ತುಮಕೂರು:ಲೋಕಸಭೆಯ ಚುನಾವಣೆಗೆ ಎರಡನೇ ಹಂತದ ಮತದಾನ ಆರಂಭವಾಗಿದೆ. ಸಿದ್ಧಗಂಗಾ ಮಠ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸಿದ್ದಲಿಂಗ ಸ್ವಾಮೀಜಿ ಮೊದಲು ಮತಹಕ್ಕು ಚಲಾಯಿಸಿದರು. ಮತದಾನಕ್ಕೂ ಮುನ್ನ ಮಠದಲ್ಲಿ ಗೋವುಗಳಿಗೆ ಸ್ವಾಮೀಜಿ ಹಣ್ಣು ತಿನ್ನಿಸಿ ಮತಗಟ್ಟೆಗೆ ಆಗಮಿಸಿದರು.
ಮತದಾನದ ಬಳಿಕ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ, ದೇಶದಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕಿದೆ. ಹಾಗಾದರೆ ಮಾತ್ರ ಶೇಕಡಾ 100ರಷ್ಟು ಮತದಾನ ಪ್ರಮಾಣವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನದ ಜಾಗೃತಿಯಾಗಿದೆ. ಆದರೆ, ಹೆಚ್ಚಿನ ವಿದ್ಯಾವಂತರಾದ ನಗರ ಪ್ರದೇಶದಲ್ಲಿ ಇರುವಂತವರು ಮತದಾನ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ಇದು ಆಗಬಾರದು ಎಂದು ಹೇಳಿದರು.