ಕರ್ನಾಟಕ

karnataka

ETV Bharat / state

ನೆಲಮಂಗಲ: ಶಿವಗಂಗೆ ಬೆಟ್ಟದ ತಪ್ಪಲಲ್ಲಿ ಮಹಿಳೆ ಕೊಂದ ಚಿರತೆ ಸೆರೆ

ನವೆಂಬರ್ 18ರ ಭಾನುವಾರ ಸಂಜೆ ಕರಿಯಮ್ಮ ಎಂಬ ಮಹಿಳೆಯನ್ನು ಚಿರತೆ ತಿಂದು ಹಾಕಿತ್ತು. ಅಂದಿನಿಂದಲೂ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇಂದು ಒಂದು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಶಿವಗಂಗೆಯ ಬೆಟ್ಟದ ತಪ್ಪಲಲ್ಲಿ ಬೋನಿಗೆ ಬಿದ್ದ ಚಿರತೆ
ಶಿವಗಂಗೆಯ ಬೆಟ್ಟದ ತಪ್ಪಲಲ್ಲಿ ಬೋನಿಗೆ ಬಿದ್ದ ಚಿರತೆ (ETV Bharat)

By ETV Bharat Karnataka Team

Published : Nov 25, 2024, 1:30 PM IST

ನೆಲಮಂಗಲ(ಬೆಂ.ಗ್ರಾಮಾಂತರ): ಮೇವು ಕೊಯ್ಯಲು ಹೋಗಿದ್ದ ಕರಿಯಮ್ಮ ಎಂಬ ಮಹಿಳೆಯ ರುಂಡ ತಿಂದು ಹಾಕಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಳೆದೊಂದು ವಾರದಿಂದಲೂ ಕಾರ್ಯಾಚರಣೆ ನಡೆಸುತ್ತಿತ್ತು. ಕೊನೆಗೂ ಇಂದು ಬೆಳಗ್ಗೆ 8:30ಕ್ಕೆ ಇಲಾಖೆ ಇಟ್ಟಿದೆ ಬೋನಿಗೆ ಚಿರತೆ ಬಿದ್ದಿದೆ. ಆದರೆ ಇದೇ ಚಿರತೆ ಮಹಿಳೆಯನ್ನು ಬಲಿ ಪಡೆದಿತ್ತಾ? ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ನವೆಂಬರ್ 18ರ ಭಾನುವಾರ ಸಂಜೆ 5:30ರ ಸುಮಾರಿಗೆ ಚಿರತೆ ಮಹಿಳೆಯನ್ನು ಕೊಂದು ಹಾಕಿತ್ತು. ಶಿವಗಂಗೆ ಬೆಟ್ಟದ ತಪ್ಪಲಲ್ಲಿರುವ ಕಂಬಾಳು ಗೊಲ್ಲರಹಳ್ಳಿಯಲ್ಲಿ ನಡೆದ ಈ ಘಟನೆ ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಸುತ್ತಮುತ್ತಲ ಗ್ರಾಮಸ್ಥರು ಹೊಲ-ಗದ್ದೆಗಳಿಗೆ ಹೋಗಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಹಿಳೆಯನ್ನು ಬಲಿ ಪಡೆದಿದ್ದ ಚಿರತೆ ಸೆರೆ ಹಿಡಿಯಲು ಬೆಂಗಳೂರು ಗ್ರಾಮಾಂತರ ಜಿಲ್ಲಾ ಡಿ.ಎಫ್.ಒ ಡಿಎಫ್ಒ ಸೆರೀನಾ ಸಿಕ್ಕಲಿಗಾರ್ ನೇತೃತ್ವದಲ್ಲಿ ಚಿರತೆ ಸೆರೆಗಾಗಿ ಕಳೆದೊಂದು ವಾರದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಬೆಟ್ಟದ ತಪ್ಪಲಲ್ಲಿರುವ ಮುದ್ವೀಶ್ವರ ದೇವಾಲಯದ ಬಳಿ ಇಟ್ಟಿದ್ದ ದೊಡ್ಡ ಬೋನಿಗೆ ಚಿರತೆ ಬಿದ್ದಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ:ನೆಲಮಂಗಲ: ಮಹಿಳೆ ಬಲಿ ಪಡೆದಿದ್ದ ಚಿರತೆ ಸೆರೆಗಾಗಿ ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆ

ಇದನ್ನೂ ಓದಿ:ನೆಲಮಂಗಲ: ಮಹಿಳೆ ಮೇಲೆ ದಾಳಿ ಮಾಡಿ ರುಂಡ ಹೊತ್ತೊಯ್ದ ಚಿರತೆ

ABOUT THE AUTHOR

...view details