ಕರ್ನಾಟಕ

karnataka

ETV Bharat / state

ಕನ್ನಡ ಭಾಷಾ ವಿದ್ವಾಂಸ ಕೆ.ವಿ.ನಾರಾಯಣರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - SAHITYA AKADEMI AWARD

ಕನ್ನಡ ಭಾಷಾ ವಿದ್ವಾಂಸ ಕೆ.ವಿ.ನಾರಾಯಣ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಕೆ.ವಿ. ನಾರಾಯಣರ ಕೃತಿ
ಕನ್ನಡ ಭಾಷಾ ವಿದ್ವಾಂಸ ಕೆ.ವಿ.ನಾರಾಯಣರ ಕೃತಿ (x.com/sahityaakademi)

By ETV Bharat Karnataka Team

Published : Dec 18, 2024, 7:59 PM IST

ಬೆಂಗಳೂರು:ಕನ್ನಡ ಭಾಷಾ ವಿದ್ವಾಂಸ ಹಾಗೂ ವಿಮರ್ಶಕ ಕೆ.ವಿ.ನಾರಾಯಣ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅವರ 'ನುಡಿಗಳ ಅಳಿವು-ಬೇರೆ ದಿಕ್ಕಿನ ನೋಟ' ಕೃತಿಗೆ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ 1 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಮಾರ್ಚ್ 8ರಂದು ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಕನ್ನಡದ ಕೆ.ವಿ.ನಾರಾಯಣ ಸೇರಿದಂತೆ 21 ಭಾಷೆಗಳ ಲೇಖಕರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಕನ್ನಡ ವಿಭಾಗದ ಆಯ್ಕೆ ಸಮಿತಿಯಲ್ಲಿ ಓ.ಎಲ್.ನಾಗಭೂಷಣ ಸ್ವಾಮಿ, ಡಾ.ಹಳೆಮನಿ ರಾಜಶೇಖರ್ ಮತ್ತು ಡಾ.ಸರಜೂ ಕಾಟ್ಕರ್ ಇದ್ದರು.

ಕೆ.ವಿ.ನಾರಾಯಣ (ETV Bharat)

'ಸಾಹಿತ್ಯ ತತ್ವ: ಬೇಂದ್ರೆ ದೃಷ್ಟಿ', 'ಧ್ವನ್ಯಾಲೋಕ: ಒಂದು ಅಧ್ಯಯನ', 'ಕನ್ನಡ ಜಗತ್ತು: ಅರ್ಧ ಶತಮಾನ', 'ಭಾಷೆಯ ಸುತ್ತಮುತ್ತ' ಮತ್ತು 'ನಮ್ಮೊಡನೆ ನಮ್ಮ ನುಡಿ' ಹೀಗೆ 22ಕ್ಕೂ ಹೆಚ್ಚು ಕೃತಿಗಳನ್ನು ಕೆ.ವಿ.ನಾರಾಯಣ ರಚಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಬಳಿಕ ಮತ್ತೆ ಮಂಗಳೂರಿನಲ್ಲಿ ಆರಂಭವಾಗಲಿದೆ ಕರಾವಳಿ ಉತ್ಸವ - KARAVALI UTSAV 2024

ABOUT THE AUTHOR

...view details