ಕರ್ನಾಟಕ

karnataka

ETV Bharat / state

ಹಲ್ಲೆ ಮಾಡಿದವರನ್ನ ಬಂಧಿಸುವುದಾಗಿ ಸುಳ್ಳು ಹೇಳಿ ದೂರುದಾರನಿಗೆ 50 ಸಾವಿರ ಲಂಚ ಕೇಳಿದ ಪಿಎಸ್ಐ ಲೋಕಾ ಬಲೆಗೆ

50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 25 ಸಾವಿರ ರೂ. ಪಡೆಯುತ್ತಿದ್ದ ಪಿಎಸ್ಐ ಲೋಕಾ ಬಲೆಗೆ ಬಿದ್ದಿದ್ದಾರೆ.

LOKAYUKTA RAID
ಲೋಕಾಯುಕ್ತ ಕಚೇರಿ (ETV Bharat)

By ETV Bharat Karnataka Team

Published : Oct 31, 2024, 7:24 AM IST

ಬೆಂಗಳೂರು:ಹಲ್ಲೆ ಮಾಡಿದವರನ್ನು ಬಂಧಿಸುವುದಾಗಿ ಹೇಳಿ ದೂರುದಾರನಿಗೆ 50 ಸಾವಿರ ಲಂಚಕ್ಕೆ ಕೈಯೊಡಿದ್ದ ವೈಟ್ ಫೀಲ್ಡ್ ಠಾಣೆಯ ಪೊಲೀಸ್ ಸಬ್​ ಇನ್ಸ್​ಪೆಕ್ಟರ್ ಲೋಕಾಯುಕ್ತ ಅಧಿಕಾರಿಗಳ ತೋಡಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಗಂಗಾಧರಯ್ಯ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪಿಎಸ್ಐ.

ವೈಟ್ ಫೀಲ್ಡ್ ಠಾಣೆಯಲ್ಲಿ ಸಬ್​ ಇನ್ಸ್​ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ದೂರುದಾರ ಅಂಬರೀಶ್ ಮುತ್ಸಂದ್ರದಲ್ಲಿ ವಾಸವಾಗಿದ್ದಾರೆ. ತಮ್ಮ‌ ಮೇಲೆ ಹಲ್ಲೆ ನಡೆಸಿದ್ದ ಹೆಂಡತಿ ಮನೆಯವರನ್ನ ಬಂಧಿಸುವುದಾಗಿ ಹೇಳಿ 50 ಸಾವಿರ ಲಂಚ ನೀಡುವಂತೆ ಸೂಚಿಸಿದ್ದರು. ಮುಂಗಡವಾಗಿ 25 ಸಾವಿರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಪಿಎಸ್ಐ ಗಂಗಾಧರ್ ಸಿಕ್ಕಿಬಿದ್ದಿದ್ದಾರೆ, ಈ ಹಣದ ಸಮೇತ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾ ಅಧಿಕಾರಿಗಳು ತಿಳಿಸಿದ್ದಾರೆ.

ವಿವಾಹಿತನಾಗಿರುವ ಅಂಬರೀಶ್ ವೈಯಕ್ತಿಕ ಕಾರಣಗಳಿಂದಾಗಿ ಕಳೆದ ಮೂರು ವರ್ಷಗಳಿಂದ ಹೆಂಡತಿಯಿಂದ ದೂರವಾಗಿದ್ದರು. ಅ. 9 ರಂದು ಪತ್ನಿ ರಾಧಿಕಾ ಕರೆ ಮಾಡಿ ಮಗುವಿಗೆ ಹುಷಾರಿಲ್ಲ ಎಂದು ತಿಳಿಸಿದ್ದಳು. ಇದರಂತೆ ಅ.17ರಂದು ಸರ್ಜಾಪುರದಲ್ಲಿರುವ ಪತ್ನಿ ಮನೆಗೆ ಅಂಬರೀಶ ಹೋಗಿದಾಗ ಆಕೆಯ ಮನೆಯವರು ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದರು. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪತ್ನಿ ಹಾಗೂ ಆಕೆಯ ಮನೆಯವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಪಿಎಸ್ಐ ಗಂಗಾಧರಯ್ಯ, ತನಿಖೆ ಕೈಗೊಂಡಿದ್ದರು. ಈ ಮಧ್ಯೆ ಆರೋಪಿಗಳಿಗೆ ಜಾಮೀನು ಮಂಜೂರಾಗಿದ್ದು ಈ ವಿಷಯ ದೂರುದಾರನಿಗೆ ತಿಳಿದಿರಲಿಲ್ಲ. ಇದನ್ನ ಬಂಡವಾಳ ಮಾಡಿಕೊಂಡ ಪಿಎಸ್ಐ, ಆರೋಪಿಗಳನ್ನ ಕೊಲೆಯತ್ನ ಪ್ರಕರಣದಡಿ ಬಂಧಿಸುವುದಾಗಿ ಸುಳ್ಳು ಹೇಳಿ 50 ರೂ. ನೀಡುವಂತೆ ಕೇಳಿದ್ದರು.‌ ಇದರಂತೆ 25 ಸಾವಿರ ಹಣ ಪಡೆಯುವಾಗ ಸಿಕ್ಕಿಬಿದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಸ್ಮಶಾನಕ್ಕೆ ಶವ ಸಾಗಾಟ ವಿಚಾರಕ್ಕೆ ಬಡಿದಾಡಿಕೊಂಡ ಆ್ಯಂಬುಲೆನ್ಸ್ ಸಿಬ್ಬಂದಿ; ಎಫ್ಐಆರ್ ದಾಖಲು

ABOUT THE AUTHOR

...view details