ಹುಬ್ಬಳ್ಳಿ (ಧಾರವಾಡ): ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ ಇಲ್ಲಿನ ಗೋಕುಲ ರಸ್ತೆಯ ಬಸವೇಶ್ವರ ನಗರದ ಪ್ರಸನ್ನ ಕಾಲೊನಿಯ ಚಿತ್ರಾ ಹೇಮಂತ ಲಾಡ್ ಅವರಿಗೆ 97.50 ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ. ಚಿತ್ರಾ ಅವರು ಷೇರು ಟ್ರೇಡಿಂಗ್ ಬಗ್ಗೆ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ. ಆಗ ಅದರಲ್ಲಿ ಘೋಚರಿಸಿದ ಲಿಂಕ್‌ವೊಂದನ್ನು ಕ್ಲಿಕ್ ಮಾಡಿದಾಗ ಅವರ ಮೊಬೈಲ್ ಸಂಖ್ಯೆ 'ಬಿ1 ವಿಜಯ್ ಬಜಾಜ್ ವೆಲ್ತ್ ಫ್ರೀಡಂ ಲರ್ನಿಂಗ್ ಗ್ರೂಪ್' ಎಂಬ ವಾಟ್ಸ್ಆ್ಯಪ್ ಗ್ರೂಪ್ಗೆ ಸೇರಿದ್ದಾರೆ.
ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭಾಂಶದ ಆಮಿಷ: ಮಹಿಳೆಗೆ 97 ಲಕ್ಷಕ್ಕೂ ಹೆಚ್ಚು ವಂಚನೆ ಆರೋಪ - STOCK MARKET SCAM
ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿ ಹುಬ್ಬಳ್ಳಿ ಮಹಿಳೆಗೆ ಆರೋಪಿಯೊಬ್ಬ 97 ಲಕ್ಷಕ್ಕೂ ಹೆಚ್ಚು ವಂಚಿಸಿರುವ ಘಟನೆ ನಡೆದಿದೆ.
Published : Oct 29, 2024, 11:15 AM IST
ವಿಜಯ ಬಜಾಜ್, ರಾಮ ಲಕ್ಷ್ಮಿ ಎಂಬುವರು ಷೇರು ಮಾರ್ಕೆಟ್ ಬಗ್ಗೆ ಚಿತ್ರಾ ಅವರಿಗೆ ಮಾಹಿತಿ ನೀಡಿ. ಲಿಂಕ್‌ವೊಂದನ್ನು ಕಳಿಸಿ “BAJAJA SST' ಎಂಬ ಅಪ್ಲಿಕೇಷನ್ ಅನ್ನು ಅವರ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಸಿ ಅದರಲ್ಲಿ ಹಣ ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಬಳಿಕ ಚಿತ್ರಾ ಅವರ ಪತಿ ಮತ್ತು ಪುತ್ರನ ವಿವಿಧ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮಾಡಿಸಿಕೊಂಡು, ಹೂಡಿಕೆ ಮಾಡಿದ್ದಾರೆ. ಆದರೆ ಹೂಡಿಕೆ ಮಾಡಿದ ಹಣವನ್ನು ವಾಪಸ್ ನೀಡದೇ ವಂಚಿಸಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಗಂಟೆಗೂ ಹೆಚ್ಚಿನ ಕಾಲ ಗುಂಡಿನ ಚಕಮಕಿ: ಕೊನೆಗೂ ಉಗ್ರರಿಬ್ಬರನ್ನು ಹೊಡೆದುರುಳಿಸಿದ ಭಾರತೀಯ ಸೇನೆ