ಕರ್ನಾಟಕ

karnataka

ETV Bharat / state

ನನ್ನ ಅವಧಿಯಲ್ಲೇ 11 ಜನರ ರಾಜೀನಾಮೆ: 2-3 ದಿನಗಳಲ್ಲಿ ಮತ್ತೊಬ್ಬರು ರಾಜೀನಾಮೆ; ಹೊರಟ್ಟಿ - MLC resignation - MLC RESIGNATION

ಎರಡ್ಮೂರು ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಸಭಾಪತಿ ಬಸವರಾಜ್​ ಹೊರಟ್ಟಿ ಹೇಳಿದ್ದಾರೆ.

2-3 ದಿನಗಳಲ್ಲಿ ಮತ್ತೊಬ್ಬರು ರಾಜೀನಾಮೆ ನೀಡಲಿದ್ದಾರೆ: ಬಸವರಾಜ್​ ಹೊರಟ್ಟಿ
2-3 ದಿನಗಳಲ್ಲಿ ಮತ್ತೊಬ್ಬರು ರಾಜೀನಾಮೆ ನೀಡಲಿದ್ದಾರೆ: ಬಸವರಾಜ್​ ಹೊರಟ್ಟಿ

By ETV Bharat Karnataka Team

Published : Mar 21, 2024, 4:50 PM IST

Updated : Mar 21, 2024, 8:57 PM IST

ಸಭಾಪತಿ ಬಸವರಾಜ್​ ಹೊರಟ್ಟಿ

ಹುಬ್ಬಳ್ಳಿ:ನನ್ನ ಸಭಾಪತಿ ಅಧಿಕಾರದ ಅವಧಿಯಲ್ಲಿಯೇ 11 ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದು ಕರ್ನಾಟಕ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆಯಾಗಿದೆ. ಅಲ್ಲದೇ ಎರಡು ಮೂರು ದಿನದಲ್ಲಿ ಮತ್ತೊಬ್ಬ ಸದಸ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿಂದು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅವರು, ಈಗಾಗಲೇ ಎಂಟು ಬಾರಿ ಗೆಲುವು ಸಾಧಿಸಿ ದಾಖಲೆ ಮಾಡಿದ್ದೆ. ಆದರೆ ಈಗ ನಾನು ಸಭಾಪತಿ ಆಗಿರುವಾಗಲೇ ಹನ್ನೊಂದು ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರು.

2018ರಲ್ಲಿ ವಿ.ಎಸ್.ಉಗ್ರಪ್ಪ, 2021ರಲ್ಲಿ ಶ್ರೀನಿವಾಸ ಮಾನೆ, ಸಿ.ಆರ್.ಮನೋಹರ, 2022ರಲ್ಲಿ ಸಿ.ಎಂ.ಇಬ್ರಾಹಿಂ, 2023ರಲ್ಲಿ ಪುಟ್ಟಣ್ಣ, ಬಾಬುರಾವ್ ಚಿಂಚನಸೂರ್, ಆರ್.ಶಂಕರ್, ಸವದಿ ಲಕ್ಷ್ಮಣ, ಆಯನೂರು ಮಂಜುನಾಥ್, 2024ರಲ್ಲಿ ಜಗದೀಶ್ ಶೆಟ್ಟರ್, ಮರಿತಿಬ್ಬೇಗೌಡ ಸೇರಿದಂತೆ ಒಟ್ಟು ಹನ್ನೊಂದು ಜನರು ರಾಜೀನಾಮೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಇನ್ನೊಬ್ಬ ಸದಸ್ಯ ರಾಜೀನಾಮೆ ನೀಡಲಿದ್ದಾರೆ. ಎರಡು ವಿಧವಾಗಿ ರಾಜೀನಾಮೆ ನೀಡಬಹುದಾಗಿದೆ. ಅದು ಹೇಗೆ ಇರಲಿ ಒಬ್ಬ ಸದಸ್ಯ ಮಾತ್ರ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೈ ತಪ್ಪಿದ ಬಿಜೆಪಿ ಟಿಕೆಟ್​: ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಸ್ವಾಭಿಮಾನಿ ಸಮಾವೇಶ - MP SANGANNA KARADI

Last Updated : Mar 21, 2024, 8:57 PM IST

ABOUT THE AUTHOR

...view details