ಬೆಂಗಳೂರು :ಡಿನ್ನರ್ ಮೀಟಿಂಗ್ನಲ್ಲಿ ಏನೂ ಪ್ಲಾನ್ ಇಲ್ಲ, ಅಜೆಂಡಾನೂ ಇಲ್ಲ. ಸುಮ್ಮನೆ ಊಟಕ್ಕೆ ಸೇರಿದ್ದೆವು ಅಷ್ಟೇ ಎಂದು ಸಚಿವ ಹೆಚ್. ಸಿ ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ನಿವಾಸದಲ್ಲಿ ಮಾತನಾಡಿದ ಅವರು, ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಿನ್ನೆ ಸಿಎಂ ಜೊತೆಗೂಡಿ ಸಚಿವರ ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸತೀಶ್ ಜಾರಕಿಹೊಳಿ ಊಟಕ್ಕೆ ಸೇರೋಣ ಅಂದಿದ್ರು. ಸಿಎಂ ಏನು ವಿಷ್ಯ ಅಂದ್ರು?. ಏನೂ ಇಲ್ಲ ಊಟಕ್ಕೆ ಸೇರುತ್ತಿದ್ದೇವೆ ಅಂದ್ರು. ಹಾಗಾಗಿ ಇಷ್ಟೇ ಕಾರಣ, ಬೇರೇನೂ ಇಲ್ಲ. ಸಚಿವ ಪರಮೇಶ್ವರ್ ಮಲೇಷ್ಯಾಗೆ ಹೋಗ್ತೇವೆ ಅಂದ್ರು. ಹಾಗಾಗಿ ಊಟ ಮಾಡಿ ಅವರು ಹೊರಟ್ರು. ಇದು ಪ್ಲಾನ್ ಅಲ್ಲ, ಅಜೆಂಡಾನೂ ಅಲ್ಲ. ಸುಮ್ಮನೆ ಊಟಕ್ಕೆ ಸೇರಿದ್ದು. ನಾವು ಏನೂ ಮಾತೇ ಆಡಿಲ್ಲ ಎಂದರು.
ಡಿನ್ನರ್ ಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇವೆ. ವಿಪಕ್ಷಗಳು ಎಲ್ಲದಕ್ಕೂ ರಾಜೀನಾಮೆ ಕೊಡಿ ಅಂತಾರೆ. ಜನರ ಮನಸ್ಸಲ್ಲಿ ಬೇರೆ ಭಾವನೆ ಮೂಡಿಸ್ತಾರೆ. ಅದಕ್ಕೆ ಹೇಗೆ ಕೌಂಟರ್ ಕೊಡೋದು ಅಂತ ಚರ್ಚಿಸಿದ್ದೇವೆ. ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ನಮ್ಮ ಕೈಯಲ್ಲಿಲ್ಲ. ಎಲ್ಲವೂ ಹೈಕಮಾಂಡ್ ಮಾಡಲಿದೆ ಎಂದು ಹೇಳಿದರು.