ಕರ್ನಾಟಕ

karnataka

ETV Bharat / state

ಬೆಂಗಳೂರು: ತೆರಿಗೆ ಹಣ ಬಾಕಿ, ಮಂತ್ರಿ ಮಾಲ್​ಗೆ ಬಿಬಿಎಂಪಿಯಿಂದ ಮತ್ತೆ ಬೀಗ - Mantri Mall Closed - MANTRI MALL CLOSED

ತೆರಿಗೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಮತ್ತೆ ಮಂತ್ರಿ ಮಾಲ್​ಗೆ ಬೀಗ ಜಡಿದಿದ್ದಾರೆ.

BBMP  BENGALURU MANTRI MALL CLOSED
ತೆರಿಗೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಮತ್ತೆ ಮಂತ್ರಿ ಮಾಲ್​ಗೆ ಬೀಗ ಜಡಿದರು. (ETV Bharat)

By ETV Bharat Karnataka Team

Published : May 11, 2024, 7:10 AM IST

ಬೆಂಗಳೂರು:ತೆರಿಗೆ ಹಣ ಬಾಕಿ ಉಳಿಸಿಕೊಂಡ ಹಿನ್ನೆಲೆ ಶುಕ್ರವಾರ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್‌ ಪರವಾನಗಿಯನ್ನು ರದ್ದು ಮಾಡಿ ಬೀಗ ಜಡಿದಿದ್ದಾರೆ.

ತೆರಿಗೆ ಹಣ ಬಾಕಿ, ಮಂತ್ರಿ ಮಾಲ್​ಗೆ ಬಿಬಿಎಂಪಿಯಿಂದ ಮತ್ತೆ ಬೀಗ (ETV Bharat)

ಈ ಹಿಂದೆ ಕೂಡ ಹಲವು ಬಾರಿ ಈ ಮಾಲ್​ಗೆ ಪಾಲಿಕೆ ಬೀಗ ಹಾಕಿತ್ತು. ಹಲವು ಬಾರಿ ಎಚ್ಚರಿಕೆ ಕೊಟ್ಟರೂ ನಿರ್ಲಕ್ಷ್ಯ ವಹಿಸಿದ್ದ ಮಂತ್ರಿ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾಾರೆ. ತೆರಿಗೆ ಹಣ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ನೋಟಿಸ್ ಅಂಟಿಸುವುದರ ಜೊತೆಗೆ ಮಾಲ್ ಸೀಜ್ ಮಾಡಲಾಗಿದೆ. 34 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಮಾಲ್​ಗೆ ಬೀಗ ಜಡಿಯಲಾಗಿದೆ ಎಂದು ತಿಳಿದುಬಂದಿದೆ.

ಬಿಬಿಎಂಪಿ ಅಧಿಕಾರಿಗಳು ಮತ್ತೆ ಮಂತ್ರಿ ಮಾಲ್​ಗೆ ಬೀಗ ಜಡಿದರು (ETV Bharat)

8ನೇ ಬಾರಿ ಕ್ರಮ ತೆಗೆದುಕೊಂಡ ಅಧಿಕಾರಿಗಳು:ಮಂತ್ರಿ ಮಾಲ್​ಗೆ ಪಾಲಿಕೆ ಅಧಿಕಾರಿಗಳು ಬೀಗ ಹಾಕುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ 7 ಬಾರಿ ಪಾಲಿಕೆ ಈ ಕ್ರಮ ಕೈಗೊಂಡಿದೆ. ಇದೀಗ ಎಂಟನೇ ಬಾರಿಗೆ ಪಾಲಿಕೆ ಮಾಲ್​ಗೆ ಬೀಗ ಹಾಕಿದೆ. ಪ್ರತಿ ಬಾರಿ ಮಾಲ್​ಗೆ ಬೀಗ ಜಡಿದಾಗಲೂ ಮಂತ್ರಿ ಮಾಲ್ ಆಡಳಿತ ಮಂಡಳಿ ಕೋರ್ಟ್ ಮೆಟ್ಟಿಲೇರಿ ಅನುಮತಿ ಪಡೆದು ವ್ಯವಹಾರ ನಡೆಸಿದೆ. ಆದರೆ, ಇದೀಗ ಮತ್ತೆ ಇದೇ ಪ್ರಕರಣ ಮುಂದುವರೆದಿದ್ದು, 8ನೇ ಬಾರಿಗೆ ಮಾಲ್​ಗೆ ಬೀಗ ಹಾಕಲಾಗಿದೆ.

ಶುಕ್ರವಾರದಿಂದ ಭಾನುವಾರದವರೆಗೆ ಸರ್ಕಾರಿ ರಜೆ ಇರುವುದರಿಂದ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆ ಇತ್ತು. ಸದ್ಯಕ್ಕೆ ಮಾಲ್ ಕುರಿತು ಬಿಬಿಎಂಪಿ ಮತ್ತು ಮಾಲ್ ಪರವಾಗಿರುವ ವಕೀಲರ ತಂಡ ಮುಂದಿನ ನಡೆ ಏನು ಎನ್ನುವುದರ ಕುರಿತು ಚಿಂತನೆ ನಡೆಸಿದೆ.

ಇದನ್ನೂ ಓದಿ:ಚಿತ್ರದುರ್ಗ: ವಕೀಲ ದೇವರಾಜೇಗೌಡ ಪೊಲೀಸ್ ವಶಕ್ಕೆ - devaraje gowda in police custody

ABOUT THE AUTHOR

...view details