ಕರ್ನಾಟಕ

karnataka

ETV Bharat / state

ಹಾವೇರಿ: 50ಕ್ಕೂ ಹೆಚ್ಚು ಆಡು, ಕುರಿಗಳ ಬಲಿ ಪಡೆದಿದ್ದ ಚಿರತೆ ಸೆರೆ - LEOPARD CAPTURED

ಗ್ರಾಮದ ಇಬ್ಬರು ರೈತರಿಗೆ ಸೇರಿದ 50ಕ್ಕೂ ಹೆಚ್ಚು ಕುರಿಗಳು ಹಾಗೂ ಆಡುಗಳ ಮೇಲೆ ಈ ಚಿರತೆ ದಾಳಿ ಮಾಡಿತ್ತು.

LEOPARD CAPTURED
ಸೆರೆಯಾದ ಚಿರತೆ (ETV Bharat)

By ETV Bharat Karnataka Team

Published : Feb 8, 2025, 10:36 PM IST

ಹಾವೇರಿ : ಕುರಿದೊಡ್ಡಿಯಲ್ಲಿದ್ದ ಆಡು ಮತ್ತು ಕುರಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯನ್ನು ಹಿಡಿಯುವಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ರಾಣೆಬೆನ್ನೂರು ತಾಲ್ಲೂಕಿನ ರಾಹುನತಕಟ್ಟಿ ಬಳಿ ಬೋನು ಇರಿಸಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ಮಡ್ಲೇರಿ‌ ಗ್ರಾಮದ ಭರಮಪ್ಪ ಮೈಲಪ್ಪ ದೊಡ್ಡಬಡ್ಡಾಳರ ಮತ್ತು ತಿರುಕಪ್ಪ ಹುಚ್ಚಪ್ಪ ದೊಡ್ಡಬಡ್ಡಾಳರ ಅವರಿಗೆ ಸೇರಿದ ಕುರಿದೊಡ್ಡಿಯಲ್ಲಿದ್ದ 50ಕ್ಕೂ ಹೆಚ್ಚು ಆಡು ಮತ್ತು ಕುರಿಗಳ ಮೇಲೆ ಈ ಚಿರತೆ ದಾಳಿ ಮಾಡಿತ್ತು. ಚಿರತೆ ದಾಳಿಯಿಂದ ಕುರಿಗಳು ಸಾವನ್ನಪ್ಪಿದ್ದವು. ಆಗ ಚಿರತೆ ಸೆರೆ ಹಿಡಿಯಲು ಬೋನ್ ಇಡಲಾಗಿತ್ತು. ಆದರೆ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಇದರಿಂದ ಕುರಿಗಾಹಿಗಳಿಗೆ ಆತಂಕ ಉಂಟಾಗಿತ್ತು. ಈಗ ಚಿರತೆ ಸೆರೆಯಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ದೂರದ ಅರಣ್ಯಕ್ಕೆ ಚಿರತೆಯನ್ನು ಬಿಟ್ಟುಬಂದಿದ್ದಾರೆ. ಚಿರತೆ ಕಾಟದಿಂದ ಬೇಸತ್ತಿದ ಜನರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಒಂದೇ ರಾತ್ರಿ ಎರಡು ನಾಯಿಗಳನ್ನು ಕೊಂದ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ABOUT THE AUTHOR

...view details