ಕರ್ನಾಟಕ

karnataka

ETV Bharat / state

₹25 ಕೋಟಿ ಮೊತ್ತದ ಮದ್ಯ, ಉಡುಗೊರೆ, ನಗದು ಜಪ್ತಿ

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ರಾಜ್ಯದಲ್ಲಿ ಈವರೆಗೆ 25.35 ಕೋಟಿ ರೂ. ಮೊತ್ತದ ಹಣ, ಹೆಂಡ, ಉಡುಗೊರೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

By ETV Bharat Karnataka Team

Published : Mar 20, 2024, 7:23 AM IST

money and liquor seized  Bengaluru  Chikkamagaluru  Mandya
ಲೋಕಸಭೆ ಚುನಾವಣೆ: ಈವರೆಗೆ 25.35 ಕೋಟಿ ರೂ. ಮೊತ್ತದ ಹಣ, ಹೆಂಡ, ಉಡುಗೊರೆ ಜಪ್ತಿ

ಬೆಂಗಳೂರು:ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಆಯೋಗ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.‌ ಅಕ್ರಮ ನಗದು, ಮದ್ಯ, ಉಡುಗೊರೆಗಳ ಸಾಗಾಟಕ್ಕೆ ಕಡಿವಾಣ ಹಾಕುತ್ತಿದೆ. ಅಧಿಕಾರಿಗಳು ಈವರೆಗೆ ಒಟ್ಟು 25.35 ಕೋಟಿ ರೂ.‌ ಮೊತ್ತದ ನಗದು, ಮದ್ಯ, ಉಡುಗೊರೆಗಳನ್ನು ಜಪ್ತಿ ಮಾಡಿದ್ದಾರೆ.

ಮಂಗಳವಾರದವರೆಗೆ 2,357 ಕ್ಷಿಪ್ರ ಪಡೆಗಳು ಮತ್ತು 2,669 ಸ್ಥಿರ ಕಣಾವಲು ತಂಡಗಳನ್ನು ಸಕ್ರಿಯಗೊಳಿಸಲಾಗಿದೆ. ಚುನಾವಣೆ ಘೋಷಣೆಯ ನಂತರ 87,212 ಗೋಡೆಬರಹ, ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳು ಹಾಗು ಇತರೆ ವಿರೂಪಗಳನ್ನು 24 ಗಂಟೆಗಳೊಳಗೆ ಸರ್ಕಾರಿ ಆಸ್ತಿಯಿಂದ ತೆಗೆದುಹಾಕಲಾಗಿದೆ. ಈವರೆಗೆ 1,34,307 ಗೋಡೆಬರಹ, ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳ ಮತ್ತು ಇತರೆ ಸಾರ್ವಜನಿಕ ಆಸ್ತಿಯಿಂದ ಇತರೆ ವಿರೂಪಗಳನ್ನು 48 ಗಂಟೆಗಳ ಒಳಗೆ ಸಾರ್ವಜನಿಕ ಆಸ್ತಿಯಿಂದ ತೆಗೆದುಹಾಕಲಾಗಿದೆ.

ಪೊಲೀಸರು ವಶಕ್ಕೆ ಪಡೆದಿರುವ ಹಣ

ಚುನಾವಣೆಯ ಘೋಷಣೆಯ ನಂತರ 1,47,112 ಗೋಡೆಬರಹ, ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳ ಮತ್ತು ಇತರೆ (Private Property) ಖಾಸಗಿ ಆಸ್ತಿಯಿಂದ ಇತರೆ ವಿರೂಪಗಳನ್ನು 72 ಗಂಟೆಗಳ ಒಳಗೆ ಖಾಸಗಿ ಆಸ್ತಿಯಿಂದ ತೆಗೆದು ಹಾಕಲಾಗಿದೆ. ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 135 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

