ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಏರ್ಪೋರ್ಟ್ ಕೌನ್ಸಿಲ್ ಇಂಟರ್ನ್ಯಾಷನಲ್ (ಎಸಿಐ) ನಿಂದ ಲೆವೆಲ್ 3 ಏರ್ಪೋರ್ಟ್ ಕಸ್ಟಮರ್ ಎಕ್ಸ್ಪೀರಿಯನ್ಸ್ ಮಾನ್ಯತೆ ಪಡೆದುಕೊಂಡಿದೆ. ಎಸಿಐ ಹೊರಡಿಸಿದ ಮಾನ್ಯತೆಯು ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ವಿಮಾನ ನಿಲ್ದಾಣವು ಡಿಸೆಂಬರ್ 2022 ರಲ್ಲಿ ಲೆವೆಲ್ 2 ಮಾನ್ಯತೆ ಪಡೆದಿತ್ತು.
ಲೆವೆಲ್ 3 ಮಾನ್ಯತೆಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೇವಾ ವಿನ್ಯಾಸ, ನಾವೀನ್ಯತೆ, ವಿಮಾನ ನಿಲ್ದಾಣ ಸಂಸ್ಕೃತಿ, ಆಡಳಿತ, ಕಾರ್ಯಾಚರಣೆ ಸುಧಾರಣೆ, ಮಾಪನ, ಗ್ರಾಹಕರ ತಿಳಿವಳಿಕೆ ಮತ್ತು ಕಾರ್ಯತಂತ್ರದ ಮೇಲೆ ನೀಡಲಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 5 ಮಿಲಿಯನ್ ಪ್ರಯಾಣಿಕರ ವಿಭಾಗದಲ್ಲಿ ಈ ಮೈಲಿಗಲ್ಲು ತಲುಪಿದ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.