ಕರ್ನಾಟಕ

karnataka

ETV Bharat / state

ಬಿಜೆಪಿ ಅಭ್ಯರ್ಥಿ ಅಡುಗೆ ಮಾಡಲು ಲಾಯಕ್ಕು ಎಂದ ಶಾಮನೂರು; ತಿರುಗೇಟು ನೀಡಿದ ಗಾಯತ್ರಿ ಸಿದ್ದೇಶ್ವರ - Shamanur Statement

ದಾವಣಗೆರೆ ನಗರದಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಿತು.

Etv Bharat
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದರು.

By ETV Bharat Karnataka Team

Published : Mar 29, 2024, 4:02 PM IST

Updated : Mar 29, 2024, 7:32 PM IST

ಶಾಮನೂರು ಹೇಳಿಕೆ

ದಾವಣಗೆರೆ:ಇಲ್ಲಿ ಗೆದ್ದು ಮೋದಿಗೆ ಕಮಲ ಅರ್ಪಿಸುತ್ತಾರವಂತೆ, ಮೊದಲು ದಾವಣಗೆರೆ ಜಿಲ್ಲೆಯ ಸಮಸ್ಯೆ ತಿಳಿದುಕೊಳ್ಳಲಿ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ವಿರುದ್ಧ ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಕಿಡಿಕಾರಿದ್ದಾರೆ.

ದಾವಣಗೆರೆ ನಗರದ ಬಂಟರ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಬರೀ ಮೋದಿ ಮೋದಿ, ಅವರು ಏನೂ ಮಾಡಿದ್ದಾರೆ. ನಮ್ಮ ಕರ್ನಾಟಕಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಇನ್ನು ನಮ್ಮ ಪಕ್ಷದಿಂದ ಡಾ ಪ್ರಭಾ ಮಲ್ಲಿಕಾರ್ಜುನ ಅವರು ಮಹಿಳಾ ಅಭ್ಯರ್ಥಿಯಾಗಿ ಲೋಕಸಭಾ ಕಣಕ್ಕಿಳಿದಿದ್ದು, ಅವರನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ಕಳುಹಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಅಡುಗೆ ಮಾಡಲು ಲಾಯಕ್ಕು:ದಾವಣಗೆರೆ ಬಿಜೆಪಿ ಮಹಿಳಾ ಅಭ್ಯರ್ಥಿ ನಮ್ಮ ಎದುರಾಳಿ, ಅವರು ಮೊದಲು ದಾವಣಗೆರೆ ಸಮಸ್ಯೆ ಬಗ್ಗೆ ವಿಸ್ತಾರವಾಗಿ ತಿಳಿಯಲಿ, ಅವರಿಗೆ ಮಾತನಾಡಲೂ ಬಾರದು. ಅವರು ಅಡುಗೆ ಮಾಡಲು ಲಾಯಕ್ಕುಎಂದ ಶಾಮನೂರು,‌ ಡಾ. ಪ್ರಭಾ ಮಲ್ಲಿಕಾರ್ಜುನ್‌ ಪರ ಕೆಲಸ ಮಾಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ದಾವಣಗೆರೆ ನಗರದ ಬಂಟರ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್‌.ಬಿ. ಮಂಜಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ, ಕೆಪಿಸಿಸಿ ವಕ್ತಾರ ನಿಖೇತ್ ರಾಜು ಮೌರ್ಯ ಸೇರಿದಂತೆ ಮತ್ತಿತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಗಾಯತ್ರಿ ಸಿದ್ದೇಶ್ವರ ತಿರುಗೇಟು:ಬಿಜೆಪಿ ಅಭ್ಯರ್ಥಿ ಅಡುಗೆ ಮಾಡಲು ಲಾಯಕ್ಕು ಎಂಬಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಟಾಂಗ್ ನೀಡಿದ್ದಾರೆ. ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಮುನ್ನುಗ್ಗುತ್ತಿದ್ದಾರೆ, ಆಕಾಶದಲ್ಲಿ ಹಾರುವ ಹಂತಕ್ಕೂ ಹೋಗಿದ್ದಾರೆ. ಈ ವಿಚಾರ ಅಜ್ಜಗೆ ಗೊತ್ತಿಲ್ಲ ಅಂತಾ ಕಾಣಿಸುತ್ತಿದೆ ಎಂದು ತಿರುಗೇಟು ನೀಡಿದರು.‌

ಶಾಮನೂರು ಮಹಿಳೆಯರಿಗೆ ಅಗೌರವ ತೋರಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆಕ್ರೋಶ ವ್ಯಕ್ತಪಡಿಸಿದ ಗಾಯತ್ರಿ, ''ಅಡುಗೆ ಮಾಡಿ ಕೈ ತುತ್ತು ಕೊಡುವ ಪ್ರೀತಿ ಅವರಿಗೆ ಗೊತ್ತಿಲ್ಲ, ನಾವೆಲ್ಲ ಮಹಿಳೆಯರು ಅಡುಗೆ ಮಾಡೋಕೆ ಮಾತ್ರ ಸೀಮಿತಾನಾ? ಮಹಿಳೆ ಅಡುಗೆನೂ ಮಾಡ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ'' ಎಂದರು.‌ ಮೋದಿಜಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಹೊತ್ತು ಕೊಡುತ್ತಿದ್ದಾರೆ. ಆದರೆ ಇಂತಹವರು ಮಹಿಳೆಯರಿಗೆ ಅಪಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.

ಇದನ್ನೂಓದಿ:ನೀತಿ ಸಂಹಿತೆ ಉಲ್ಲಂಘನೆ ಆರೋಪ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಸಮನ್ಸ್ ಜಾರಿ - Summons To Lakshmi Hebbalkar

Last Updated : Mar 29, 2024, 7:32 PM IST

ABOUT THE AUTHOR

...view details