ರಾಮನಗರ :ವಕೀಲರ ಮೇಲಿನ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಪ್ರತಿಭಟನೆ ಮುಂದುವರೆದಿದೆ. ಇಂದು ಕೂಡ ಜಿಲ್ಲಾಧಿಕಾರಿ ಕಚೇರಿ ಬಂದ್ ಮಾಡಿದ ವಕೀಲರು, ಪಿಎಸ್ಐ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದಾರೆ.
ಜಿಲ್ಲಾಧಿಕಾರಿ ಅವಿನಾಶ್ ಮೆನನ್ ವಿರುದ್ಧ ವಕೀಲರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಸ್ಐ ಮೇಲೆ ಕ್ರಮ ಕೈಗೊಳ್ಳದ ಎಸ್ಪಿ ವಿರುದ್ಧವೂ ಘೋಷಣೆ ಕೂಗಲಾಗಿದೆ. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದು ವಕೀಲರ ಮನವೊಲಿಸಲು ಎಸ್ಪಿ ಮುಂದಾದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ. ಪಿಎಸ್ಐ ಅವರು 40 ವಕೀಲರ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ. ಈ ಬಗ್ಗೆ ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮೂರು ದಿನಗಳ ಒಳಗಾಗಿ ತನಿಖೆ ನಡೆಸುತ್ತೇವೆ. ಅದರಲ್ಲಿ ಪಿಎಸ್ಐ ತಪ್ಪು ಕಂಡುಬಂದರೆ ಖಂಡಿತಾ ಕ್ರಮ ಎಂದರೂ ಕೂಡ ವಕೀಲರು ಎಸ್ಪಿ ಮಾತಿಗೂ ಜಗ್ಗದೆ ಪಿಎಸ್ಐ ವಿರುದ್ಧ ಆಕ್ರೋಶಗೊಂಡರು.