ಬೆಂಗಳೂರು: ನಾಲಿಗೆ ಬಿಗಿ ಹಿಡಿದು ಮಾತನಾಡುವ ದೊಡ್ಡ ಜವಾಬ್ದಾರಿ ಮೋದಿಯವರ ಮೇಲಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದರು. ರಾಜ್ಯದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರಣಿ ಎಕ್ಸ್ ಪೋಸ್ಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದ ಯಶಸ್ಸಿಗೆ ಒಕ್ಕೂಟ ವ್ಯವಸ್ಥೆ ಕಾರಣ. ಒಕ್ಕೂಟ ವ್ಯವಸ್ಥೆಯನ್ನೇ ಅಶಕ್ತಗೊಳಿಸುವ ನಿಟ್ಟಿನಲ್ಲಿ ಅವರು ಹೇಳಿಕೆ ಕೊಟ್ಟಿದ್ದಾರೆ. ಕರ್ನಾಟಕದ ಬಗ್ಗೆ ಹೇಳಿಕೆ ಕೊಡೋದು ಸರಿನಾ?. ನ್ಯಾಯಬದ್ಧವಾಗಿ ಬರಬೇಕಾದ ಬರ ಪರಿಹಾರ ಕೊಡಲಿಲ್ಲ. ನಾಲಿಗೆ ಬಿಗಿ ಹಿಡಿದು ಮಾತನಾಡುವ ದೊಡ್ಡ ಜವಾಬ್ದಾರಿ ಮೋದಿಯವರ ಮೇಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುಪ್ರಿಂ ಕೋರ್ಟ್‌ಗೆ ಹೋಗಿ ನಮ್ಮ ಪಾಲಿನ ತೆರಿಗೆ ಪಡೆಯಬೇಕಾಯ್ತು. ಇದು ನಿಮ್ಮ ರೀತಿ ನೀತಿ. ಗ್ಯಾರೆಂಟಿಗಳನ್ನ ಸಹಿಸದೆ ಸಂಕಟ ಬಿದ್ದು ಮಾತನಾಡಿದ್ರೆ ಹೇಗೆ..?. ತಪ್ಪು ಮಾಡಿದಾಗ ಮೋದಿಯವರಿಗೂ ಬುದ್ಧಿಮಾತು ಹೇಳಬೇಕಾಗುತ್ತದೆ. ಬುದ್ಧಿ ಹೇಳಿಸಿಕೊಳ್ಳುವ ಹಂತಕ್ಕೆ ಮೋದಿ ಬಂದಿದ್ದಾರೆ. ಮೋದಿ ಗ್ಯಾರೆಂಟಿ ಬದಲು ಕರ್ನಾಟಕ ಗ್ಯಾರೆಂಟಿ ಚರ್ಚೆ ಆಗ್ತಿದೆ ಎಂದು ಹೆಚ್.ಕೆ.ಪಾಟೀಲ್ ಕಿಡಿಕಾರಿದರು.