ರಾಯಚೂರು :ವಿಧಾನಸಭಾ ಚುನಾವಣೆಯಲ್ಲಿ ಸೋತರು ಕೂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಎಂಎಲ್ ಸಿ ಮಾಡಿದ್ದೆವು.
ಕಾಂಗ್ರೆಸ್ನಲ್ಲಿ ಸೋತವರಿಗೆ ಯಾರಿಗೂ ಎಂಎಲ್ಸಿ ಮಾಡಿದ ಉದಾಹರಣೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನಗರದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿರು. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಬಂದಾಗ ನಾವು ಗೌರವ ನೀಡಿದ್ದೇವೆ. ಕಾಂಗ್ರೆಸ್ ಬಿಟ್ಟು ಹೋಗಿರುವುದು ಅವರ ವೈಯಕ್ತಿಕ ನಿರ್ಧಾರವಾಗಿದೆ. ಇದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿದೆ. ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು. ವ್ಯಕ್ತಿಗಳಿಂದ ಪಕ್ಷ ಬೆಳೆಯಲ್ಲ. ಪಕ್ಷದಿಂದ ವ್ಯಕ್ತಿ ಬೆಳೆಯುತ್ತಾನೆ. ನಮ್ಮ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ. ಶೆಟ್ಟರ್ ಬಿಜೆಪಿಯಿಂದ ಬಂದಿದ್ದರು, ಮತ್ತೆ ಬಿಜೆಪಿಗೆ ಹೋಗಿದ್ದಾರೆ. ಆದರೆ ಲಕ್ಷ್ಮಣ ಸವದಿ ಹೋಗುವುದು ಊಹಾಪೋಹ ಎಂದರು.
ಕಾಂಗ್ರೆಸ್ ನಿಂದ ಅನೇಕ ಜನರು ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವ ಬಿಜೆಪಿಯ ನಾಯಕರ ಹೇಳಿಕೆ ಪ್ರಕ್ರಿಯಿಸಿದ ಶರಣಪ್ರಕಾಶ್ ಪಾಟೀಲ್, ಈಗ ಬಿಜೆಪಿಯವರು ಹತಾಶೆರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಬೇಸತ್ತು, ಜನರು ನಮಗೆ ಅಧಿಕಾರ ನೀಡಿದ್ದಾರೆ. ಬಿಜೆಪಿಯವರಿಗೆ ರಾಜ್ಯದ ಜನರೇ ಮೂಲೆ ಗುಂಪು ಮಾಡಿದ್ದಾರೆ. ಬಿಜೆಪಿಯವರಿಗೆ ಜನರ ಬಳಿಗೆ ಹೋಗಲು ಮುಖವಿಲ್ಲ. ಹಾಗಾಗಿ ಒಬ್ಬರು ನಾಯಕರಿಗೆ ಎಳೆದುಕೊಂಡು ಪಕ್ಷ ಕಟ್ಟುವ ಕೆಲಸ ಶುರು ಮಾಡಿದ್ದಾರೆ. ರಾಜ್ಯದ ಜನರು ಬುದ್ಧಿವಂತರು ಇದ್ದಾರೆ, ಬರುವ ಲೋಕಸಭೆಯಲ್ಲಿ ರಾಜ್ಯದ ಜನರು ಮತ್ತೊಮ್ಮೆ ಪಾಠ ಕಲ್ಲಿಸುತ್ತಾರೆ ಎಂದು ತಿಳಿಸಿದರು.