ಬೆಂಗಳೂರು :ಮೈಸೂರು -ದರ್ಬಾಂಗ್ ಎಕ್ಸ್‌ಪ್ರೆಸ್ ರೈಲು ಮತ್ತು ಗೂಡ್ಸ್ ರೈಲು ಶುಕ್ರವಾರ ಅಪಘಾತಕ್ಕೀಡಾಗಿದೆ. ಆದ್ದರಿಂದ ಬೆಂಗಳೂರಿನಿಂದ ಹೊರಡುವ ಹಲವು ರೈಲು ಮಾರ್ಗಗಳನ್ನು ಬದಲಾಯಿಸಲಾಗಿದೆ.
ರೈಲು ಸಂಖ್ಯೆ 12296 ಡಣಾಪುರ- ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಶುಕ್ರವಾರ ಡಣಾಪುರದಿಂದ ಹೊರಟಿದ್ದು, ಇದು ಗುಡೂರು, ರೇಣಿಗುಂಟಾ ಮೂಲಕ ಕಾರ್ಯಾಚರಿಸಲಿದೆ. ರೈಲು ಸಂಖ್ಯೆ 22353 ಪಾಟ್ನಾ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಶುಕ್ರವಾರ ಪಾಟ್ನಾದಿಂದ ಪ್ರಯಾಣವನ್ನು ಪ್ರಾರಂಭಿಸಿದ್ದು, ಇದು ಗುಡೂರು, ರೇಣಿಗುಂಟಾ ಮೂಲಕ ಕಾರ್ಯಾಚರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲು ಸಂಖ್ಯೆ 22306 ಜಸಿದಿಹ್ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಶನಿವಾರ ಜಸಿದಿಹ್‌ನಿಂದ ಪ್ರಯಾಣವನ್ನು ಪ್ರಾರಂಭಿಸಲಾಗಿದ್ದು, ಇದು ಗುಡೂರು, ರೇಣಿಗುಂಟಾ ಮೂಲಕ ಕಾರ್ಯಾಚರಿಸಲಿದೆ ಎಂದು ಹೇಳಿದೆ.
ಅಪಘಾತದ ಕುರಿತು ಮಾಹಿತಿ : ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗದ ತಿರುವಳ್ಳೂರಿನ ಕವರೈಪ್ಪೆಟ್ಟೈ ರೈಲು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಮೈಸೂರಿನಿಂದ ದರ್ಭಾಂಗಕ್ಕೆ ತೆರಳುತ್ತಿದ್ದ ಮೈಸೂರು - ದರ್ಬಾಂಗ್ ಬಾಗಮತಿ ಎಕ್ಸ್‌ಪ್ರೆಸ್ ರೈಲು ಲೂಪ್ ಲೈನ್‌ಗೆ ತಪ್ಪಾಗಿ ಪ್ರವೇಶಿಸಿದ ಪರಿಣಾಮ, ಸ್ಟೇಷನರಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಒಟ್ಟು 12-13 ಬೋಗಿಗಳು ಹಳಿತಪ್ಪಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ರಾತ್ರಿ 8:30 ರ ಸುಮಾರಿಗೆ ಘಟನೆ ನಡೆದಿತ್ತು.
ಇದನ್ನೂ ಓದಿ :ರೈಲು ನಿಲ್ಧಾಣದಲ್ಲಿ ನಿಲುಗಡೆ ಇಲ್ಲದಿದ್ದರೂ ಲೂಪ್ ಲೈನ್‌ಗೆ ಪ್ರವೇಶಿಸಿದ್ದ ಮೈಸೂರು- ದರ್ಭಂಗಾ ಬಾಗಮತಿ ಎಕ್ಸ್‌ಪ್ರೆಸ್!