ಕರ್ನಾಟಕ

karnataka

ETV Bharat / state

ಗ್ಯಾಸ್ ಸಿಲಿಂಡರ್ ವಿತರಣೆಗೆ ಅನುಮತಿ ಕೊಡಿಸಲು ಲಂಚಕ್ಕೆ ಬೇಡಿಕೆ ಆರೋಪ: ಇಬ್ಬರು ಪೊಲೀಸ್ ಸಿಬ್ಬಂದಿ ಲೋಕಾಯುಕ್ತ ವಶಕ್ಕೆ - Lokayukta arrests two policemen - LOKAYUKTA ARRESTS TWO POLICEMEN

ಗ್ಯಾಸ್ ಸಿಲಿಂಡರ್ ವಿತರಣೆಗೆ ಅನುಮತಿ ದೊರಕಿಸಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಪೊಲೀಸರನ್ನು ಲೋಕಾಯುಕ್ತ ವಶಕ್ಕೆ ಪಡೆದಿದೆ.

ಲೋಕಾಯುಕ್ತ
ಲೋಕಾಯುಕ್ತ

By ETV Bharat Karnataka Team

Published : Mar 26, 2024, 10:56 PM IST

ಬೆಂಗಳೂರು: ಗ್ಯಾಸ್ ಸಿಲಿಂಡರ್​ಗಳ ವಿತರಣೆಗೆ ಅನುಮತಿ ಕೊಡಿಸಲು ಲಂಚ ಸ್ವೀಕರಿಸುತ್ತಿದ್ದ ಇಬ್ಬರು‌ ಪೊಲೀಸ್ ಸಿಬ್ಬಂದಿಯನ್ನ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಐವತ್ತು ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಪೀಣ್ಯ ಉಪವಿಭಾಗದ ಎಸಿಪಿಯವರ ವಾಹನ ಚಾಲಕ ನಾಗರಾಜ್ ಹಾಗೂ ಪೀಣ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಂಗಹನುಮಯ್ಯರನ್ನ ವಶಕ್ಕೆ ಪಡೆಯಲಾಗಿದೆ.

ಸುಂಕದಕಟ್ಟೆ ನಿವಾಸಿಯಾಗಿರುವ ಚೇತನ್ ಎಂಬುವವರು ಪೀಣ್ಯ ಉಪವಿಭಾಗದಲ್ಲಿ ಗ್ಯಾಸ್ ಸಿಲಿಂಡರ್ ವಿತರಣೆಗೆ ಅನುಮತಿ ಕೋರಿದ್ದರು. ಅನುಮತಿ ದೊರಕಿಸಿ ಕೊಡಲು 2 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪಿಗಳ ವಿರುದ್ಧ ಲೋಕಾಯುಕ್ತಕ್ಕೆ ಚೇತನ್ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದರು. ಇಂದು ಪೀಣ್ಯ ಉಪವಿಭಾಗದ ಎಸಿಪಿಯವರ ಕಚೇರಿ ಬಳಿ 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಆರೋಪಿತರನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಇಬ್ಬರು ಆರೋಪಿಗಳ ವಿಚಾರಣೆ ಮುಂದುವರೆದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಲಂಚ ಸ್ವೀಕರಿಸುತ್ತಿದ್ದಾಗ ರೆಡ್​ ಹ್ಯಾಂಡ್​ ಆಗಿ ಲೋಕಾ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

ABOUT THE AUTHOR

...view details