ಕರ್ನಾಟಕ

karnataka

ETV Bharat / state

ಲಿಂಗಸೂಗೂರಲ್ಲಿ ಬೆಳ್ಳಂಬೆಳಗ್ಗೆ ಜೋಡಿ ಕೊಲೆ - Double Murder - DOUBLE MURDER

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ ನಡೆದಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.

WIFE AND GRANDMOTHER MURDER  RAICHUR CRIME NEWS  FAMILY DISPUTE  RAICHUR
ರಾಯಚೂರಿನಲ್ಲಿ ಬೆಳ್ಳಬೆಳಗ್ಗೆ ಜೋಡಿ ಕೊಲೆ (ETV Bharat)

By ETV Bharat Karnataka Team

Published : Aug 23, 2024, 9:57 AM IST

ರಾಯಚೂರು:ಜಿಲ್ಲೆಯಲ್ಲಿ ಜೋಡಿ ಕೊಲೆ ನಡೆದಿದೆ. ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಯ ಕ್ವಾರ್ಟರ್ಸ್​ನಲ್ಲಿ ಈ ಎರಡು ಕೊಲೆ ನಡೆದಿದೆ. ಮೃತರನ್ನು ದ್ಯಾಮವ್ವ (65) ಮತ್ತು ಹುಲಿಗೆಮ್ಮ (23) ಎಂದು ಗುರುತಿಸಲಾಗಿದೆ.

ಕೌಟುಂಬಿಕ ಕಲಹ ಹಿನ್ನೆಲೆ ಇಂದು ಬೆಳಗಿನ ಜಾವ ಆರೋಪಿ ದುರ್ಗಪ್ಪ ತನ್ನ ಪತ್ನಿ ಹಾಗೂ ಅಜ್ಜಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಅಲ್ಲದೇ ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದುರುಗಪ್ಪ ಡಿ ಗ್ರೂಪ್ ನೌಕರನಾಗಿ ಕೆಲಸ ಮಾಡುತ್ತಿದ್ದ. ಸದ್ಯ ಘಟನಾ ಸ್ಥಳಕ್ಕೆ ಮುದಗಲ್ ಪೊಲೀಸ್ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಘಟನೆಯಿಂದ ಪಟ್ಟಣದ ಜನ ಬೆಚ್ಚಿಬಿದ್ದಿದ್ದಾರೆ. ಈ ಘಟನೆ ಕುರಿತು ಮುದಗಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಚಾಮರಾಜನಗರ: ಕಬ್ಬು ಕಟಾವು ಮಾಡುವಾಗ 2 ಚಿರತೆ ಮರಿ ಪತ್ತೆ - leopard cubs found

ABOUT THE AUTHOR

...view details