ಕರ್ನಾಟಕ

karnataka

ETV Bharat / state

ತುಮಕೂರು: ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದ ಹೈವೊಲ್ಟೇಜ್ ಎಲೆಕ್ಟ್ರಿಕ್ ವೈರ್; ಪೈಲಟ್​ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ - HIGH VOLTAGE WIRE - HIGH VOLTAGE WIRE

ಕುಣಿಗಲ್ ಪಟ್ಟಣದ ಹೊರವಲಯದಲ್ಲಿ ರೈಲ್ವೆ ಹಳಿಯಲ್ಲಿ ಹೈವೊಲ್ಟೇಜ್ ಎಲೆಕ್ಟ್ರಿಕ್ ವೈರ್ ಬಿದ್ದಿದ್ದನ್ನು ನೋಡಿದ ಚಾಲಕ ರೈಲನ್ನು ನಿಲ್ಲಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.

ರೈಲ್ವೆ ಟ್ರಾಕ್
ರೈಲ್ವೆ ಟ್ರಾಕ್

By ETV Bharat Karnataka Team

Published : Mar 30, 2024, 1:17 PM IST

Updated : Mar 30, 2024, 5:38 PM IST

ತುಮಕೂರು : ರೈಲು ಚಾಲಕನ (ಲೋಕೊ ಪೈಲಟ್​) ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿರುವ ಘಟನೆ ಕುಣಿಗಲ್ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರೈಲು ಸ್ವಲ್ಪ ಮುಂದೆ ಸಾಗಿದರು ವಿದ್ಯುತ್​ ಸ್ಪರ್ಶಿಸಿ ಹೊತ್ತಿ ಉರಿಯುವ ಸಾಧ್ಯತೆಯಿತ್ತು. ಜೊತೆಗೆ ಸಾವಿರಾರು ಜನ ಪ್ರಯಾಣಿಕರ ಪ್ರಾಣಕ್ಕೆ ಕುತ್ತು ತರುತ್ತಿತ್ತು.

ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಸಾವಿರಾರು ಜನ ಪ್ರಯಾಣಿಸುತ್ತಿದ್ದರು. ಕುಣಿಗಲ್ ಬಳಿ ರೈಲ್ವೆ ಟ್ರ್ಯಾಕ್​ನಲ್ಲಿ ಹೈವೊಲ್ಟೇಜ್ ಎಲೆಕ್ಟ್ರಿಕ್ ವೈರ್ ಬಿದ್ದಿತ್ತು. ವಿದ್ಯುತ್ ಲೈನ್ ಕಟ್ ಆಗಿರೋದನ್ನು ನೋಡಿದ ಚಾಲಕ ತಕ್ಷಣ ಟ್ರೈನ್ ನಿಲ್ಲಿಸಿದ್ದಾರೆ. ಚಾಲಕನ ಕಾರ್ಯಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಯಶವಂತಪುರ ಮತ್ತು ಹಾಸನ ನಡುವಿನ ರೈಲು ಇದಾಗಿದ್ದು, ಶುಕ್ರವಾರ ಬೆಳಗ್ಗೆ 11:30ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟಿತ್ತು. ಸುಮಾರು 12.15ರ ಹೊತ್ತಿಗೆ ಕುಣಿಗಲ್ ಹೊರವಲಯದಲ್ಲಿ ಹೈವೊಲ್ಟೇಜ್ ವಿದ್ಯುತ್​ ತಂತಿ ಬಿದ್ದಿದ್ದ ಕಾರಣ ರೈಲನ್ನು ನಿಲ್ಲಿಸಲಾಗಿತ್ತು. ಬಳಿಕ ಬೆಂಗಳೂರಿನಿಂದ ರೈಲ್ವೆ ತಾಂತ್ರಿಕ ಸಿಬ್ಬಂದಿ ಬಂದು ಸರಿಪಡಿಸಿದ್ದಾರೆ. ಬಳಿಕ ಮಧ್ಯಾಹ್ನ ಸುಮಾರು 2.45ರ ಹೊತ್ತಿಗೆ ರೈಲು ಹಾಸನದ ಕಡೆಗೆ ಸಾಗಿದೆ.

ಇದನ್ನೂ ಓದಿ :ಗೋಡಾನ್ ಎಕ್ಸ್‌ಪ್ರೆಸ್​ ರೈಲಿನ ಎರಡು ಬೋಗಿಗಳಿಗೆ ಬೆಂಕಿ: ವಿಡಿಯೋ - Godan Express Bogies caught fire

Last Updated : Mar 30, 2024, 5:38 PM IST

ABOUT THE AUTHOR

...view details