ಮೈಸೂರು :ಈ ಬಾರಿ ನಾಡಹಬ್ಬ ದಸರಾದ ಎಲ್ಲ ಕಾರ್ಯಕ್ರಮ ಹಾಗೂ ಪ್ರವಾಸಿ ತಾಣಗಳನ್ನ ವೀಕ್ಷಣೆ ಮಾಡುವ ಒಂದು ಗೋಲ್ಡ್ ಕಾರ್ಡ್ ಬೆಲೆ 6,500 ರೂ ಆಗಿದೆ. ಆನ್ಲೈನ್ನಲ್ಲಿ ಈ ಗೋಲ್ಡ್ ಕಾರ್ಡ್ ಸೆಪ್ಟೆಂಬರ್ 26 ರಿಂದ ಸೆಪ್ಟೆಂಬರ್ 30ರ ವರೆಗೆ ಐದು ದಿನಗಳ ಕಾಲ ಲಭ್ಯವಿರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಮಾಹಿತಿ ನೀಡಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಗೋಲ್ಡ್ ಕಾರ್ಡ್ ಬೆಲೆ, 6,500 ರೂಪಾಯಿಯಾಗಿದೆ. ಇದನ್ನ ಪಡೆದವರು ದಸರಾ ಸಂದರ್ಭದಲ್ಲಿ ಜಂಬೂ ಸವಾರಿ, ಬನ್ನಿಮಂಟಪದ ಪಂಜಿನ ಕವಾಯತು, ಚಾಮುಂಡಿ ಬೆಟ್ಟ, ಮೃಗಾಲಯ ಹಾಗೂ ಅರಮನೆ ಎಲ್ಲಾವನ್ನು ವೀಕ್ಷಣೆ ಮಾಡಬಹುದು ಎಂದರು.
ಸಚಿವ ಡಾ. ಹೆಚ್ ಸಿ ಮಹದೇವಪ್ಪ (ETV Bharat) ಇದಲ್ಲದೇ 3,500 ರೂಪಾಯಿ ಗೋಲ್ಡ್ ಪಾಸ್ ಪಡೆದರೆ ಒಬ್ಬರು ಜಂಬೂ ಸವಾರಿ ಮಾತ್ರ ವೀಕ್ಷಣೆ ಮಾಡಬಹುದು. ಇದರ ಜತೆಗೆ ಪಂಜಿನ ಕವಾಯತು ವೀಕ್ಷಣೆ ಮಾಡಲು ಒಂದು ಸಾವಿರ ರೂಪಾಯಿಯ ಗೋಲ್ಡ್ ಕಾರ್ಡ್ ಪಡೆದರೆ ಪಂಜಿನ ಕವಾಯತು ಮಾತ್ರ ವೀಕ್ಷಣೆ ಮಾಡಬಹುದಾಗಿದೆ. ಈ ಎಲ್ಲಾ ಗೋಲ್ಡ್ ಪಾಸ್ಗಳು ಆನ್ಲೈನ್ನಲ್ಲಿ ಖರೀದಿ ಮಾಡಬೇಕು. ಈ ಬಾರಿ 1,000 ದಿಂದ 1,500 ಗೋಲ್ಡ್ ಪಾಸ್ಗಳನ್ನ ಆನ್ಲೈನ್ನಲ್ಲಿ ಖರೀದಿ ಮಾಡಬಹುದಾಗಿದೆ ಎಂದು ಸಚಿವರು ದಸರಾ ಗೋಲ್ಡ್ ಪಾಸ್ ಬಗ್ಗೆ ವಿವರಿಸಿದರು.
ಸಚಿವ ಡಾ. ಹೆಚ್ ಸಿ ಮಹದೇವಪ್ಪ (ETV Bharat) ನಾಳೆಯಿಂದ ಯುವ ಸಂಭ್ರಮ : ದಸರಾದ ಉದ್ಘಾಟನೆ ಮುನ್ನ ನಗರದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸೆಪ್ಟೆಂಬರ್ 24 ರಿಂದ ಯುವ ಸಂಭ್ರಮ ನಡೆಯಲಿದ್ದು, ಈ ಯುವ ಸಂಭ್ರಮಕ್ಕೆ ನಟ ಶ್ರೀ ಮುರಳಿ, ಹಾಗೂ ರುಕ್ಷ್ಮಿಣಿ ವಸಂತ್ ಉದ್ಘಾಟನೆ ಮಾಡಲಿದ್ದಾರೆ. 8 ದಿನಗಳ ಕಾಲದ ಈ ಯುವ ಸಂಭ್ರಮದಲ್ಲಿ 470 ವಿವಿಧ ಕಾಲೇಜಿನ ಯುವಕ-ಯುವತಿಯರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ :ದಸರಾ ಆನೆಗಳ ಬಳಿ ರೀಲ್ಸ್ ಮಾಡಲು ಅವಕಾಶ ನೀಡದಂತೆ ಸಚಿವ ಈಶ್ವರ್ ಖಂಡ್ರೆ ಸೂಚನೆ - ban on reels near elephants