ಮಂಗಳೂರು:ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈವರೆಗೆ ಪ್ರಯಾಣಿಕರ ಮಾಹಿತಿಗಾಗಿ ಲೌಡ್ ಸ್ಪೀಕರ್‌ಗಳಲ್ಲಿ ಹೊರಡಿಸಲಾಗುತ್ತಿದ್ದ ಘೋಷಣೆಗಳನ್ನು ನಿಲ್ಲಿಸಲು ವಿಮಾನ ನಿಲ್ದಾಣ ಆಡಳಿತ ಮಂಡಳಿ ನಿರ್ಧರಿಸಿದೆ.
ಲೌಡ್ ಸ್ಪೀಕರ್ ಘೋಷಣೆಯಿಂದ ಪ್ರಯಾಣಿಕರಿಗೆ ಕಿರಿಕಿರಿ ಆಗುತ್ತದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣ ಈ ಕ್ರಮಕ್ಕೆ ಮುಂದಾಗಿದೆ. ಇನ್ನು ಮುಂದೆ ವಿಮಾನ ಆಗಮನ, ನಿರ್ಗಮನ, ವಿಳಂಬ ಸಹಿತ ವಿವಿಧ ಮಾಹಿತಿಯನ್ನು ಪ್ರಯಾಣಿಕರು ಏರ್ಪೋರ್ಟ್ನಲ್ಲಿರುವ ಡಿಸ್‌ಪ್ಲೆ (ಫೈಟ್ ಇನ್ನಾರ್ಮೇಶನ್ ಡಿಸ್‌ಪ್ಲೇ ಸಿಸ್ಟಂ) ಮೂಲಕ ಪಡೆಯಬಹುದಾಗಿದೆ. ವಿಮಾನ ನಿಲ್ದಾಣದ ಒಳಭಾಗ ಮತ್ತು ಹೊರಭಾಗಗಳಲ್ಲಿ ದೊಡ್ಡ ಡಿಸ್‌ಪ್ಲೇ ಇರಿಸಲಾಗಿದೆ.
ನಿಲ್ದಾಣದ ಟರ್ಮಿನಲ್‌ನಲ್ಲಿ 'ಮೇ ಐ ಹೆಲ್ಪ್ ಯು' ಡೆಸ್ಕ್ ಅನ್ನು ಸ್ಥಾಪಿಸಲಾಗಿದೆ. ಅಲ್ಲಿ ಸಿಬಂದಿ, ಕಾರ್ಯನಿರ್ವಾಹಕರು ಸಹಾಯಕ್ಕೆ ಇರಲಿದ್ದಾರೆ. ಎಲ್ಲ ಏರ್‌ಲೈನ್ಸ್ ಚೆಕ್ ಇನ್ ಕೌಂಟರ್‌ಗಳು, ಬೋರ್ಡಿಂಗ್ ಗೇಟ್‌ಗಳಲ್ಲಿಯೂ ವಿಮಾನದ ಬಗ್ಗೆ ಮಾಹಿತಿ ಪಡೆಯಲು ಅವಕಾಶವಿದೆ.