ಕರ್ನಾಟಕ

karnataka

ETV Bharat / state

ಮೈಸೂರು : ಮೂರನೇ ದಿನವೂ ಇನ್ಫೋಸಿಸ್‌ ಕ್ಯಾಂಪಸ್​​ನಲ್ಲಿ ಚಿರತೆ ಸೆರೆ ಕಾರ್ಯಾಚರಣೆ! - SEARCH FOR LEOPARD

ಇನ್ಫೋಸಿಸ್‌ ಕ್ಯಾಂಪಸ್​ನ ಸಿಸಿಟಿವಿಯಲ್ಲಿ ಚಿರತೆಯ ಚಲನವಲನ ಪತ್ತೆಯಾಗಿದ್ದು, ಅದರ ಸೆರೆಗೆ ಅರಣ್ಯ ಇಲಾಖೆಯು ಕಾರ್ಯಾಚರಣೆ ಮುಂದುವರೆಸಿದೆ.

SEARCH FOR LEOPARD
ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಸಿಬ್ಬಂದಿ (ETV Bharat)

By ETV Bharat Karnataka Team

Published : Jan 4, 2025, 8:09 AM IST

Updated : Jan 4, 2025, 8:39 AM IST

ಮೈಸೂರು: ಇನ್ಫೋಸಿಸ್‌ ಆವರಣದಲ್ಲಿ ಕಾಣಿಸಿಕೊಂಡಿದೆ ಎನ್ನಲಾದ ಚಿರತೆ ಸೆರೆ ಕಾರ್ಯಾಚರಣೆ ಮೂರನೇ ದಿನವೂ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ಈ ಕಾರ್ಯಾಚರಣೆ ನಡೆಯುತ್ತಿದ್ದು, ಚಿರತೆಯ ಚಲನವಲನದ ಬಗ್ಗೆ ಈವರೆಗೆ ಸುಳಿವು ಕಂಡುಬಂದಿಲ್ಲ. ಆದರೆ, ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಚಿರತೆ ಸೆರೆ ಕಾರ್ಯಪಡೆ, ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಡಿಸೆಂಬರ್‌ 31ರ ಬೆಳಗಿನ ಜಾವ ಮೈಸೂರಿನ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ಸುಮಾರು 350 ಎಕರೆ ವಿಸ್ತೀರ್ಣದ ಇನ್ಫೋಸಿಸ್‌ ಕ್ಯಾಂಪಸ್​ನಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು, ಇದರ ಸೆರೆಗಾಗಿ ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆ, ಆನೆ ಕಾರ್ಯಪಡೆ, ಸಿಬ್ಬಂದಿ ಹಾಗೂ ಮೈಸೂರು ಅರಣ್ಯ ಇಲಾಖೆಯ ಒಟ್ಟು 80 ಸಿಬ್ಬಂದಿ ಚಿರತೆಯ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ಇನ್ಫೋಸಿಸ್ ಕ್ಯಾಂಪಸ್‌ನ ಸಿಸಿಟಿವಿಯಲ್ಲಿ ಮಾತ್ರ ಚಿರತೆ ಕಾಣಿಸಿಕೊಂಡಿದೆ. ಆದರೆ, ಅರಣ್ಯ ಇಲಾಖೆಯ ಡ್ರೋನ್​ ಕ್ಯಾಮರಾ, ಟ್ಯ್ರಾಪ್‌ ಕ್ಯಾಮರಾ, ಕ್ಯಾಂಪಸ್​ನಲ್ಲಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಆಗಲಿ ಅಥವಾ ಹೆಜ್ಜೆ ಗುರುತುಗಳಾಗಲಿ ಕಂಡು ಬಂದಿಲ್ಲ. ಆದರೂ ಚಿರತೆ ಕಾರ್ಯಪಡೆಯನ್ನ ಹಾಗೂ ಟ್ಯ್ರಾಪ್‌ ಕ್ಯಾಮರಾಗಳನ್ನ ಚಿರತೆ ಸೆರೆಗಾಗಿ ಮುಂದುವರೆಸಲಾಗಿದೆ. ಇದರ ಜತೆಗೆ ಕ್ಯಾಂಪಸ್​ಗೆ ಹೊಂದಿಕೊಂಡಂತೆ ಇರುವ ಪ್ರದೇಶಗಳಲ್ಲೂ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಪ್ರತ್ಯಕ್ಷ: ಅರಣ್ಯ ಇಲಾಖೆಯಿಂದ ಸೆರೆ ಕಾರ್ಯಾಚರಣೆ - LEOPARD SPOTTED

ಎಚ್ಚರಿಕೆಯಿಂದ ಇರುವಂತೆ ಸೂಚನೆ:350 ಎಕರೆ ವಿಸ್ತೀರ್ಣದ ಬೃಹತ್‌ ಇನ್ಫೋಸಿಸ್ ಕ್ಯಾಂಪಸ್ ಇದಾಗಿದ್ದು, ಸಾವಿರಾರು ಮಂದಿ‌ ದೇಶ, ವಿದೇಶಗಳಿಂದ ತರಬೇತಿಗೆ ಬಂದ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಜೊತೆಗೆ ಕ್ಯಾಂಪಸ್​ನಲ್ಲಿ ಸಿಬ್ಬಂದಿಯೂ ಇದ್ದು, ಎಲ್ಲರೂ ಮುಂಜಾಗ್ರತೆ ವಹಿಸಬೇಕು.‌ ಯಾರೂ ಸಹ ಕ್ಯಾಂಪಸ್​​ನ ಒಳಗೆ ಸುಮ್ಮನೆ ಓಡಾಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Last Updated : Jan 4, 2025, 8:39 AM IST

ABOUT THE AUTHOR

...view details