಲಿಂಗಾಯಿತರಿಗೆ ಅನ್ಯಾಯ ಮಾಡಿದ್ದರು ಎಂಬ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆ ಸರಿಯಲ್ಲ. ದೇವರಾಜ್ ಅರಸು ಎಲ್ಲಾ ಜಾತಿಯ ಬಡವರ ಹಾಗೂ ನೊಂದವರ ಧ್ವನಿಯಾಗಿದ್ದರು. ಅವರ ಬಗ್ಗೆ ತಿಳಿಯದೇ ಶಾಸಕ ಬೆಲ್ಲದ್ ಮಾತನಾಡುವುದು ಸರಿಯಲ್ಲ ಎಂದು ಎಂಎಲ್​ಸಿ ವಿಶ್ವನಾಥ್​ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ :ಮುನಿರತ್ನ ಪ್ರಕರಣದ ಬಗ್ಗೆ ಸಮುದಾಯದ ನಾಯಕರು, ಸ್ವಾಮೀಜಿಗಳು ಮಾತಾಡಬೇಕು: ಡಿಸಿಎಂ ಡಿಕೆಶಿ - Muniratna Case

ABOUT THE AUTHOR

...view details