ಚಿಕ್ಕಬಳ್ಳಾಪುರ :ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಿನಾರಾಯಣ್ ಅವರ ಮೇಲೆ ಹಲ್ಲೆ ನಡೆಸಿರುವ ಕುರಿತು ಸಚಿವ ಕೆ. ಹೆಚ್ ಮುನಿಯಪ್ಪ ಅವರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬಳಿ ಈ ರೀತಿ ನಡೆದುಕೊಂಡಿರುವುದು ಪ್ರಪ್ರಥಮವಾಗಿದೆ. ಇದನ್ನು ಮಾಡಿದವರು ಹಾಗೂ ಇದಕ್ಕೆ ಪ್ರೋತ್ಸಾಹ ನೀಡಿರುವುದು ಸರಿಯಿಲ್ಲ. ಈ ಘಟನೆಯ ಹಿಂದೆ ಯಾರು ಇದ್ದಾರೆ ಎಂಬುದು ನನಗೆ ಗೊತ್ತಿದೆ. ಈ ಕುರಿತು ನಾನು ಕಾಂಗ್ರೆಸ್ ಪ್ರದೇಶ ಸಮಿತಿಗೆ ದೂರು ನೀಡುತ್ತೇನೆ ಎಂದು ಹೇಳಿದರು.
ಚಿಂತಾಮಣಿ ತಾಲೂಕಿನ ಕೈವಾರ ಕ಼್ಷೇತ್ರಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಚಿಕ್ಕ ವಿಷಯಗಳನ್ನು ದೊಡ್ಡದಾಗಿ ಮಾಡಿಕೊಳ್ಳಬಾರದಾಗಿತ್ತು. ಒಬ್ಬ ಅಧ್ಯಕ್ಷರ ಮೇಲೆ ಈ ರೀತಿ ಮಾಡಿರುವುದು ಖಂಡನೀಯ. ಅಧ್ಯಕ್ಷರಿಗೆ ಅಪಮಾನ ಮಾಡಿರುವುದು ಕಾಂಗ್ರೆಸ್ ಪ್ರದೇಶ ಸಮಿತಿಗೆ ಅಪಮಾನ ಮಾಡಿದಂತಾಗುತ್ತದೆ. ನಿಜವಾದ ಕಾಂಗ್ರೆಸ್ ನವರು ಆಗಿದ್ರೆ ಈ ರೀತಿ ಮಾಡುತ್ತಿರಲಿಲ್ಲ. ಈ ಘಟನೆಯಿಂದ ನನಗೆ ಸಾಕಷ್ಟು ನೋವಾಗಿದೆ ಎಂದು ತಿಳಿಸಿದರು.