ಹಾವೇರಿ:ಕುಮಾರಣ್ಣ ಹತಾಶರಾಗಿದ್ದಾರೆ. ದಿನಕ್ಕೊಂದು ಸ್ಟ್ಯಾಂಡ್ ಚೇಂಜ್ ಮಾಡ್ತಿದ್ದಾರೆ. ರೇವಣ್ಣ ಮುಹೂರ್ತ ಇಟ್ಟುಕೊಂಡು ಕ್ಯಾಸೆಟ್ ಬಿಡುಗಡೆ ಮಾಡಲಿ. ನಾನು ಎಲ್ಲದಕ್ಕೂ ರೆಡಿಯಾಗಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ರಾಣೇಬೆನ್ನೂರಿನಲ್ಲಿ ಇಂದು ಮಾತನಾಡಿದ ಅವರು, ಒಂದು ದಿನ ಉಪ್ಪು ತಿಂದವರು ನೀರು ಕುಡೀಲೇಬೇಕು ಅಂತಾರೆ. ಮತ್ತೊಂದಿನ ಅವರ ಫ್ಯಾಮಿಲಿ ಬೇರೆ, ನಮ್ಮ ಫ್ಯಾಮಿಲಿ ಬೇರೆ ಅಂತಾರೆ. ಒಂದಿನ ಕುಟುಂಬದವರಿಗೆ ಟಿಕೆಟ್ ಕೊಡಲ್ಲ ಅಂದ್ರು, ಹಿಂದೆಲ್ಲಾ ಬಿಜೆಪಿಯವರಿಗೆ ಬೈಯ್ದಿದ್ದರು. ಒಂದಿನ ನನ್ನ 420 ಅಂತಾ ಹೇಳ್ತಿದ್ರು. ಅವರು ಕೋಪದಲ್ಲಿದ್ದಾರೆ, ಶಾಂತವಾಗಲಿ. ಆಮೇಲೆ ಚರ್ಚೆ ಮಾಡೋಣ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರನ್ನು ದೇವರಾಜೇಗೌಡ ಭೇಟಿ ಮಾಡಿದ್ದಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಪೊಲೀಸರು ಮತ್ತೊಂದು ಎಫ್ಐಆರ್ ಹಾಕಿದ್ದಾರೆಂದು ಕೇಳಿದ್ದೀನಿ. ಪೊಲೀಸರ ಹತ್ತಿರ ನಾವ್ಯಾಕೆ ಕೇಳೋಣ. ಮಾಧ್ಯಮದಲ್ಲಿ ಬಂದಿದ್ದನ್ನು ನೋಡಿದ್ದೀವಿ. ನನಗೆ ಉತ್ತರ ಬೇಕಾಗಿರುವುದು ಲೋಕಲ್ ಬಿಜೆಪಿ ಲೀಡರ್ಗಳ ಕಡೆಯಿಂದ. ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಪಾಪ ಕುಮಾರಸ್ವಾಮಿ ಒಬ್ಬರ ಕೈಯಲ್ಲಿ ಯಾಕೆ ಮಾತನಾಡಿಸ್ತೀರಿ?. ನಿಮ್ಮ ಪಾರ್ಟ್ನರ್ ಅಲ್ವಾ ಕುಮಾರಸ್ವಾಮಿ?. ರಾಜಕಾರಣ ಇದು, ರಾಜಕಾರಣ ಅಂದ ಮೇಲೆ ಎಲ್ಲವನ್ನೂ ಬಳಸಿಕೊಳ್ಳೋದೇ ಎಂದರು.
ಕ್ಯಾಸೆಟ್ ವಿಚಾರವಾಗಿ ಮಾತನಾಡಿ, ರೇವಣ್ಣನವರು ಮುಹೂರ್ತ ಇಟ್ಟುಕೊಂಡು ಕ್ಯಾಸೆಟ್ ಬಿಡುಗಡೆ ಮಾಡಲಿ. ನಾನು ಎಲ್ಲದಕ್ಕೂ ರೆಡಿಯಾಗಿದ್ದೇನೆ. ಕ್ಯಾಸೆಟ್ ಬಿಡುಗಡೆ ಮಾಡಲು ಯಾರು ಬೇಡ ಅಂತಾ ಹೇಳಿದ್ದಾರೆ. ಅವರ ತಂದೆ ಹೇಳ್ತಿದ್ರು ಅದ್ಯಾವುದೋ ಒಂಭತ್ತು ವರ್ಷದ ಹೆಣ್ಣು ಮಗಳು ಅಂತಾ. ಅದನ್ನು ಯಾಕೆ ಇನ್ನೂ ರಿಲೀಸ್ ಮಾಡಲಿಲ್ಲ. ಟೈಂ ಫಿಕ್ಸ್ ಮಾಡಲಿ. ಸುಮ್ಮನೆ ಖಾಲಿ ಮಾತನಾಡೋದು ಬೇಡ. ನಾವು ಗಂಡಸರಲ್ಲ, ಅವರೇ ಗಂಡಸರು. ನಮಗ್ಯಾರಿಗೂ ತಾಕತ್ ಇಲ್ಲ, ಅವರಿಗಿರುವ ತಾಕತ್ ನಮಗಿಲ್ಲ ಎಂದು ಡಿಕೆಶಿ ಹೇಳಿದರು.