ಕರ್ನಾಟಕ

karnataka

ETV Bharat / state

ಪ್ಯಾಲೆಸ್ತೇನ್ ದೇಶದ ಮೇಲೆ ಪ್ರೇಮವಿದ್ದರೆ ಫ್ರೀ ಫ್ಲೈಟ್ ಟಿಕೆಟ್ ಕೊಡಿಸುತ್ತೇವೆ, ಅಲ್ಲಿಗೆ ಹೋಗಿ: ಸಿ.ಟಿ. ರವಿ - C T Ravi - C T RAVI

ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ಯಾಲೆಸ್ತೇನ್ ಧ್ವಜ ಹಿಡಿದು ಓಡಾಡ್ತಿದ್ದಾರೆ. ಇದು ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ವೈಫಲ್ಯ ಎಂದು ಎಂಎಲ್​ಸಿ ಸಿ.ಟಿ. ರವಿ ಟೀಕಿಸಿದ್ದಾರೆ.

ಎಂಎಲ್​ಸಿ ಸಿ.ಟಿ. ರವಿ
ಎಂಎಲ್​ಸಿ ಸಿ.ಟಿ. ರವಿ (ETV Bharat)

By ETV Bharat Karnataka Team

Published : Sep 17, 2024, 4:13 PM IST

ಎಂಎಲ್​ಸಿ ಸಿ.ಟಿ. ರವಿ (ETV Bharat)

ಬೆಂಗಳೂರು: ಪ್ಯಾಲೆಸ್ತೇನ್ ಧ್ವಜ ಹಾರಿಸುತ್ತಿರುವವರಿಗೆ ಆ ದೇಶಕ್ಕೆ ಹೋಗಲು ಉಚಿತವಾಗಿ ವಿಮಾನದ ಟಿಕೆಟ್ ಕೊಡಿಸುತ್ತೇವೆ. ಹೋಗುವವರು ಅಲ್ಲಿಗೆ ಹೋಗಿ ಅಲ್ಲಿಯೇ ಇರಬಹುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಕುಟುಕಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ಯಾಲೆಸ್ತೇನ್ ಧ್ವಜ ಹಿಡಿದು ಓಡಾಡ್ತಿದ್ದಾರೆ. ಇದು ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆಯ ವೈಫಲ್ಯ. ಆ ರೀತಿ ಹಾರಿಸ್ತಿರೋರಿಗೆ ಆ ದೇಶದ ಬಗ್ಗೆ ಪ್ರೇಮ ಹೆಚ್ಚಾಗಿದ್ದರೆ ಅವರಿಗೆ ಉಚಿತವಾಗಿ ಪ್ಯಾಲೆಸ್ತೇನ್​ಗೆ ಹೋಗಲು ವಿಮಾನದ ಟಿಕೆಟ್ ಬುಕ್ ಮಾಡಿ ಕೊಡುತ್ತೇವೆ. ಹೋಗುವವರು ಅಲ್ಲಿಗೇ ಹೋಗಿ ಇರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲರಿಗೂ ಒಂದೇ ಕಾನೂನು ಇರಬೇಕು:ರಾಜ್ಯದಲ್ಲಿ ಮುನಿರತ್ನಗೆ ಒಂದು ಕಾನೂನು, ಒಂದು ನ್ಯಾಯ. ಚನ್ನಾರೆಡ್ಡಿ ಪಾಟೀಲ್, ಚಲುವರಾಯಸ್ವಾಮಿಗೆ ಬೇರೆ ನ್ಯಾಯಾನಾ?. ಚನ್ನಾರೆಡ್ಡಿ ಪಾಟೀಲ್ ಅಕ್ರಮ ಮಾಡಿದರೆ ಎಫ್ಐಆರ್ ಆಗಲ್ಲ. ಆದರೆ, ಮುನಿರತ್ನ ಮೇಲೆ ಬಂದರೆ ಎಫ್ಐಆರ್ ಆಗಿ, ಬಂಧನ ಕೂಡ ಮಾಡ್ತಾರೆ. ಎಲ್ಲರಿಗೂ ಒಂದೇ ಕಾನೂನು, ಒಂದೇ ನ್ಯಾಯ ಇರಬೇಕು. ಸತ್ಯಾಸತ್ಯತೆ ಹೊರಗೆ ಬರಲಿ. ಪಾಕಿಸ್ತಾನ್ ಜಿಂದಾಬಾದ್ ಅಂದವರನ್ನೇ ಸಮರ್ಥನೆ ಮಾಡಿಕೊಂಡ ಪಕ್ಷ ಕಾಂಗ್ರೆಸ್. ಪಾಕಿಸ್ತಾನ್ ಜಿಂದಾಬಾದ್ ಅಂದವರ ಪರ ನಿಲ್ತಾರೆ. ಮುನಿರತ್ನ ತಪ್ಪು ಮಾಡಿದ್ದರೆ ಖಂಡಿತ ಸಮರ್ಥನೆ ಮಾಡಿಕೊಳ್ಳಲ್ಲ. ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ. ಆದ್ರೆ ಕಾನೂನು ಎಲ್ಲರಿಗೂ ಒಂದೇ ಇರಬೇಕು ಆಗ್ರಹಿಸಿದರು.

ವಿಶೇಷ ಅಧಿವೇಶನ ಕರೆಯಿರಿ:ಸಿದ್ದರಾಮಯ್ಯ ಅವರು ಒಂದೇ ಒಂದು ಕಳಂಕ ಇಲ್ಲ ಅಂದರು. ಅರ್ಕಾವತಿ ಡಿ ನೋಟಿಫಿಕೇಷನ್ ಹಗರಣ ಅಲ್ವಾ?. ಮುಡಾ ಭ್ರಷ್ಟಾಚಾರ ಬಯಲಿಗೆ ಬರ್ತಿದೆ ಅದು ಕಳಂಕ ಅಲ್ವಾ?. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಗರಣ ಆಗಿದೆ ಅದು ಕಳಂಕ ಅಲ್ವಾ?. ನೀವು ಉತ್ತರ ಕೊಡುವ ವೇದಿಕೆ ವಿಧಾನಸಭೆ, ವಿಧಾನಪರಿಷತ್. ಅಲ್ಲಿ ಉತ್ತರ ಕೊಡದೇ ಪಲಾಯನ ಮಾಡಿದ್ರಿ. ನಿಮಗೆ ನೀವೇ ಲಾಯರ್ ಆಗ್ತೀರಿ. ನ್ಯಾಯಾಲಯದ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ರೆ, ಅದರ ವಿರುದ್ಧ ಆಂದೋಲನ ಮಾಡಿಸ್ತೀರಿ. ನೀವೇ ಜಡ್ಜ್ ಆಗ್ತೀರಿ, ನೀವೇ ವಕೀಲರಾಗ್ತಿರೀ. ವಿಶೇಷ ಅಧಿವೇಶನ ಕರೆಯಿರಿ, ಚರ್ಚೆ ಮಾಡೋಣ ಎಂದು ಸವಾಲೆಸೆದರು.

ಇದನ್ನೂ ಓದಿ:ಮುನಿರತ್ನ ಪ್ರಕರಣದ ಬಗ್ಗೆ ಸಮುದಾಯದ ನಾಯಕರು, ಸ್ವಾಮೀಜಿಗಳು ಮಾತಾಡಬೇಕು: ಡಿಸಿಎಂ ಡಿಕೆಶಿ - Muniratna Case

ABOUT THE AUTHOR

...view details