36,097 ಶಸ್ತ್ರಾಸ್ತ್ರಗಳನ್ನು ಠೇವಣೆ ಮಾಡಲಾಗಿದೆ. 825 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 7 ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಸಿಆರ್​ಪಿಸಿಯ ತಡೆಗಟ್ಟುವ ವಿಭಾಗಗಳ ಅಡಿಯಲ್ಲಿ 5,155 ಪ್ರಕರಣಗಳನ್ನು ದಾಖಲಿಸಿದೆ. ಅದರಲ್ಲಿ 4,063 ವ್ಯಕ್ತಿ, ವ್ಯಕ್ತಿಗಳನ್ನು ಒಳಪಟ್ಟು ಜಾಮೀನು ರಹಿತ ವಾರಂಟ್ ಅಡಿಯಲ್ಲಿ 7,790 ಸಂಖ್ಯೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಬಕಾರಿ ಇಲಾಖೆ ಘೋರ ಅಪರಾಧ ಅಡಿಯಲ್ಲಿ 142 ಸಂಖ್ಯೆ ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 126 ಸಂಖ್ಯೆ ಪ್ರಕರಣ ದಾಖಲಿಸಿದೆ. ಎನ್​ಡಿಪಿಎಸ್​ ಅಡಿಯಲ್ಲಿ 7 ಸಂಖ್ಯೆ ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15(a) ಅಡಿಯಲ್ಲಿ 531 ಸಂಖ್ಯೆ ಪ್ರಕರಣಗಳನ್ನು ದಾಖಲಿಸಿದೆ. ಮತ್ತು 89 ಸಂಖ್ಯೆ ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೈಕ್​ನಲ್ಲಿ ಸಾಗಿಸುತ್ತಿದ್ದ ಹಣ ವಶಕ್ಕೆ ಪಡೆದ ಪೊಲೀಸರು

ಸ್ಥಿರ ಕಣಾವಲು ತಂಡಗಳು ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 99,20,000 ರೂ. ನಗದನ್ನು ಜಪ್ತಿ ಮಾಡಲಾಗಿದೆ. ಸ್ಥಿರ ಕಣಾವಲು ತಂಡಗಳು ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 15,00,000 ರೂ.‌ ನಗದು ವಶಕ್ಕೆ ಪಡೆದಿದೆ.

ನಗದು, ಪಂಚೆ, ಸೀರೆ ವಶ: ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದ ಮೇಲೆ ಕಣ್ಣಿಟ್ಟಿದೆ. ಜಿಲ್ಲೆ ಹಾಗೂ ತಾಲೂಕಿನ ಹೊರ ಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯೊಳಗೆ ಯಾರೇ ಬರಬೇಕಾದರೂ ಅಥವಾ ಜಿಲ್ಲೆಯಿಂದ ಹೊರ ಹೋಗಬೇಕಾದರೂ ಚೆಕ್ ಪೋಸ್ಟ್ ಮೂಲಕವೇ ದಾಟಿ ಹೋಗಬೇಕಿದೆ.

ಈ ವೇಳೆ ಪ್ರತ್ಯೇಕ ಎರಡು ಕಡೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ, ಸೀರೆ ಹಾಗೂ ಪಂಚೆ ವಶಕ್ಕೆ ಪಡೆಯಲಾಗಿದೆ. ಕೊಪ್ಪ ತಾಲೂಕಿನ ಗಡಿಕಲ್ ಚೆಕ್ ಪೋಸ್ಟ್​ನಲ್ಲಿ, ಒಂದು ಲಕ್ಷದ ಇಪ್ಪತ್ತೈದು ಸಾವಿರ ಮೌಲ್ಯದ ಸೀರೆ ಪಂಚೆ ವಶಕ್ಕೆ ಪಡೆಯಲಾಗಿದೆ. ತರೀಕೆರೆ ತಾಲೂಕಿನ ಲಕ್ಕವಳ್ಳಿ ಚೆಕ್ ಪೋಸ್ಟ್​ನಲ್ಲಿ ಬೈಕ್​ನಲ್ಲಿದ್ದ 95,000 ಹಣ ವಶಕ್ಕೆ ಪಡೆಯಲಾಗಿದೆ. ಕಾರ್​ನಲ್ಲಿ ಸೀರೆ ಹಾಗೂ ಪಂಚೆ ಸಾಗಿಸಲಾಗುತ್ತಿತ್ತು. ಈ ಎಲ್ಲವನ್ನೂ ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯದ ವಿರುದ್ಧ ನಾನು ಧ್ವನಿ ಎತ್ತಿದ್ದೇನೆ: ಸಂಸದ ಡಿ ಕೆ ಸುರೇಶ್

ABOUT THE AUTHOR

...view details