ಕರ್ನಾಟಕ

karnataka

ETV Bharat / state

ಬಳ್ಳಾರಿ: ಸೆಂಟ್ರಲ್​ ಜೈಲಿನಲ್ಲಿ ದರ್ಶನ್​ ಭೇಟಿಯಾದ ತಾಯಿ ಮೀನಾ, ಅಕ್ಕ-ಬಾವ - family met Darshan in Jail - FAMILY MET DARSHAN IN JAIL

ಬಳ್ಳಾರಿ ಸೆಂಟ್ರಲ್​​ ಜೈಲಿನಲ್ಲಿ ಇಂದು ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯ, ಬಾವ ಮಂಜುನಾಥ, ಅಕ್ಕನ ಮಕ್ಕಳು ದರ್ಶನ್​ರನ್ನು ಭೇಟಿಯಾಗಿ ತಿನಿಸುಗಳನ್ನು ನೀಡಿ ನಿರ್ಗಮಿಸಿದರು.

ಜೈಲಿನಲ್ಲಿ  ತಾಯಿ-ಮಗನ ಭೇಟಿ
ಜೈಲಿನಲ್ಲಿ ತಾಯಿ-ಮಗನ ಭೇಟಿ (ETV Bharat)

By ETV Bharat Karnataka Team

Published : Sep 19, 2024, 1:54 PM IST

ಬಳ್ಳಾರಿ​ ಜೈಲಿನಲ್ಲಿ ದರ್ಶನ್​ ಭೇಟಿಯಾದ ಕುಟುಂಬಸ್ಥರು (ETV Bharat)

ಬಳ್ಳಾರಿ:ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಬಳ್ಳಾರಿ ಸೆಂಟ್ರಲ್​ ಜೈಲಿನಲ್ಲಿ ಬಂಧಿಯಾಗಿರುವ ದರ್ಶನ್​ ಅವರನ್ನು ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯ ಭೇಟಿಯಾಗಿ ಸಾಂತ್ವನ ಹೇಳಿದರು. ಇಂದು ಬೆಳಗ್ಗೆ ಜೈಲಿಗೆ ಆಗಮಿಸಿದ ಮೀನಾ, ದಿವ್ಯ ಜತೆಗೆ ದರ್ಶನ್ ಬಾವ ಮಂಜುನಾಥ, ಅಕ್ಕನ ಮಕ್ಕಳು ಸೇರಿ ಐದು ಜನ ಕುಟುಂಬಸ್ಥರು ಭೇಟಿಯಾದರು.

11.34ಕ್ಕೆ ಜೈಲು ಸಿಬ್ಬಂದಿ ಹೈಸೆಕ್ಯೂರಿಟಿ ಸೆಲ್​ ವಿಸಿಟಿಂಗ್​ ರೂಮ್​ಗೆ ದರ್ಶನ್ ಅವರನ್ನು ಕರೆತಂದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ದರ್ಶನ್​ ಜೊತೆ ಅವರು ಮಾತುಕತೆ ನಡೆಸಿದರು. ತಾಯಿ, ಅಕ್ಕನ ಕಂಡು ದರ್ಶನ್​ ಭಾವುಕರಾದರು. ಕುಟುಂಬಸ್ಥರು ಸಹ ದರ್ಶನ್ ಸ್ಥಿತಿ ಕಂಡು ಭಾವುಕರಾದರು. ಇದೇ ವೇಳೆ ತಂದಿದ್ದ ಬಟ್ಟೆ, ಬೇಕರಿ ತಿನಿಸುಗಳನ್ನು ದರ್ಶನ್‌ ಅವರಿಗೆ ನೀಡಲಾಯಿತು.

ಮೊದಲ ಬಾರಿಗೆ ಬಳ್ಳಾರಿ ಜೈಲಿನಲ್ಲಿ ತಾಯಿ-ಮಗ ಭೇಟಿ:ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್​ ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಜೈಲಿನಲ್ಲಿನ ಫೊಟೋ ವೈರಲಾದ ಬೆನ್ನಲ್ಲೇ ದರ್ಶನ್​ ಸೇರಿ ಪ್ರಕರಣದ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಗೊಳಿಸಲಾಯಿತು. ದರ್ಶನ್​ ಬಳ್ಳಾರಿ ಸೆಂಟ್ರಲ್​ ಜೈಲಿಗೆ ಬಂದ ನಂತರ ಇಂದೇ ಅವರ ತಾಯಿ ಮೀನಾ ತೂಗುದೀಪ ಅವರು ಮಗನನ್ನು ಭೇಟಿ ಮಾಡಿದರು.

ಇದನ್ನೂ ಓದಿ:ದರ್ಶನ್​ ಭೇಟಿಗಾಗಿ ಬಳ್ಳಾರಿ ಜೈಲಿಗೆ ಬಂದ ವಿಜಯಲಕ್ಷ್ಮಿ, ನಟ ಧನ್ವೀರ್ - Actor Dhanveer Meets Darshan

ABOUT THE AUTHOR

...view details